ಮಂಗಳವಾರ, ಮಾರ್ಚ್ 21, 2023
30 °C

ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಿ: ಶಾಸಕ ಕೆ.ವೈ.ನಂಜೇಗೌಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಾಲೂರು: ಸರ್ಕಾರಿ ನೌಕರರು ತಮ್ಮ ಮಕ್ಕಳನ್ನು ಕಡ್ಡಾಯವಾಗಿ ಸರ್ಕಾರಿ ಶಾಲೆಗಳಿಗೆ ದಾಖಲಿಸಿದಾಗ ಮಾತ್ರ ಸಾಮಾನ್ಯ ಜನರಿಗೂ ಸರ್ಕಾರಿ ಶಾಲೆಗಳ ಮೇಲೆ ವಿಶ್ವಾಸ ಹೆಚ್ಚಾಗಿ ಸರ್ಕಾರಿ ಶಾಲೆ ಉಳಿಯಲು ಸಾಧ್ಯ ಎಂದು ಶಾಸಕ ಕೆ.ವೈ.ನಂಜೇಗೌಡರು ಅಭಿಪ್ರಾಯಪಟ್ಟರು.

ಪದವಿಪೂರ್ವ ಕಾಲೇಜು ಸಭಾಂಗಣದಲ್ಲಿ ತಾಲ್ಲೂಕು ಶಿಕ್ಷಕರ ಸಂಘದಿಂದ ಏರ್ಪಡಿಸಿದ್ದ ಶಿಕ್ಷಕರ ದಿನಾಚರಣೆಯಲ್ಲಿ ಮಾತನಾಡಿದರು.

ಗುರುಭವನ ನಿರ್ಮಾಣ ಸಮಿತಿಯವರ ಬಳಿ ಚರ್ಚಿಸಿದ ನಂತರ ಕಾಮಗಾರಿಗೆ ಶಾಸಕರ ಅನುದಾನದಲ್ಲಿ ₹ 25 ಲಕ್ಷ ಅನುದಾನ ಪತ್ರ ನೀಡಲಾಗಿದ್ದು, ಕಾಮಗಾರಿ ಆರಂಭವಾದ ನಂತರ ಮತ್ತೆ ₹ 25 ಲಕ್ಷ ಅನುದಾನವನ್ನು ನೀಡುವುದಾಗಿ ಭರವಸೆ ನೀಡಿದರು.

ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾದ ಶಿಕ್ಷಕರಾದ ಗುಲ್ಜಾರ್, ಕೋದಂಡರಾಮಯ್ಯ, ಉಮೇಶ್ ಕುಮಾರ್ ಅವರನ್ನು ಅಭಿನಂದಿಸಲಾಯಿತು.

ತಹಶೀಲ್ದಾರ್ ಕೆ.ರಮೇಶ್, ಪುರಸಭಾ ಅಧ್ಯಕ್ಷ ಎನ್.ವಿ.ಮುರಳೀಧರ್, ಭಾರತಮ್ಮ, ಪಿ.ಎನ್.ಪರಮೇಶ್, ಕೃಷ್ಣಮೂರ್ತಿ, ವಿ. ಮುನೇಗೌಡ, ಕೃಷ್ಣಪ್ಪ, ಆರ್.ನರಸಿಂಹ, ಎಂ.ಸಿ‌ ಮುನಿರಾಜು, ಚಿಕ್ಕವೆಂಕಟೇಶ್, ಸಿ. ವಿಜಯಕುಮಾರ್, ಶಿಕ್ಷಕ ಎ.ಕೆ.ವೆಂಕಟೇಶ್, ಟಿ.ವೆಂಕಟಸ್ವಾಮಿ, ಗುಂಡಪ್ಪ, ರಮೇಶ್, ಷಣ್ಮುಖಯ್ಯ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು