ಕೋಲಾರ: ಲೋಕ ಕಲ್ಯಾಣಾರ್ಥವಾಗಿ ಫೆ.6ರಿಂದ 8ರವರೆಗೆ ನಗರ ಹೊರವಲಯದ ನಾರಾಯಣಿ ಕಲ್ಯಾಣ ಮಂಟಪದಲ್ಲಿ ಶ್ರೀನಿವಾಸ ಕಲ್ಯಾಣೋತ್ಸವ ಹಮ್ಮಿಕೊಂಡಿದ್ದು, ಅಭಿವೃದ್ಧಿಗಾಗಿ ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಅಭಿವೃದ್ಧಿಗಾಗಿ ದೇವರ ಮೊರೆ ಹೋಗಬೇಕಾದ ಪರಿಸ್ಥಿತಿ ಬಂದಿದೆ ಎಂದು ವಿಧಾನ ಪರಿಷತ್ ಸದಸ್ಯ ಇಂಚರ ಗೋವಿಂದರಾಜು ಹೇಳಿದರು.

ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ನಮ್ಮ ಹಾಗೂ ಸಿಎಂಆರ್ ಶ್ರೀನಾಥ್ ಕುಟುಂಬದಿಂದ ಈ ಕಾರ್ಯಕ್ರಮ ನಡೆಯಲಿದೆ. ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಶನಿವಾರ ಭಾಗವಹಿಸಲಿದ್ದಾರೆ’ ಎಂದರು.

ಫೆ.6ರ ಶುಕ್ರವಾರ ಸಂಜೆ 5 ಗಂಟೆಯಿಂದ ವಿವಿಧ ಪೂಜೆಗಳು ನಡೆಯಲಿವೆ. ಫೆ.7ರ ಶನಿವಾರ ಬೆಳಿಗ್ಗೆ 7.30ಕ್ಕೆ ಶೋಭಾಯಾತ್ರೆ, 40 ಪುರೋಹಿತರಿಂದ ವೇದ ಪಾರಾಯಣ, 8.50 ರಿಂದ ಶ್ರೀನಿವಾಸ ಕಲ್ಯಾಣೋತ್ಸವ, 100 ಹೆಣ್ಣು ಮಕ್ಕಳೊಂದಿಗೆ ದಿಬ್ಬಣ ಉತ್ಸವ ಮೂರ್ತಿ ಮೆರವಣಿಗೆ, 12 ಗಂಟೆಗೆ ಮಹಾಮಂಗಳಾರತಿ ನಡೆಯಲಿದೆ. ಲೋಕಸಭಾ ಕ್ಷೇತ್ರದ 8 ವಿಧಾನಸಭಾ ಕ್ಷೇತ್ರಗಳಿಂದಲೂ ಸುಮಾರು 5 ಸಾವಿರ ಮಂದಿ ಬರುವ ನಿರೀಕ್ಷೆಯಿದೆ. ಫೆ.8ರ ಭಾನುವಾರ ಬೆಳಿಗ್ಗೆ ಲಕ್ಷ್ಮಿಪೂಜೆ ಸೇರಿದಂತೆ ವಿವಿಧ ಪೂಜಾ ಕಾರ್ಯಕ್ರಮ ನಡೆಯಲಿವೆ ಎಂದು ತಿಳಿಸಿದರು.

ಅಕ್ರಮದ ಚುನಾವಣೆ: ನರಸಾಪುರ ಸೊಸೈಟಿ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿಗಳು ಸೋಲನುಭವಿಸಿರುವುದಕ್ಕೆ ಪ್ರತಿಕ್ರಿಯೆ ನೀಡಿದ ಅವರು, ‘ಸಹಕಾರ ಕ್ಷೇತ್ರಕ್ಕೂ ರಾಜಕೀಯ ಕ್ಷೇತ್ರಕ್ಕೂ ವ್ಯತ್ಯಾಸ ಇದೆ. ಷೇರುದಾರರನ್ನು ಹೆಚ್ಚಿಸಿಕೊಂಡು ಎಲ್ಲ ತಯಾರಿ ಮಾಡಿಕೊಂಡು ನೇರವಾಗಿ ಚುನಾವಣೆಗೆ ಹೋಗಿ ದೌರ್ಜನ್ಯ ಹಾಗೂ ಅಕ್ರಮದಿಂದ ನಡೆಸಿರುವ ಚುನಾವಣೆ ಸಂಬಂಧ ಡಿ.ಸಿಗೆ ದೂರು ನೀಡಿದ್ದೇವೆ. ವೇಮಗಲ್ ಕುರುಗಲ್ ಪಟ್ಟಣ ಪಂಚಾಯಿತಿ ಹಾಗೂ ವಕ್ಕಲೇರಿ ಸೊಸೈಟಿಯಲ್ಲಿ ನಾವು ಗೆದ್ದಿಲ್ಲವೇ’ ಎಂದರು.

ಪಕ್ಷದಲ್ಲಿ ಶಿಸ್ತು ಇದೆ. ಬಿಟ್ಟು ಹೋಗುವವರು ಎಂದಿಗೂ ನಮ್ನ ಕಾರ್ಯಕರ್ತರು ಅಲ್ಲ. ಮೂಲ ಕಾರ್ಯಕರ್ತರು ಯಾರೂ ಬಿಟ್ಟು ಹೋಗುವುದಿಲ್ಲ. ಪಕ್ಷದ ಕಚೇರಿ ಕಟ್ಟಡ ನಿರ್ಮಾಣವು ತಾಂತ್ರಿಕ ಸಮಸ್ಯೆಯಿಂದಾಗಿ ಆರಂಭವಾಗಿಲ್ಲ. ಬಗೆಹರಿದ ಬಳಿಕ ನಿರ್ಮಾಣ ಮಾಡುತ್ತೇವೆ ಎಂದರು.

ಸಂಸದ ಎಂ.ಮಲ್ಲೇಶ್ ಬಾಬು, ಕೋಮುಲ್ ನಿರ್ದೇಶಕರಾದ ವಡಗೂರು ಡಿ.ವಿ.ಹರೀಶ್, ಚೆಲುವನಹಳ್ಳಿ ನಾಗರಾಜಪ್ಪ, ಜೆಡಿಎಸ್ ಮುಖಂಡರಾದ ಸಿಎಂಆರ್ ಶ್ರೀನಾಥ್, ಕೋಮುಲ್, ಬಣಕನಹಳ್ಳಿ ನಟರಾಜ್, ಬಾಬುಮೌನಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.