ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರ: ರಿಯಾಯಿತಿ ದರದಲ್ಲಿ ಗೃಹೋಪಯೋಗಿ ಉಪಕರಣ

ಡಿಸಿಸಿ ಬ್ಯಾಂಕ್‌ನ ನೂತನ ಯೋಜನೆ: ಎಸ್‌ಎಫ್‌ಸಿಎಸ್‌ ಮೂಲಕ ಮಾರಾಟ
Last Updated 15 ನವೆಂಬರ್ 2019, 22:50 IST
ಅಕ್ಷರ ಗಾತ್ರ

ಕೋಲಾರ: ಮಹಿಳಾ ಸ್ವಸಹಾಯ ಸಂಘಗಳ ಸದಸ್ಯರ ಮನೆಗೆ ಅಗತ್ಯವಿರುವ ಗೃಹೋಪಯೋಗಿ ಉಪಕರಣಗಳನ್ನು ರೇಷ್ಮೆ ಬೆಳೆಗಾರರ ಮತ್ತು ರೈತರ ಸೇವಾ ಸಹಕಾರ ಸಂಘಗಳ (ಎಸ್‌ಎಫ್‌ಸಿಎಸ್‌) ಮೂಲಕ ಶೂನ್ಯ ಬಡ್ಡಿ ಸಾಲದೊಂದಿಗೆ ರಿಯಾಯಿತಿ ದರದಲ್ಲಿ ಕಲ್ಪಿಸಲು ಡಿಸಿಸಿ ಬ್ಯಾಂಕ್ ಯೋಜನೆ ರೂಪಿಸಿದೆ.

ರೈತರು, ಮಹಿಳೆಯರು ಪ್ರತಿಷ್ಠಿತ ಕಂಪನಿಗಳ ಗೃಹೋಪಯೋಗಿ ಉಪಕರಣಗಳನ್ನು ಎಸ್‌ಎಫ್‌ಸಿಎಸ್‌ಗಳಿಂದ ಖರೀದಿಸಿದರೆ ಮಾರುಕಟ್ಟೆ ಬೆಲೆಗಿಂತ ಕಡಿಮೆ ದರದಲ್ಲಿ ಬಡ್ಡಿರಹಿತ ಸಾಲ ಸೌಲಭ್ಯದೊಂದಿಗೆ ನೀಡಲು ಬ್ಯಾಂಕ್ ಅವಕಾಶ ಮಾಡಿಕೊಟ್ಟಿದೆ.

ಫ್ರಿಡ್ಜ್‌, ಟಿ.ವಿ, ವಾಷಿಂಗ್ ಮೆಷಿನ್‌, ಹೊಲಿಗೆ ಯಂತ್ರ, ಫ್ಯಾನ್, ಯುಪಿಎಸ್, ಗ್ರೈಂಡರ್, ಮಿಕ್ಸಿ ಸೇರಿದಂತೆ ಹಲವು ಗೃಹೋಪಯೋಗಿ ಉಪಕರಣಗಳು ಸಂಘಗಳಲ್ಲಿ ಲಭ್ಯವಾಗಲಿವೆ. ಎಲ್‌ಜಿ, ಪ್ರೆಸ್ಟೀಜ್‌, ಸೋನಿ, ಉಷಾ, ವರ್ಲ್‌ಫುಲ್‌ ಸೇರಿದಂತೆ ಪ್ರತಿಷ್ಠಿತ ಕಂಪನಿಗಳ ಉಪಕರಣಗಳು ದೊರೆಯಲಿವೆ. ಕೋಲಾರ ತಾಲ್ಲೂಕಿನ ಅಣ್ಣಿಹಳ್ಳಿ ಎಸ್‌ಎಫ್‌ಸಿಎಸ್‌ನಲ್ಲಿ ಪ್ರಾಯೋಗಿಕವಾಗಿ ಈ ಯೋಜನೆಗೆ ಚಾಲನೆ ನೀಡಲಾಗಿದೆ.

ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆ ವ್ಯಾಪ್ತಿಯ ಎಸ್‌ಎಫ್‌ಸಿಎಸ್‌ಗಳಲ್ಲಿ ಗೃಹೋಪಯೋಗಿ ಉಪಕರಣ ಮಾರಾಟ ಮಾಡಲಾಗುತ್ತದೆ. ಮಹಿಳಾ ಸ್ವಸಹಾಯ ಸಂಘಗಳು, ಎಸ್‌ಎಫ್‌ಸಿಎಸ್‌ಗಳಲ್ಲಿ ಷೇರು ಹಣ ಕಟ್ಟಿ ಸದಸ್ಯರಾದವರು ಉಪಕರಣ ಖರೀದಿಗೆ ಅರ್ಹರು.

ಖರೀದಿದಾರರ ಮನೆಗೆ ಉಚಿತವಾಗಿ ಉಪಕರಣ ಕಳುಹಿಸಲಾಗುತ್ತದೆ. ಸಾಲದ ಕಂತಿನ ಹಣವನ್ನು ಡಿಸಿಸಿ ಬ್ಯಾಂಕ್ ಸಿಬ್ಬಂದಿ ವಸೂಲಿ ಮಾಡುತ್ತಾರೆ. ಯಾವುದೇ ಉಪಕರಣ ಖರೀದಿಗೆ ಮುಂಗಡ ಹಣ ಪಾವತಿಸಬೇಕಿಲ್ಲ. ಜತೆಗೆ ಉಪಕರಣ ಖರೀದಿಗೆ ನಿರ್ಬಂಧವಿಲ್ಲ. ಕಂಪನಿಯಿಂದ ದೊರೆಯುವ ಸರ್ವಿಸ್‌ ಮತ್ತು ವ್ಯಾರೆಂಟಿ ಸೇವೆ ಸಹ ನೀಡಲಾಗುತ್ತದೆ.

*
ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 200 ಎಸ್‌ಎಫ್‌ಸಿಎಸ್‌ಗಳಿವೆ. ಈ ಸಂಘಗಳಲ್ಲಿ ವಾರದೊಳಗೆ ಗೃಹೋಪಯೋಗಿ ಉಪಕರಣಗಳ ವಹಿವಾಟು ಆರಂಭಿಸುತ್ತೇವೆ.
–ಎಂ.ಗೋವಿಂದಗೌಡ, ಡಿಸಿಸಿ ಬ್ಯಾಂಕ್‌ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT