ಗುರುವಾರ, 25 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೊಡೂರು ಗ್ರಾಮಕ್ಕಿಲ್ಲ ಮೂಲಸೌಕರ್ಯ

ಸ್ವಚ್ಛತೆ ಇಲ್ಲದ ಸಾಂಕ್ರಾಮಿಕ ರೋಗದ ಭೀತಿಯಲ್ಲಿ ಜನ
ವಿ ರಾಜಗೋಪಾಲ್
Published 3 ಜುಲೈ 2024, 6:52 IST
Last Updated 3 ಜುಲೈ 2024, 6:52 IST
ಅಕ್ಷರ ಗಾತ್ರ

ಮಾಲೂರು: ಸ್ವಚ್ಛತೆ ಇಲ್ಲದ ಚರಂಡಿ, ಕಿರಿದಾದ ರಸ್ತೆ, ಕೊಳಚೆ ನೀರಿನ ಕುಂಟೆ, ಶಿಥಿಲಗೊಂಡಿರುವ ಶಾಲೆ ಸೇರಿದಂತೆ ಮೂಲ ಸೌಕರ್ಯಗಳಿಲ್ಲದೆ ಕೊಡೂರು ಜನತೆ ನಲುಗಿದ್ದಾರೆ.

ಲಕ್ಕೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಡೂರು ಗ್ರಾಮದಲ್ಲಿ 400 ಮತದಾರಿದ್ದು, 120 ಕುಟುಂಬಗಳು ವಾಸ ಮಾಡುತ್ತಿದ್ದಾರೆ.
ಕೊಡೂರು ಗ್ರಾಮಕ್ಕೆ ಹೋಗುತ್ತಿದ್ದಂತೆ ಸಿಗುವ ಕೊಳಚೆ ನೀರಿನ ಕುಂಟೆ ಗ್ರಾಮಕ್ಕೆ ಕಂಟಕವಾಗಿ ಪರಿಣಮಿಸಿದೆ. ಕುಂಟೆ ಸುತ್ತಲೂ ಬೆಳೆದಿರುವ ಗಿಡ ಗೆಂಟೆಗಳಿಂದ ಅಕ್ಕಪಕ್ಕದ ಮನೆಗಳಿಗೆ ಹಾವುಗಳ ಕಾಟ ಹೆಚ್ಚಾಗಿದೆ. ಜತೆಗೆ ಸೊಳ್ಳೆ ಕಾಟದಿಂದ ಯಾವಾಗಲೂ ಬಾಗಿಲು ಮುಚ್ಚಿಕೊಂಡು ಜೀವನ ಸಾಗಿಸುವಂತಾಗಿದೆ.

ರಸ್ತೆಗಳೇ ಇಲ್ಲ: ಮಾಲೂರು -ಹೊಸೂರು ರಸ್ತೆಯ ಚೂಡಗೊಂಡನಹಳ್ಳಿ ಗ್ರಾಮದ ಮೂಲಕ ಕೊಡೂರಿಗೆ ಹೋಗುವ ಮುಖ್ಯರಸ್ತೆ ಅಳ್ಳದಿಂದ ಕೂಡಿದ್ದು ಸಂಚಾರಕ್ಕೆ ತೊಂದರೆಯಾಗಿದೆ. 120 ಮನೆಗಳಿರುವ ಗ್ರಾಮದಲ್ಲಿ ಮನೆಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳು ಕಾಲು ದಾರಿಯಂತಿವೆ. ಇದರಿಂದ ಗ್ರಾಮದ ಕೆಲವು ಮನೆಗಳಿಗೆ ನಾಲ್ಕು ಚಕ್ರದ ವಾಹನಗಳು ಹೋಗುವುದಿಲ್ಲ. ಜನರನ್ನು ತುರ್ತಾಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕಾದರೆ ಗ್ರಾಮದ ಮುಂಭಾಗದ ಮುಖ್ಯ ರಸ್ತೆಗೆ ರೋಗಿಗಳನ್ನು ಹೆಗಲ ಮೇಲೆ ಹೊತ್ತುಕೊಂಡು ಹೋಗಬೇಕಾಗಿದೆ.

ಸ್ವಚ್ಛತೆ ಮರೀಚಿಕೆ: ಗ್ರಾಮದಲ್ಲಿ ಸ್ವಚ್ಛತೆ ಮರೀಚಿಕೆಯಾಗಿದೆ. ಇರುವ ಚರಂಡಿಗಳಲ್ಲಿ ಹೂಳು ತುಂಬಿದ್ದು, ಕೊಳಚೆ ನೀರಿನಿಂದ ಸೊಳ್ಳೆ ಕಾಟ ಹೆಚ್ಚಾಗಿದೆ. ಕೆಲವು ಮನೆ ಮುಂಭಾಗದಲ್ಲಿ ಚರಂಡಿ ವ್ಯವಸ್ಥೆ ಇಲ್ಲದೆ ರಸ್ತೆಗಳಲ್ಲಿ ಕೊಳಚೆ ನೀರು ಹರಿಯುತ್ತಿದೆ. ಮಳೆ ನೀರು ಹರಿಯುವ ಮುಖ್ಯ ಕಾಲುವೆ ಸ್ವಚ್ಛತೆ ಇಲ್ಲದೆ ಕೊಳಚೆನೀರು ಸೇರಿಕೊ೦ಡು ಕಾಲುವೆ ಪಕ್ಕದ ಜನರು ಭಯದಿಂದ ಬದುಕುವಂತಾಗಿದೆ.

