ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣೆ ಕರ್ತವ್ಯಕ್ಕೆ ಬಂದ ಬಿಎಸ್‌ಎಫ್ ಯೋಧರಿಗೆ ಜನರಿಂದ ಹೂಮಳೆ ಸ್ವಾಗತ

Last Updated 6 ಏಪ್ರಿಲ್ 2023, 14:15 IST
ಅಕ್ಷರ ಗಾತ್ರ

ಕೋಲಾರ: ಚುನಾವಣಾ ಕರ್ತವ್ಯಕ್ಕೆಂದು ಕೇಂದ್ರದಿಂದ ನಿಯೋಜಿಸಿರುವ ಬಿಎಸ್‌ಪಿ ಯೋಧರು ಗುರುವಾರ ನಗರಕ್ಕೆ ಬಂದಿದ್ದು, ಸಾರ್ವಜನಿಕರು ಹೂಮಳೆಯ ಸ್ವಾಗತ ಕೋರಿದರು.

‘ಯೋಧರಿಗೆ ಜಯವಾಗಲಿ’ ಎಂದು ಘೋಷಣೆ ಕೂಗಿದರು. ಬಿಎಸ್‌ಎಫ್‌ ಪಡೆಗಳು ಹಾಗೂ ಪೊಲೀಸರಿಂದ ನಗರದ ಪ್ರಮುಖ ರಸ್ತೆಗಳಲ್ಲಿ ರೂಟ್‌ ಮಾರ್ಚ್‌ ನಡೆಯಿತು. ಮುಸ್ಲಿಂ ಮುಖಂಡರು ಯೋಧರಿಗೆ ಗುಲಾಬಿ ಹೂವು ನೀಡಿದರು. ಬಿಜೆಪಿ ಕಾರ್ಯಕರ್ತೆಯರು ಆರತಿ ಬೆಳಗಿದರು. ಕೆಲವರು ಕುಂಬಳಕಾಯಿ ಒಡೆದು ದೃಷ್ಟಿ ತೆಗೆದರು.

ಅರಹಳ್ಳಿ ಗೇಟ್‌ನಿಂದ ರೂಟ್‌ ಮಾರ್ಚ್‌ ಆರಂಭವಾಯಿತು. ಶ್ರೀನಿವಾಸಪುರ ವೃತ್ತ, ಅಮ್ಮವಾರಿಪೇಟೆ ವೃತ್ತ, ಹೊಸ ಬಸ್‌ ನಿಲ್ದಾಣ, ಕ್ಲಾಕ್‌ ಟವರ್‌, ಡೂಂ ಲೈಟ್ ವೃತ್ತ, ಎಂ.ಜಿ.ರಸ್ತೆಯಲ್ಲಿ ಸಾಗಿತು.

ಪೊಲೀಸ್‌ ಬ್ಯಾಂಡ್‌ನವರು ‘ಸಾರೇ ಜಹಾಂಸೇ ಅಚ್ಚಾ’ ನುಡಿಸುತ್ತಾ ಹುರುಪು ತುಂಬಿದರು. ಸಮವಸ್ತ್ರ ಧರಿಸಿದ್ದ ಯೋಧರು ಬಂದೂಕು, ರೈಫಲ್‌ ಹಿಡಿದು ಸಾಗಿದರು. ಮುಕ್ತ ಹಾಗೂ ನ್ಯಾಯಯುತ ಚುನಾವಣೆಗಾಗಿ ಜನರಲ್ಲಿ ಭರವಸೆ ತುಂಬಿದರು. ವಿಜಯದ ಚಿಹ್ನೆ ತೋರಿ ಖುಷಿ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT