ಬುಧವಾರ, ಆಗಸ್ಟ್ 5, 2020
25 °C
ಕೊರೊನಾ ಪರಿಣಾಮ ಶುಭ ಸಮಾರಂಭಗಳು ಬಂದ್‌

ಬಾಳೆ ಎಲೆಗಿಲ್ಲ ಬೇಡಿಕೆ; ವ್ಯಾಪಾರ ಕುಂಠಿತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮುಳಬಾಗಿಲು: ಕೊರೊನಾ ಕರಿ ನೆರಳು ಬಾಳೆ ಎಲೆ ವ್ಯಾಪಾರಿಗಳ ಮೇಲೂ ಬಿದ್ದಿದೆ. ಮದುವೆ, ಸಮಾರಂಭಗಳ ಸಮಯದಲ್ಲಿ ಹೆಚ್ಚು ಬೇಡಿಕೆ ಇರುತ್ತಿದ್ದ ಬಾಳೆ ಎಲೆಯನ್ನು ಈಗ ಕೇಳುವವರಿಲ್ಲದಂತಾಗಿದೆ.

ನಗರದ ಮುತ್ಯಾಲಪೇಟಿಯಲ್ಲಿರುವ ಬಾಳೆ ಎಲೆ ವ್ಯಾಪಾರಿ ಪಿಳ್ಳಯ್ಯ ಅವರು ಲಾಕ್‌ಡೌನ್‌ಗೂ ಮುಂಚೆ ಅಂಗಡಿಯಲ್ಲಿ ಐದಾರು ಮಂದಿ ಸಹಾಯಕರನ್ನು ಇಟ್ಟುಕೊಂಡು ಬಿಡುವಿಲ್ಲದೆ ಕೆಲಸ ಮಾಡುತ್ತಿದ್ದರು. ನೆರೆಯ ಆಂಧ್ರಪ್ರದೇಶ ಮತ್ತು ತಮಿಳುನಾಡುಗಳಿಂದ ಬಾಳೆ ಎಲೆ ತರಿಸಿಕೊಂಡು ವ್ಯಾಪಾರ ಮಾಡುತ್ತಿದ್ದರು.

ಮದುವೆ, ಮುಂಜಿ, ತಿಥಿ ಮುಂತಾದ ಎಲ್ಲ ಕಾರ್ಯಗಳಿಗೆ ಬಾಳೆ ಎಲೆ ಕಾಯ್ದಿರಿಸುತ್ತಿದ್ದರು. ಇನ್ನು ಹಲವಾರು ಹೋಟೆಲ್‌
ಗಳಿಂದಲೂ ಬಾಳೆ ಎಲೆಗೆ ಬೇಡಿಕೆ ಬರುತ್ತಿತ್ತು.

‘ಬಾಳೆ ಎಲೆಗೆ ಕೋಲಾರ ಜಿಲ್ಲೆ ಸೇರಿದಂತೆ ಬೆಂಗಳೂರು ಗ್ರಾಮಾಂತರ, ನೆರೆಯ ಚಿತ್ತೂರು ಜಿಲ್ಲೆಗಳಿಂದ ಬೇಡಿಕೆ ಬರುತ್ತಿತ್ತು. ಗ್ರಾಹಕರ ಬೇಡಿಕೆ ಈಡೇರಿಸಲು ಸಮಯ ಹೊಂದಿಸಿಕೊಂಡು ಬಾಳೆ ಎಲೆಯನ್ನು ಒಪ್ಪ ಮಾಡಬೇಕಿತ್ತು. ಆದರೆ, ನಾಲ್ಕು ತಿಂಗಳಿಂದ ಬಾಳೆ ಎಲೆ ವ್ಯಾಪಾರಕ್ಕೆ ಬಾರಿ ಏಟು ಬಿದ್ದಿದೆ’ ಎನ್ನುವರು ಪಿಳ್ಳಯ್ಯ.

ಈಗಿನ ಪರಿಸ್ಥಿತಿ ನೋಡಿದರೆ ಇನ್ನು ಕೆಲವು ತಿಂಗಳು ಈ ವ್ಯಾಪಾರಕ್ಕೆ ಭವಿಷ್ಯವಿಲ್ಲ ಎಂಬುದು ಅವರ ಕೊರಗು. ಸ್ಥಳೀಯವಾಗಿ ಸಿಕ್ಕುವ ಬಾಳೆಎಲೆಯನ್ನು ತರಿಸಿಕೊಂಡು ಅತಿ ಕಡಿಮೆ ಬೇಡಿಕೆಯೊಂದಿಗೆ ವ್ಯಾಪಾರ ಮಾಡಲಾಗುತ್ತಿದೆ ಎಂದು ಅವರು ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.