ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಲೂರು | 65 ಅಡಿ ಎತ್ತರದ ಧ್ವಜಸ್ತಂಭ ಉದ್ಘಾಟನೆ

Published 15 ಆಗಸ್ಟ್ 2023, 16:21 IST
Last Updated 15 ಆಗಸ್ಟ್ 2023, 16:21 IST
ಅಕ್ಷರ ಗಾತ್ರ

ಮಾಲೂರು: ಪ್ರತಿಯೊಬ್ಬರು ದೇಶಕಟ್ಟುವ ಕೆಲಸಕ್ಕೆ ಮುಂದಾಗುವಂತೆ ಶಾಸಕ ಕೆ.ವೈ ನಂಜೇಗೌಡ ಹೇಳಿದರು.

ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕ್ರೀಡಾಂಗಣದಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ತಾಲ್ಲೂಕು ಆಡಳಿತ ದಾನಿಗಳ ಸಹಕಾರದಿಂದ ನಿರ್ಮಿಸಿರುವ 65 ಅಡಿ ಎತ್ತರದ ಧ್ವಜಸ್ತಂಭ ಉದ್ಘಾಟಿಸಿ ಮಾತನಾಡಿದರು.

ಸರ್ಕಾರಿ ಶಾಲಾ ಮಕ್ಕಳಿಗೆ ಶಿಸ್ತು ಹಾಗೂ ಉತ್ತಮ ಗುಣಮಟ್ಟದ ಶಿಕ್ಷಣ ನೀಡಲು ಜನಪ್ರತಿನಿಧಿಗಳು ಶಿಕ್ಷಣ ಇಲಾಖೆ ಮುಂದಾಗಬೇಕು.
ದೇಶ ಕಟ್ಟುವ ಹೊಣೆ ನಮ್ಮದು. ಸ್ವಾತಂತ್ರ್ಯ ಹೋರಾಟಗಾರರ ಆದರ್ಶ ಅಳವಡಿಸಿ ದೇಶ ಕಟ್ಟುವ ಕೆಲಸ ಮಾಡಬೇಕು ಎಂದರು.

ಸಾವಿರ ಕೋಟಿ ವೆಚ್ಚದಲ್ಲಿ ದೇವನಹಳ್ಳಿಯಿಂದ ಸಂಪಂಗೆರೆ ಗಡಿಯವರಿಗೆ, ಮಾಲೂರು ಪಟ್ಟಣದಿಂದ ಹೊಸಕೋಟೆವರೆಗೆ ಒಟ್ಟು 123 ಕಿಲೋಮೀಟರ್ ರಸ್ತೆಗೆ ಬಜೆಟ್‌ನಲ್ಲಿ ಹಣ ನಿಗದಿಪಡಿಸಿ ಡಿಪಿಆರ್ ಸಿದ್ಧವಾಗುತ್ತಿದೆ ಎಂದರು.

ತಹಶೀಲ್ದಾರ್ ಕೆ.ರಮೇಶ, ಗ್ರೇಡ್ 2 ತಹಶೀಲ್ದಾರ್ ಹರಿಪ್ರಸಾದ್, ಸರ್ಕಾರಿ ನೌಕರ ಸಂಘದ ಅಧ್ಯಕ್ಷ ವಿ.ಮುನೇಗೌಡ, ಬಿಇಒ ಚಂದ್ರಕಲಾ, ರತ್ನಮ್ಮ ನಂಜೇಗೌಡ, ಆರ್.ವೆಂಕಟೇಶ, ಜಾಕೀರ್ ಖಾನ್, ಇಂತಿಯಾಜ್ ಖಾನ್, ಎ.ರಾಜಪ್ಪ, ಪರಮೇಶ್, ವಿಜಯಲಕ್ಷ್ಮಿ, ಮದುಸೂಧನ್, ವಿಜಯ ನರಸಿಂಹ, ಎಂ.ವಿ ಹನುಮಂತಯ್ಯ, ಚೈತ್ರ, ಹೇಮಾ, ಕೋಮಲ, ಧನಲಕ್ಷ್ಮಿ ಇದ್ದರು.

ಮಾಲೂರಿನಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಮಾರ್ಚ್‌ಫಾಸ್ಟ್‌ನಲ್ಲಿ ಪ್ರಥಮ ಬಹುಮಾನ ಪಡೆದ ಯೂನಿಕ್ ಇಂಟರ್ ನ್ಯಾಷನಲ್ ಶಾಲಾ ಮಕ್ಕಳಿಗೆ ಶಾಸಕ ಕೆ.ವೈ.ನಂಜೇಗೌಡರು ಬಹಮಾನ ವಿತರಿಸಿದರು
ಮಾಲೂರಿನಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಮಾರ್ಚ್‌ಫಾಸ್ಟ್‌ನಲ್ಲಿ ಪ್ರಥಮ ಬಹುಮಾನ ಪಡೆದ ಯೂನಿಕ್ ಇಂಟರ್ ನ್ಯಾಷನಲ್ ಶಾಲಾ ಮಕ್ಕಳಿಗೆ ಶಾಸಕ ಕೆ.ವೈ.ನಂಜೇಗೌಡರು ಬಹಮಾನ ವಿತರಿಸಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT