ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲಾ ಸ್ಕೌಟ್ಸ್‌–ಗೈಡ್ಸ್‌ಗೆ ದ್ವಿತೀಯ ಸ್ಥಾನ

Last Updated 24 ಸೆಪ್ಟೆಂಬರ್ 2019, 13:21 IST
ಅಕ್ಷರ ಗಾತ್ರ

ಕೋಲಾರ: ‘ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಸಾಮಾಜಿಕ ಕಾರ್ಯಗಳ ಅನುಷ್ಠಾನದಲ್ಲಿ ರಾಜ್ಯ ಮಟ್ಟದಲ್ಲಿ ದ್ವಿತೀಯ ಸ್ಥಾನ ಪಡೆದಿರುವ ಜಿಲ್ಲೆಗೆ ಜಸ್ಟಿಸ್ ಕೆ.ಶಂಕರನಾರಾಯಣರಾವ್ ಫಲಕ ಲಭಿಸಿದೆ’ ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್ ಸಂತಸ ವ್ಯಕ್ತಪಡಿಸಿದರು.

ಇಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾನತಾಡಿ, ‘ಸಂಸ್ಥೆಯ ಚಟುವಟಿಕೆ ಉತ್ತಮಪಡಿಸಲು 10 ಎಕರೆ ಜಮೀನಿಗೆ ಮನವಿ ಬಂದಿದ್ದು, ಸದ್ಯದಲ್ಲೇ ಜಮೀನು ಗುರುತಿಸಿ ಮಂಜೂರು ಮಾಡಲಾಗುವುದು’ ಎಂದು ಭರವಸೆ ನೀಡಿದರು.

‘ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆ ಜಸ್ಟಿಸ್ ಕೆ.ಶಂಕರನಾರಾಯಣರಾವ್ ಪರ್ಯಾಯ ಫಲಕವನ್ನು ತನ್ನದಾಗಿಸಿಕೊಂಡಿದೆ. ಸಂಸ್ಥೆಯ ತರಬೇತಿ ಪಾಪರಾಜನಹಳ್ಳಿಯಲ್ಲಿ 10 ಎಕರೆ ಜಮೀನು ನೀಡಲಾಗುವುದು. ಸಂಸ್ಥೆಯು ಭವಿಷ್ಯದಲ್ಲಿ ಉತ್ತಮ ಚಟುವಟಿಕೆ ನಡೆಸಿ ಪ್ರಥಮ ಸ್ಥಾನ ಪಡೆಯಬೇಕು’ ಎಂದು ಆಶಿಸಿದರು.

‘ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ಆರೋಗ್ಯ, ಶಿಕ್ಷಣ ಇಲಾಖೆ ಯೋಜನೆಗಳ ಕುರಿತು ಅರಿವು, ಜಾಥಾ, ಅರಣ್ಯೀಕರಣ, ಸಸಿ ನೆಡುವ ಕಾರ್ಯಕ್ರಮಗಳಲ್ಲಿ ಕೈಜೋಡಿಸಿದೆ. ನಗರದಲ್ಲಿ ₹ 1.50 ಕೋಟಿ ವೆಚ್ಚದಲ್ಲಿ ನೂತನ ಸ್ಕೌಟ್ಸ್ ಭವನ ನಿರ್ಮಾಣವಾಗುತ್ತಿದೆ. ಜಿಲ್ಲಾ ಪಂಚಾಯಿತಿ ಸದಸ್ಯರು ತಲಾ ₹ 50 ಸಾವಿರ ನೀಡಲು ಒಪ್ಪಿದ್ದಾರೆ. ಆರ್.ಎಲ್.ಜಾಲಪ್ಪ ಸಂಸ್ಥೆಯು ₹ 5 ಲಕ್ಷ ದೇಣಿಗೆ ನೀಡುತ್ತಿದೆ’ ಎಂದು ವಿವರಿಸಿದರು.

ಹಸಿರೀಕರಣಕ್ಕೆ ಸಹಕಾರ: ‘ಸಂಸ್ಥೆಗೆ ತರಬೇತಿ ಕೇಂದ್ರವಿಲ್ಲ. ಈ ಬಾರಿ ಪ್ರಥಮ ಸ್ಥಾನ ಕೈತಪ್ಪಿದರೂ ಮೊದಲ ಬಾರಿಗೆ ದ್ವಿತೀಯ ಸ್ಥಾನ ಪಡೆಯಲು ಸಾಧ್ಯವಾಗಿದೆ’ ಎಂದು ಭಾರತ್‌ ಸ್ಕೌಟ್ಸ್‌ ಮತ್ತು ಗೈಡ್ಸ್‌ ಸಂಸ್ಥೆ ಜಿಲ್ಲಾ ಮುಖ್ಯ ಆಯುಕ್ತ ಕೆ.ವಿ.ಶಂಕರಪ್ಪ ಹೇಳಿದರು.
‘ಬೆಂಗಳೂರಿನಲ್ಲಿ ನಡೆದ ರಾಜ್ಯ ಪರಿಷತ್ ಸಭೆಯಲ್ಲಿ ಹಸಿರೀಕರಣಕ್ಕೆ ಬೀಜದುಂಡೆ ಬಿತ್ತನೆ ಹಾಗೂ ಸಸಿ ನಾಟಿಗೆ ತೀರ್ಮಾನ ಕೈಗೊಳ್ಳಲಾಗಿದ್ದು, ಹಸಿರೀಕರಣಕ್ಕೆ ಸಹಕಾರ ನೀಡುತ್ತೇವೆ’ ಎಂದರು.

ಸಂಸ್ಥೆಯ ಉಪಾಧ್ಯಕ್ಷ ಡಿ.ಎಲ್.ನಾಗರಾಜ್, ಸ್ಕೌಟ್ಸ್‌ ಆಯುಕ್ತ ಕೆ.ಆರ್.ಸುರೇಶ್, ಗೈಡ್ಸ್‌ ಆಯುಕ್ತೆ ಕೆ.ಆರ್.ಜಯಶ್ರೀ, ಕಾರ್ಯದರ್ಶಿ ಎಂ.ವಿ.ಜನಾರ್ದನ್‌, ಸಂಘಟನಾ ಆಯುಕ್ತ ವಿ.ಬಾಬು, ಸಂಘಟಕ ವಿಶ್ವನಾಥ್, ಕಾರ್ಯದರ್ಶಿ ಉಮಾದೇವಿ, ಸ್ಥಳೀಯ ಸಂಸ್ಥೆ ಅಧ್ಯಕ್ಷ ನಾರಾಯಣಸ್ವಾಮಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT