ಮುಳಬಾಗಿಲು: ತಾಲ್ಲೂಕು ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕಿನ ಆಡಳಿತ ಮಂಡಳಿ ನಿರ್ದೇಶಕರಿಗಾಗಿ ನಗರದಲ್ಲಿ ಭಾನುವಾರ ನಡೆದ ಚುನಾವಣೆ ಶಾಂತಿಯುತವಾಗಿತ್ತು.

ಒಟ್ಟು 14 ಸ್ಥಾನಗಳ ಪೈಕಿ 6 ಕ್ಷೇತ್ರಗಳಿಗೆ ಅವಿರೋಧ ಆಯ್ಕೆ ನಡೆಯಿತು. ಉಳಿದ 8 ಸ್ಥಾನಗಳಿಗೆ ನಗರದ ಸರ್ಕಾರಿ ಬಾಲಕರ ಪಿಯು ಕಾಲೇಜಿನಲ್ಲಿ ಚುನಾವಣೆ ನಡೆಯಿತು. ಬಿ.ಆರ್.ಶಿವಶಂಕರ್ ಚುನಾವಣಾ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದರು.

ಚುನಾವಣೆಯಲ್ಲಿ ತಾಲ್ಲೂಕು ಸಾಲಗಾರರಲ್ಲದ ಕ್ಷೇತ್ರದಿಂದ ಮಂಡಿಕಲ್ ಎಂ.ಎಸ್.ಮಂಜುನಾಥ್, ಆಲಂಗೂರು ಕ್ಷೇತ್ರದಿಂದ ಎ.ಭರತ್, ನಂಗಲಿ ಬಿಸಿಎಂ– ಬಿ ಕ್ಷೇತ್ರದಿಂದ ಟಿ.ವಿಶ್ವನಾಥ ರೆಡ್ಡಿ, ಬೈರಕೂರು ಸಾಮಾನ್ಯ ಕ್ಷೇತ್ರದಿಂದ ಕೆ.ಎಸ್.ಅಶೋಕ್, ಅಂಬ್ಲಿಕಲ್ ಕ್ಷೇತ್ರದಿಂದ ಗಂಗಿರೆಡ್ಡಿ, ತಾಯಲೂರಿನಿಂದ ಶ್ರೀನಿವಾಸ್ , ಆವಣಿಯಿಂದ ಎಂ.ಎನ್.ಶಂಕರ ನಾರಾಯಣ ಮತ್ತು ಬಲ್ಲ ಕ್ಷೇತ್ರದಿಂದ ಕೆಂಪಮ್ಮ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ.

ಭಾನುವಾರ ಬೆಳಿಗ್ಗೆಯಿಂದಲೇ ಸುರಿಯುತ್ತಿದ್ದ ಜಡಿ ಮಳೆಯನ್ನೂ ಲೆಕ್ಕಿಸದೆ ಅಭ್ಯರ್ಥಿಗಳು ಮತ್ತು ವಿವಿಧ ಮುಖಂಡರು ಮತದಾರರ ಓಲೈಸುವಲ್ಲಿ ನಿರತರಾಗಿರುವುದು ಕಂಡುಬಂದಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.