ಶಿಥಿಲಗೊಂಡಿರುವ ಸರ್ಕಾರಿ ಶಾಲೆ: ಕೊಡೂರು ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ 1 ರಿಂದ 7ನೇ ತರಗತಿಯವರೆಗೆ 14 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಇರುವ ಎರಡು ಕೊಠಡಿಯಲ್ಲಿ ಒಂದು ಕೊಠಡಿ ಗೋಡೆಗಳು ಶಿಥಿಗೊಂಡಿದೆ. ಹಾಗಾಗಿ ಮಕ್ಕಳನ್ನು ಶಾಲೆಗೆ ಕಳುಹಿಸಲು ಪೋಷಕರು ಹಿಂಜರಿಯುತ್ತಾರೆ.

ಅಳ್ಳಕೊಳ್ಳಗಳಿಂದ ಕೂಡಿರುವ ರಸ್ತೆ 
ಅಳ್ಳಕೊಳ್ಳಗಳಿಂದ ಕೂಡಿರುವ ರಸ್ತೆ 
ಕಿರಿದಾದ ಸಂಪರ್ಕ ರಸ್ತೆಗಳು
ಕಿರಿದಾದ ಸಂಪರ್ಕ ರಸ್ತೆಗಳು
ಕೊಡೂರು ಸರ್ಕಾರಿ ಪ್ರಾಥಮಿಕ ಶಾಲಾ ಕೊಠಡಿ ಗೋಡೆ ಬಿರುಕು ಬಿಟ್ಟಿರುವುದು 
ಕೊಡೂರು ಸರ್ಕಾರಿ ಪ್ರಾಥಮಿಕ ಶಾಲಾ ಕೊಠಡಿ ಗೋಡೆ ಬಿರುಕು ಬಿಟ್ಟಿರುವುದು 
ಮುಖ್ಯ ಕಾಲುವೆ ಸ್ವಚ್ಛತೆ ಇಲ್ಲದಿರುವುದು 
ಮುಖ್ಯ ಕಾಲುವೆ ಸ್ವಚ್ಛತೆ ಇಲ್ಲದಿರುವುದು 

Cut-off box - ಮಳೆ ಬಂದರೆ ಮನೆಗಳಿಗೆ ನೀರು ಮಳೆ ಹೆಚ್ಚಾದರೆ ಕಾಲುವೆಯಿಂದ ಮನೆಗಳಿಗೆ ನೀರು ನುಗ್ಗುತ್ತದೆ. ಕಾಲುವೆ ಸ್ವಚ್ಛತೆ ಇಲ್ಲದೆ ಗಿಡ ಗೆಂಟೆಗಳು ಬೆಳೆದಿದ್ದು ಹಾವು ಸೊಳ್ಳೆಗಳ ಕಾಟ ಹೆಚ್ಚಾಗಿದೆ. ಇನ್ನು ಗ್ರಾಮದ ಕೊಳಚೆ ನೀರು ಕಾಲುವೆಯಲ್ಲಿ ಬಿಡುವುದರಿಂದ ದುರ್ವಾಸನೆಯಿಂದ ಕೂಡಿದ್ದು ಬಹಳ ತೊಂದರೆಯಾಗಿದೆ. ಅನಿತಾ ಕೊಡೂರು ಗ್ರಾಮದ ನಿವಾಸಿ ==== ರಸ್ತೆ ಸೌಕರ್ಯ ಕಲ್ಪಿಸಿ ರಸ್ತೆಗಳು ಕಾಲುದಾರಿಯಂತಿದ್ದು ದ್ವಿಚಕ್ರ ವಾಹನ ಹೊರತುಪಡಿಸಿ ಯಾವುದೇ ವಾಹನಗಳು ಮನೆಗಳ ಬಳಿ ಬರುವುದಿಲ್ಲ. ತುರ್ತಾಗಿ ಆಸ್ಪತ್ರೆಗೆ ರೋಗಿಗಳನ್ನು ಕರೆದುಕೊಂಡು ಹೋಗಬೇಕಾದರೆ ಹೆಗಲ ಮೇಲೆ ಹೊತ್ತು ಮುಖ್ಯ ರಸ್ತೆ ಬಳಿಗೆ ಹೋಗಬೇಕು. ಹಾಗಾಗಿ ರಸ್ತೆ ಸೌಕರ್ಯ ಕಲ್ಪಿಸಿ. ನಾಗಪ್ಪ ಕೊಡೂರು ಗ್ರಾಮದ ನಿವಾಸಿ ====  ಗ್ರಾಮದ ಕೆರೆ ಮುಖ್ಯಕಾಲುವೆಯನ್ನು ಎನ್‌ಆರ್‌ಜಿ ಯೋಜನೆಯಲ್ಲಿ ಸ್ವಚ್ಛಗೊಳಿಸಿ ದುರಸ್ತಿಗೊಳಿಸಲಾಗುವುದು. ಇನ್ನೂ ಗ್ರಾಮದಲ್ಲಿ ರಸ್ತೆ ಬಿಡದೆ ಮನೆ ಹಾಗೂ ಶೌಚಾಲಯ ನಿರ್ಮಾಣವಾಗಿರುವುದರಿಂದ ರಸ್ತೆಗಳು ಕಿರಿದಾಗಿವೆ. ದಾನಿಗಳಿಂದ ಸರ್ಕಾರಿ ಶಾಲಾ ಕಟ್ಟಡ ನಿರ್ಮಾಣ ಮಾಡಲು ಗ್ರಾಮಸ್ಥರು ಸೇರಿದಂತೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತಿದೆ. ಶ್ರೀನಿವಾಸ್ ಕೊಡೂರು ಗ್ರಾ.ಪಂ ಸದಸ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT