ಶುಕ್ರವಾರ, ಡಿಸೆಂಬರ್ 4, 2020
24 °C

ಹಾಲು ಕರೆಯುವ ಯಂತ್ರ ಉದ್ಘಾಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ತಾಲ್ಲೂಕಿನ ಹುಲ್ಲಂಕಲ್ಲು ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಸಮೂಹ ಹಾಲು ಕರೆಯುವ ಯಂತ್ರಗಳನ್ನು ಕೋಚಿಮುಲ್‌ ನಿರ್ದೇಶಕ ಡಿ.ವಿ.ಹರೀಶ್‌ ಬುಧವಾರ ಉದ್ಘಾಟಿಸಿದರು.

‘ಹುಲ್ಲಂಕಲ್ಲು ಸಂಘಕ್ಕೆ ಒಕ್ಕೂಟದಿಂದ ಸುಮಾರು ₹ 3.50 ಲಕ್ಷ ಅನುದಾನ ನೀಡಲಾಗಿದೆ. ಹಾಲು ಉತ್ಪಾದಕರು ಹಾಲು ಒಕ್ಕೂಟದ ಸದುಪಯೋಗ ಪಡೆಯಬೇಕು’ ಎಂದು ಹರೀಶ್‌ ಸಲಹೆ ನೀಡಿದರು.

‘ಸಮೂಹ ಹಾಲು ಕರೆಯುವ ಯಂತ್ರಗಳಲ್ಲಿ ಹಾಲು ಕರೆಯುವುದರಿಂದ ಒಕ್ಕೂಟದಿಂದ ಸಂಘಕ್ಕೆ ಲೀಟರ್‌ಗೆ 30 ಪೈಸೆ ಹೆಚ್ಚಿಗೆ ನೀಡಲಾಗುವುದು. ಇದರಲ್ಲಿ 10 ಪೈಸೆ ಹಾಲು ಉತ್ಪಾದಕರಿಗೆ ನೀಡಬೇಕು ಮತ್ತು 20 ಪೈಸೆಯನ್ನು ಸಂಘದ ನಿರ್ವಹಣೆಗೆ ಬಳಸಬೇಕು’ ಎಂದು ಸೂಚಿಸಿದರು.

‘ಸಮೂಹ ಹಾಲು ಕರೆಯುವ ವ್ಯವಸ್ಥೆಯಿಂದ ಶುದ್ಧ ಮತ್ತು ಗುಣಮಟ್ಟದ ಹಾಲು ಉತ್ಪಾದನೆಗೆ ಸಹಕಾರಿಯಾಗುತ್ತದೆ. ಮಹಿಳೆಯರಿಗೆ ಹಾಲು ಕರೆಯುವ ಬವಣೆಯಿಂದ ಮುಕ್ತಿ ಸಿಗುತ್ತದೆ. ಸಂಘದ ಮೊದಲ ಅಂತಸ್ತಿನ ಕಟ್ಟಡ ನಿರ್ಮಾಣ ಮಾಡಿದರೆ ವೈಯಕ್ತಿಕವಾಗಿ ಧನಸಹಾಯ ಮಾಡುತ್ತೇನೆ’ ಎಂದು ಭರವಸೆ ನೀಡಿದರು.

ಕೋಚಿಮುಲ್‌ ತಾಲ್ಲೂಕು ಉಪ ವ್ಯವಸ್ಥಾಪಕ ಡಾ.ಎ.ಸಿ.ಶ್ರೀನಿವಾಸಗೌಡ, ಹುಲ್ಲಂಕಲ್ಲು ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಅಚ್ಚಪ್ಪ, ಗ್ರಾಮದ ಮುಖಂಡ ಈರಪ್ಪ, ಶಿಬಿರ ಅಧಿಕಾರಿಗಳಾದ ರಾಜಬಾಬು, ಸಮೀರ್‌ಪಾಷಾ ಹಾಜರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.