ಸಾಲದಲ್ಲಿ ಖರೀದಿ: ‘ಲೋಕಸಭಾ ಚುನಾವಣೆ ಘೋಷಣೆಯಾಗುವುದಕ್ಕೂ ಮುನ್ನ ಫೆ.15ರಂದೇ ₹ 1 ಲಕ್ಷ ಮುಂಗಡ ಹಣ ಕೊಟ್ಟು ಹೊಸ ಕಾರು ಬುಕ್ಕಿಂಗ್ ಮಾಡಿದ್ದೆ. ಆದರೆ, ಸಕಾಲಕ್ಕೆ ಬ್ಯಾಂಕ್‌ನಿಂದ ವಾಹನ ಸಾಲ ಸಿಗಲಿಲ್ಲ. ಈಗ ಕರ್ಣಾಟಕ ಬ್ಯಾಂಕ್‌ನಲ್ಲಿ ₹ 28 ಲಕ್ಷ ವಾಹನ ಸಾಲ ಮಂಜೂರಾಗಿದ್ದು, ಆ ಹಣದಲ್ಲಿ ಕಾರು ಖರೀದಿಸಿದ್ದೇನೆ. ಪ್ರತಿ ತಿಂಗಳು ₹ 46,339 ಸಾಲದ ಕಂತು ಕಟ್ಟಬೇಕಿದೆ’ ಎಂದು ವಿವರಿಸಿದರು.