ದಿನಕ್ಕೊಂದು ಹೇಳಿಕೆ ಸರಿ ಅಲ್ಲ
ಎಲ್ಲವನ್ನೂ ಪರಾಮರ್ಶೆ ಮಾಡಿಯೇ ಸುಪ್ರೀಂ ಕೋರ್ಟ್ ಮರು ಮತ ಎಣಿಕೆಗೆ ಆದೇಶ ನೀಡಿದೆ. ಬೇರೆ ಬೇರೆ ವಿಚಾರ ಚರ್ಚೆ ಮಾಡುವುದು ದಿನಕ್ಕೊಂದು ಹೇಳಿಕೆ ನೀಡುವುದು ಸರಿ ಅಲ್ಲ. ನ್ಯಾಯಾಲಯದ ಆದೇಶಗಳನ್ನು ಉಲ್ಲಂಘನೆ ಮಾಡಿದಂತಾಗುತ್ತದೆ. ರಾಜಕಾರಣವೇ ಬೇರೆ ನ್ಯಾಯಾಲಯದ ತೀರ್ಮಾನಗಳೇ ಬೇರೆ. ಇದು ರಾಜಕೀಯ ವಿಚಾರ ಅಲ್ಲ. ಸುಪ್ರೀಂ ಕೋರ್ಟ್ ಆದೇಶಕ್ಕೆ ಬದ್ಧವಾಗಿರಬೇಕು ಎಂದು ನಂಜೇಗೌಡ ಹೇಳಿದರು.