ಕೋಲಾರ: ಉಪವಿಭಾಗಾಧಿಕಾರಿ ಡಾ.ಮೈತ್ರಿ ಹಾಗೂ ತಹಶೀಲ್ದಾರ್ ಡಾ.ನಯನಾ ಅವರ ಅಧಿಕಾರಾವಧಿಯಲ್ಲಿನ ಆರ್ಆರ್ಟಿ, ತಿದ್ದುಪಡಿ ಕೇಸು ಹಾಗೂ ದಲಿತರ ಭೂಮಿಗಳ ವಿಚಾರಗಳಲ್ಲಿ ಆದೇಶಗಳಾಗಿರುವ ಪ್ರಕರಣಗಳನ್ನು ಬೆಂಗಳೂರಿನ ಪ್ರಾದೇಶಿಕ ಆಯುಕ್ತರಿಂದ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಂಡು ದಲಿತರಿಗೆ ನ್ಯಾಯ ಒದಗಿಸಬೇಕು ಎಂದು ಜಿಲ್ಲಾ ವಾಲ್ಮೀಕಿ ನಾಯಕ ಸಂಘಟನೆಗಳ ಸಮನ್ವಯ ಸಮಿತಿ ಮುಖಂಡರು ಬುಧವಾರ ತಹಶೀಲ್ದಾರ್ ಕಚೇರಿ ಮುಂದೆ ಬೃಹತ್ ಪ್ರತಿಭಟನೆ ನಡೆಸಿದರು.

‘ನಯನಾ ಮತ್ತು ಮೈತ್ರಿ ಕೋಲಾರಕ್ಕೆ ಬಂದಾಗಿನಿಂದ ಅವರ ಆದೇಶಗಳು ನ್ಯಾಯ ಸಮ್ಮತವಾಗಿಲ್ಲ. ಒಂದೊಂದು ಪ್ರಕರಣಕ್ಕೆ ಒಂದೊಂದು ರೀತಿಯ ಕಾನೂನು ಪಾಲಿಸಿದ್ದು ಹಲವು ಅನುಮಾನಗಳನ್ನು ಹುಟ್ಟು ಹಾಕಿವೆ. ಅವರಿಂದಲೇ ಸಾರ್ವಜನಿಕರು, ರೈತರು ಹಾಗೂ ದಲಿತರು ನೋವು ಅನುಭವಿಸುತ್ತಿದ್ದಾರೆ. ಹೀಗಾಗಿ, ತನಿಖೆ ನಡೆಸಿ, ಸೂಕ್ತ ಕಾನೂನು ಕ್ರಮ ಜರುಗಿಸಬೇಕು’ ಎಂದು ಒತ್ತಾಯಿಸಿದರು.

ನಯನಾ ವಿರುದ್ಧ ಈ ಹಿಂದೆ ವಾಲ್ಮೀಕಿ ಸಮುದಾಯದಿಂದ ಹೋರಾಟ ನಡೆಸಿ, ತನಿಖೆ ನಡೆಸುವಂತೆ ಮೈತ್ರಿ ಅವರಿಗೆ ಮನವಿ ಪತ್ರ ನೀಡಲಾಗಿತು. ಈವರೆಗೆ ಆ ಮನವಿ ಪತ್ರವನ್ನು ಪ್ರಾದೇಶಿಕ ಆಯುಕ್ತರಿಗೆ ರವಾನಿಸಿಲ್ಲ. ಹೀಗಾಗಿ, ಮೈತ್ರಿ ವಿರುದ್ಧವೂ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಮಾಲೂರು ತಾಲ್ಲೂಕಿನ ಟೇಕಲ್ ಹೋಬಳಿಯ ಕರಡುಗುರ್ಕಿ, ಊರುಗುರ್ಕಿ, ಹುಲಿಗುಟ್ಟೆ, ಓಬಟ್ಟಿ, ಮಾದಾಪುರ ಸೇರಿದಂತೆ ಸುತ್ತಲೂ ಕ್ರಷರ್ ಮಾಡಲು ಅನುಮತಿ ನೀಡಬಾರದು. ಒಂದು ವೇಳೆ ನೀಡಿದರೆ ಜ.26 ರಂದು ಗಣರಾಜ್ಯೋತ್ಸವ ದಿನ ಗಾಂಧಿವನದಲ್ಲಿ ಮೌನ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ವಾಲ್ಮೀಕಿ ನಾಯಕ ಸಂಘದ ಜಿಲ್ಲಾ ಅಧ್ಯಕ್ಷ ಎಂ.ಬಾಲಗೋವಿಂದ್, ಸಮುದಾಯದ ಮುಖಂಡರಾದ ಅಂಬರೀಷ್, ಮಾಲೂರು ಎನ್.ವೆಂಕಟರಾಮ್, ಕುಡುವನಹಳ್ಳಿ ಆನಂದ್, ಬೈರಂಡಹಳ್ಳಿ ನಾಗೇಶ್, ಅಡ್ಡಗಲ್ ನರೇಶ್, ನರಸಿಂಹಪ್ಪ, ಗಡ್ಡೂರು ಪ್ರಕಾಶ್, ಬೈರಕೂರು ರಾಮಾಂಜಿ, ಕೆಜಿಎಫ್ ರಮೇಶ್ ನಾಯಕ್, ಮೇಡಹಾಳ ಮುನಿಅಂಜಿ, ಗರುಡನಹಳ್ಳಿ ಪಿಳ್ಳಪ್ಪ, ಸಂಪತ್, ಸಂಗೊಂಡಹಳ್ಳಿ ಪಿಳ್ಳಪ್ಪ, ಬೆಳ್ಳೂರು ತಿರುಮಲೇಶ್, ಈನೆಲ ಜಲ ವೆಂಕಟಾಚಲಪತಿ, ಟಿ.ಕೆ.ನಾಗರಾಜ್, ವಾಸು, ಸಿಂಗಹಳ್ಳಿ ಮುರಳಿ ನಾಯಕ್, ತಾಳಕುಂಟೆ ನವೀನ್, ರಾಮಪ್ಪ, ಶಂಕರಪ್ಪ, ಕಲ್ಲಂಡೂರು ನಾರಾಯಣಸ್ವಾಮಿ, ರವಿ, ಗೋವಿಂದ, ತಿಮ್ಮರಾಮಪ್ಪ, ಮೇಡಹಾಳ ಮಂಜು, ರಾಜು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.