ಶನಿವಾರ, 15 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಮ್ಮೂರ ತಿಂಡಿ | ಬಾಯಲ್ಲಿ ನೀರೂರಿಸುವ ಬಂಗಾರ‍ಪೇಟೆ ಪಾನಿಪುರಿ

Published 9 ಜೂನ್ 2024, 7:22 IST
Last Updated 9 ಜೂನ್ 2024, 7:22 IST
ಅಕ್ಷರ ಗಾತ್ರ

ಬಂಗಾರಪೇಟೆ: ಬಂಗಾರಪೇಟೆ ಪಾನಿಪುರಿ ಶುರುವಾಗಿ ದೊಡ್ಡ ಬ್ರಾಂಡ್‌ ಆಗಿರುವುದರ ಹಿಂದೆ ಅದರದ್ದೇ ಇತಿಹಾಸವಿದೆ. ಬಂಗಾರಪೇಟೆ ಎಂದರೆ ಮೊದಲೆಲ್ಲ ಬಂಗಾರ ನೆನಪಾಗುತ್ತಿತ್ತು. ಆದರೆ, ಈಗ ಬಾಯಲ್ಲಿ ನೀರೂರಿಸುವ ಪಾನಿಪುರಿ ನೆನಪಾಗುತ್ತದೆ.

ಸಾಮಾನ್ಯವಾಗಿ ತಿಂಡಿ ತಿನಿಸು ಯಾರಿಗಿಷ್ಟ ಇಲ್ಲ ಹೇಳಿ. ಅದರಲ್ಲೂ ವಾರಾಂತ್ಯದಲ್ಲಿ ಸಂಜೆಯಾದರೆ ಬಂಗಾರಪೇಟೆ ಜನ ಪಾನಿಪುರಿ ತಿನ್ನಲು ಹೊರಗೆ ಬರುತ್ತಾರೆ. ಅದೇ ರೀತಿ ಬಂಗಾರಪೇಟೆ ಪಾನಿಪುರಿ ಎಂದರೆ ರಾಜ್ಯದ ಮೂಲೆ ಮೂಲೆಯ ಜನರ ಬಾಯಲ್ಲಿ ನೀರೂರುತ್ತೆ.

ರಸ್ತೆ ಬದಿ ಅಂಗಡಿ ಇಂದು ದೊಡ್ಡ ಉದ್ಯಮ:

ಮೊದಲಿಗೆ ಪಾನಿಪುರಿ ಎಂದರೆ ಕೇವಲ ಬೀದಿಬದಿಯ ವ್ಯಾಪಾರ ಎನ್ನುವಂತಿತ್ತು. ಆದರೆ, ಇಂದು ದೊಡ್ಡ ಉದ್ಯಮವಾಗಿ ಮಾರ್ಪಟ್ಟಿದೆ. ಬಂಗಾರಪೇಟೆ ಪಾನಿಪುರಿ ಎಂದರೆ ಅದೊಂದು ವಿಭಿನ್ನ ರುಚಿ ಎಲ್ಲರ ಬಾಯಲ್ಲೂ ನೀರೂರುತ್ತೆ. ಹಾಗಾಗಿ ಇಂದು ಮೈಸೂರಿ ದಸರಾದಿಂದ ಮದುವೆ ಮನೆಯಲ್ಲೂ ಸ್ಟಾಲ್‌ ಹಾಕುವಂತಾಗಿದೆ.

ವೈವಿಧ್ಯ ರುಚಿಯ ಪಾನಿಪುರಿ: 

ಮೊದಲಿಗೆ ಪಾನಿಪುರಿ ಎಂದರೆ ಒಂದು ಅಥವಾ ಎರಡು ವೆರೈಟಿ ಇದ್ದರೆ ಹೆಚ್ಚು. ಆದರೆ ಇಂದು ಬಂಗಾರಪೇಟೆ ಪಾನಿಪುರಿ ಪ್ರಭಾವದಿಂದ ನೂರಾರು ವೆರೈಟಿ ಪಾನಿಪುರಿ ಸಿಗುತ್ತದೆ. ಅದರಲ್ಲೂ ಬಂಗಾರಪೇಟೆಯಲ್ಲಿ ಪಾನಿಪುರಿ, ಮಸಾಲೆಪುರಿ, ಡಿಕ್ಕಿ ಮಾಸಾಲಾ, ಬೇಲ್​ಪುರಿ, ನಿಪ್ಪಟ್​ ಬೇಲ್, ಚಕ್ಕಲಿ ಬೇಲ್​, ಸಿಸಿಎಂ, ಮಿಕ್ಸ್​ಚರ್​ ಮಸಾಲಾ, ತರಕಾರಿ ಮಲಾಸಾ, ಗುಲ್ಕನ್​ ಮಿಕ್ಸ್​, ಬೋಟಿ ಬೇಲ್​, ಕರಿಬೇವು ಮಸಾಲಾ, ಪುದೀನಾ ಮಸಾಲಾ, ಸಲಾಡ್​ ಮಾಸಾಲೆ, ಡಿಪ್​ ಪಾನಿಪುರಿ, ಸೆವೆನ್​ ಡಿ ಪಾನಿಪುರಿ, ಪ್ರೂಟ್​ ಮಸಾಲಾ, ಆಲೂ ಪೂರಿ, ಹೀಗೆ ಸುಮಾರು 50 ರಿಂದ 60 ರೀತಿಯ ಪಾನಿಪುರಿ ಮಾಡಲಾಗುತ್ತದೆ. ಅಷ್ಟೇ ಅಲ್ಲದೆ ತಂಪು ಪಾನೀಯಗಳಿಗೂ ಮಸಾಲೆ ಹಾಕಿ ಅದನ್ನು ವಿಶೇಷವಾಗಿ ನೀಡುತ್ತಾರೆ.

ಪಾನಿಪುರಿ ಕೇವಲ ಕರ್ನಾಟಕಕ್ಕೆ ಮಾತ್ರ ಸೀಮಿತವಾಗಿಲ್ಲ ಪಕ್ಕದ ಆಂಧ್ರಪ್ರದೇಶ, ತಮಿಳುನಾಡು, ಕೇರಳ, ಮಹಾರಾಷ್ಟ್ರಕ್ಕೂ ವ್ಯಾಪಿಸಿದೆ. ಇದೊಂದು ಒಡ್ಡ ಉದ್ದಿಮೆಯಾಗಿದ್ದು, ಇದಕ್ಕೆ ಬಳಸುವ ವಸ್ತುಗಳನ್ನು ತಯಾರಿಸಿ ಸರಬರಾಜು ಮಾಡುವುದಕ್ಕೆ ಗುಡಿ ಕೈಗಾರಿಕೆಗಳು ಆರಂಭವಾಗಿವೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT