ಮುಳಬಾಗಿಲು: ತಾಲ್ಲೂಕಿನ ಬೈರಕೂರು ಗ್ರಾಮದ ಮಹಿಳೆಯೊಬ್ಬರು ಪಿನಾಯಿಲ್ ಕುಡಿದು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಬೈರಕೂರು ಗ್ರಾಮದ ಚೈತ್ರಾ (20) ಮೃತರು. ಈ ಸಂಬಂಧ ಚೈತ್ರಾ ಅವರ ಪತಿ ಬಾಲಕೃಷ್ಣ, ಅತ್ತೆ ಸುಧಮ್ಮ ಹಾಗೂ ಭಾಗ್ಯ ಎಂಬುವರ ವಿರುದ್ಧ ಪ್ರಕರಣ ದಾಖಲಾಗಿದ್ದು, ಈ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

‘ಗಂಡ, ಅತ್ತೆ ಮತ್ತು ಗಂಡನ ಮೊದಲ ಪತ್ನಿಯ ಮಾನಸಿಕ ಮತ್ತು ದೈಹಿಕ ಹಿಂಸೆ ತಾಳಲಾರದೆ ಫೆ. 10ರಂದು ನನ್ನ ಮಗಳು ಪೆನಾಯಿಲ್ ಕುಡಿದಿದ್ದಳು. ಆಕೆಯನ್ನು ಮೊದಲಿಗೆ ಕೋಲಾರದ ನರಸಿಂಹರಾಜ ಜಿಲ್ಲಾಸ್ಪತ್ರೆಗೆ ದಾಖಲಿಸಲಾಯಿತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗಳಲ್ಲಿ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ’ ಎಂದು ಮೃತರ ತಾಯಿ ತಿಳಿಸಿದ್ದಾರೆ.

ಆನೇಕಲ್ ತಾಲ್ಲೂಕು ವ್ಯಾಪ್ತಿಯ ಬೊಮ್ಮಸಂದ್ರ ನಿವಾಸಿ ಚೈತ್ರಾ ಅವರು ಮೂರು ವರ್ಷದ ಹಿಂದೆ ಮುಳಬಾಗಿಲು ತಾಲ್ಲೂಕಿನ ಬೈರಕೂರು ಗ್ರಾಮದ ಬಾಲಕೃಷ್ಣ ಎಂಬುವರ ಜೊತೆ ದಾಂಪತ್ಯಕ್ಕೆ ಕಾಲಿಟ್ಟಿದ್ದರು. ಆದರೆ, ನನ್ನ ಅಳಿಯನಿಗೆ ಭಾಗ್ಯ ಎಂಬುವರ ಜೊತೆ ಸಂಬಂಧ ಇತ್ತು. ನನ್ನ ಮಗಳಿಗೆ ಬಾಲಕೃಷ್ಣ, ಅತ್ತೆ ಸುಧಮ್ಮ ಹಾಗೂ ಭಾಗ್ಯ ಸೇರಿ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡಿದ್ದಾರೆ. ಇದರಿಂದಾಗಿ ನನ್ನ ಮಗಳು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಮೃತಳ ತಾಯಿ ಗೋಗರೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.