ಗುರುವಾರ, 29 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾಲತಾಣದಲ್ಲಿ ಕೋಚಿಮುಲ್‌ ನೇಮಕ ಪಟ್ಟಿ!

Published 19 ಡಿಸೆಂಬರ್ 2023, 3:35 IST
Last Updated 19 ಡಿಸೆಂಬರ್ 2023, 3:35 IST
ಅಕ್ಷರ ಗಾತ್ರ

ಕೋಲಾರ: ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಹಾಲು ಒಕ್ಕೂಟದಿಂದ (ಕೋಚಿಮುಲ್‌) ನಡೆಯುತ್ತಿರುವ ವಿವಿಧ ಹುದ್ದೆಗಳ ನೇಮಕಾತಿ ಪಟ್ಟಿ ಪ್ರಕಟಣೆಗೆ ಮುನ್ನವೇ ಸಂಭವನೀಯ ಅಭ್ಯರ್ಥಿಗಳ ಪಟ್ಟಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಡಾಡುತ್ತಿದೆ.

ಈ ಪಟ್ಟಿಯಲ್ಲಿ ಅಭ್ಯರ್ಥಿ ಹೆಸರು ಹಾಗೂ ಪಕ್ಕದಲ್ಲಿ ಶಿಪಾರಸ್ಸು ಮಾಡಿದವರ ಹೆಸರು ಇವೆ. ಡಿ.ಕೆ.ಸಿ ಎಂದೂ ಒಂದು ಕಡೆ ನಮೂದಾಗಿದೆ. ಕೋಚಿಮುಲ್‌ ಅಧ್ಯಕ್ಷರು, ನಿರ್ದೇಶಕರು, ಅಧಿಕಾರಿಗಳ ಹೆಸರೂ ಇದೆ.

‘ಲಿಖಿತ ಪರೀಕ್ಷೆ ಮುಗಿದಿದ್ದು, ಸಂದರ್ಶನದ ಪ್ರಕ್ರಿಯೆ ನಡೆದಿದೆ. ಹುದ್ದೆಗಳನ್ನು ತಮಗಿಷ್ಟು ಎಂದು ಹಂಚಿಕೊಳ್ಳಲಾಗಿದೆ’ ಎಂಬ ಮಾಹಿತಿಯೂ ಹರಿದಾಡುತ್ತಿದೆ.

ಕೋಚಿಮುಲ್‌ ಕಚೇರಿಯಲ್ಲಿ ನೇಮಕಾತಿ ಅಂತಿಮ ಗೊಳಿಸಲು ಮಂಗಳವಾರ ಆಡಳಿತ ಮಂಡಳಿ ಸಭೆ ಇದ್ದು, ಹಿಂದಿನ ದಿನವಾದ ಸೋಮವಾರ ಈ ಪಟ್ಟಿ ಹರಿದಾಡಿದೆ.

ಈ ಸಂಬಂಧ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಕೋಚಿಮುಲ್‌ ಅಧ್ಯಕ್ಷ  ಕೆ.ವೈ.ನಂಜೇಗೌಡ, ‘ಪಟ್ಟಿ ಹರಿದಾಡುತ್ತಿರುವ ವಿಚಾರ ಗೊತ್ತಾಗಿದೆ. ಇದು ನಕಲಿ ಪಟ್ಟಿ. ಯಾರೋ ಕಿಡಿಗೇಡಿಗಳು ಸೃಷ್ಟಿ ಮಾಡಿ ಹರಿಬಿಟ್ಟಿದ್ದಾರೆ. ಪಟ್ಟಿಯಲ್ಲಿ ಯಾರ ಸಹಿ, ಮುದ್ರೆ ಕೂಡ ಇಲ್ಲ. ಕಿಡಿಗೇಡಿಗಳ ವಿರುದ್ಧ ಕಾನೂನು ಕ್ರಮ ಜರುಗಿಸುತ್ತೇನೆ. ಈ ಸಂಬಂಧ ಆಡಳಿತ ಮಂಡಳಿ ಸದಸ್ಯರೊಂದಿಗೆ ಚರ್ಚಿಸಿದ್ದೇನೆ’ ಎಂದರು.  

‘ಈ ಪಟ್ಟಿಯಲ್ಲಿರುವ ಹೆಸರು ಶೇ 90ರಷ್ಟು ಸುಳ್ಳು. ಈ ನಕಲಿ ಪಟ್ಟಿಯನ್ನು ಹಾಗೆಯೇ ಇಟ್ಟುಕೊಳ್ಳಿ. ಮೂರ್ನಾಲ್ಕು ದಿನಗಳಲ್ಲಿ ಅಂತಿಮ ಪಟ್ಟಿ ಬಿಡುಗಡೆಯಾಗಲಿದೆ. ಆಗ ಪರಿಶೀಲಿಸಿ. ಆಗ ಯಾರು ಹುದ್ದೆಗೆ ಆಯ್ಕೆ ಆಗಿದ್ದಾರೆ ಎಂಬುದು ಗೊತ್ತಾಗುತ್ತದೆ’ ಎಂದರು.

81 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿತ್ತು. ಆರು ಹುದ್ದೆಗಳಿಗೆ ಯಾರೂ ಅರ್ಜಿ ಸಲ್ಲಿಸಿರಲಿಲ್ಲ. 75 ಹುದ್ದೆಗಳಿಗೆ ತಿಂಗಳ ಹಿಂದೆಯೇ ಪರೀಕ್ಷೆ ನಡೆಸಲಾಗಿದೆ. ಮಂಗಳವಾರ ನಡೆಯಲಿರುವ ಆಡಳಿತ ಮಂಡಳಿ ಸಭೆ ಮುಂದೆ ಅಂತಿಮ ಪಟ್ಟಿ ಮುಂದಿಡಲಾಗುವುದು. ಒಪ್ಪಿಗೆ ಪಡೆದು ಘೋಷಣೆ ಮಾಡಲಾಗುವುದು ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT