ಮಾಲೂರು: ವಿಧಾನಸಭೆ ದೇವಾಲಯವಿದ್ದಂತೆ. ಅಲ್ಲಿ ಜನಪ್ರತಿನಿಧಿಗಳ ಮಾತು ಹಾಗೂ ನಡವಳಿಕೆ ಗೌರವಯುತವಾಗಿರಬೇಕು. ಪ್ರಸ್ತುತ ಶಾಸನ ಸಭೆಯಲ್ಲಿ ಗೌರವಯುತ ವಾತಾವರಣ ಇಲ್ಲದಿರುವುದು ಮೌಲ್ಯಗಳ ಅಧಃಪತನಕ್ಕೆ ಕಾರಣವಾಗಿದೆ ಎಂದು ಸ್ಕೌಟ್ಸ್ ಅಂಡ್ ಗೈಡ್ಸ್ನ ರಾಜ್ಯ ಆಯುಕ್ತ ಪಿಜಿಆರ್ ಸಿಂಧ್ಯ ಕಳವಳ ವ್ಯಕ್ತಪಡಿಸಿದರು.

ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಕೆ.ಮುನಿಕೃಷ್ಣಪ್ಪ ಅವರ 77ನೇ ಜನ್ಮದಿನಾಚರಣೆ ಹಾಗೂ ಅಭಿನಂದನಾ ಕಾರ್ಯಕ್ರಮದಲ್ಲಿ ಕೆ.ಮು.ಕೃ ಅಭಿನಂದನಾ ಗ್ರಂಥವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು. ಪ್ರಸ್ತುತ ಕಾಲಘಟ್ಟದಲ್ಲಿ ಅಂಬೇಡ್ಕರ್ ಸಾಹಿತ್ಯ, ದಲಿತ ಸಾಹಿತ್ಯ ಹಾಗೂ ಒಟ್ಟಾರೆ ಕನ್ನಡ ಸಾಹಿತ್ಯ ಮುಖ್ಯಭೂಮಿಕೆಗೆ ಬರಬೇಕಿದೆ. ಬೌದ್ಧ ಧರ್ಮ ವೈಜ್ಞಾನಿಕ ಆಧಾರವಿರುವುದರಿಂದ ವಿಶ್ವದಲ್ಲಿ ಅತಿ ವೇಗವಾಗಿ ಬೆಳೆಯುತ್ತಿರುವ ಧರ್ಮವಾಗಿದೆ ಎಂದರು.

ಚೈತನ್ಯ ಕಲಾನಿಕೇತನದ ಸಂಸ್ಥಾಪಕ ಅಧ್ಯಕ್ಷ, ಕವಿ ಡಾ.ಜಯಮಂಗಲ ಚಂದ್ರಶೇಖರ್, ಕೆ.ಮುನಿಕೃಷ್ಣಪ್ಪ ನಿವೃತ್ತ ಶಿಕ್ಷಕ, ವಕೀಲ, ಲೇಖಕ, ಸಂಪಾದಕರಾಗಿ 45 ವರ್ಷಗಳ ಸುದೀರ್ಘ ಸಮಾಜ ಸೇವೆ ಮಾಡಿದ್ದಾರೆ. ಸರ್ಕಾರ ಹಾಗೂ ಸಂಸ್ಥೆಗಳು ಅವರ ಸೇವೆ ಗುರುತಿಸಿ ಸೌಲಭ್ಯ ಒದಗಿಸಬೇಕು ಎಂದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟ ಪೂರ್ವ ಕಾರ್ಯದರ್ಶಿ ಎ.ಅಶ್ವತ್ಥ ರೆಡ್ಡಿ, ಸಮಾಜಸೇವೆ ಮಾಡುವವರು ಇತಿಹಾಸದಲ್ಲಿ ನಿಲ್ಲುತ್ತಾರೆ. ಕೆ.ಮುನಿಕೃಷ್ಣಪ್ಪ ಅವರು ತಾಲ್ಲೂಕು, ರಾಜ್ಯ ಹಾಗೂ ಅಂತರ ರಾಜ್ಯ ಮಟ್ಟದಲ್ಲಿ ಕನ್ನಡ ಹಾಗೂ ಕುವೆಂಪು ಅವರ ವಿಶ್ವಮಾನವತಾ ಸಂದೇಶ ಸಾರುವ ಕಾರ್ಯಕ್ರಮ ನಿರಂತರ ಆಯೋಜಿಸುತ್ತಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಮುನಿಕೃಷ್ಣಪ್ಪ ಹಾಗೂ ರಮಾಮಣಿ ದಂಪತಿಯನ್ನು ಅಭಿನಂದಿಸಲಾಯಿತು. 10 ಸಾಧಕರಿಗೆ ‘ಕರ್ನಾಟಕ ರಾಜ್ಯ ಅನಿಕೇತನ ಭಾವೈಕ್ಯ ತಪಸ್ ಪ್ರಶಸ್ತಿ' ನೀಡಿ ಗೌರವಿಸಲಾಯಿತು. ಗಾಯಕರಿಗೆ ಸನ್ಮಾನ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಹಿರಿಯ ಪ್ರಾಧ್ಯಾಪಕ ಬಹದ್ದೂರ್ ಖಾನ್ ವಹಿಸಿದ್ದರು. ಭಾರತ ಸ್ಕೌಟ್ಸ್ ಅಂಡ್ ಗೈಡ್ಸ್ನ ಕೋಲಾರ ಜಿಲ್ಲಾ ತರಬೇತಿ ಆಯುಕ್ತ ವಿ.ಬಾಬು, ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಅಧ್ಯಕ್ಷ ಎಂ.ವಿ.ಹನುಮಂತಯ್ಯ, ದಲಿತ ಸಂಘರ್ಷ ಸಮಿತಿ ರಾಜ್ಯಾಧ್ಯಕ್ಷ ಡಾ.ಅಶ್ವಥ್ ಅಂತ್ಯಜ, ನಿವೃತ್ತ ಉಪನ್ಯಾಸಕರಾದ ಕಾಳಪ್ಪ, ಪಂಡಿತ್ ವೆಂಕಟಶಪ್ಪ, ಕವಿ ಬಂಡಹಟ್ಟಿ ನಾರಾಯಣಸ್ವಾಮಿ, ಸಾಹಿತಿ ಹರಿ ನರಸಿಂಹ ಉಪಾಧ್ಯಾಯ, ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ನಾರಿಗಾನಹಳ್ಳಿ ಶ್ರೀನಿವಾಸ್, ಸಹಾಯಕ ಪ್ರಾಧ್ಯಾಪಕ ಪ್ರೊ.ಅನಂತರಾಜು, ಶಿಕ್ಷಕಿ ವಿಜಯಲಕ್ಷ್ಮಿ ಮಾತನಾಡಿದರು. ವೈದ್ಯ ಡಾ.ಕಿರಣ್ ಸೋಮಣ್ಣ ಗಂಗಾರವಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿ ಸಿ.ವಿ.ರಾಮನ್, ಪಿ.ಎಂ.ಕೃಷ್ಣಪ್ಪ, ರಾಜೇನಹಳ್ಳಿ ಚಂದ್ರಶೇಖರ್, ಸರ್ವೇಶ್, ಸ್ಕೌಟ್ಸ್ ಅಂಡ್ ಗೈಡ್ಸ್ನ ಸುರೇಶ್, ಕೊಡೂರು ಗೋಪಾಲ್, ಆಟೊ ಶ್ರೀನಿವಾಸ್ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.