ಎತ್ತಿನಹೊಳೆ ಬಗ್ಗೆ ಬೇಕಂತಲೇ ಉತ್ಪ್ರೇಕ್ಷೆ: ಕೆ.ಆರ್. ರಮೇಶ್‌ಕುಮಾರ್ ಅಸಮಾಧಾನ

ಭಾನುವಾರ, ಜೂನ್ 16, 2019
32 °C

ಎತ್ತಿನಹೊಳೆ ಬಗ್ಗೆ ಬೇಕಂತಲೇ ಉತ್ಪ್ರೇಕ್ಷೆ: ಕೆ.ಆರ್. ರಮೇಶ್‌ಕುಮಾರ್ ಅಸಮಾಧಾನ

Published:
Updated:

ಕೋಲಾರ: ‘ಮಂಗಳೂರು ಭಾಗದ ದೇವಾಲಯಗಳಲ್ಲಿ ಪೂಜೆಗೂ ನೀರಿಲ್ಲ ಎನ್ನುವ ವಿಚಾರ ಕೇಳಿಬಂದಿದ್ದು, ಅದಕ್ಕೂ ಎತ್ತಿನಹೊಳೆ ಯೋಜನೆಗೂ ಯಾವುದೇ ಸಂಬಂಧವಿಲ್ಲ’ ಎಂದು ವಿಧಾನಸಭಾಕ್ಷ ಕೆ.ಆರ್.ರಮೇಶ್‌ ಕುಮಾರ್ ತಿಳಿಸಿದರು.

ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ನೀರಾವರಿ, ನಿಸರ್ಗದ ತೊಂದರೆಗೂ ಯೋಜನೆಗೂ ಯಾವುದೇ ಸಂಬಂಧವಿಲ್ಲ, ಆದರೂ ಕೆಲವರು ಬೇಕಂತಲೇ ಉತ್ಪ್ರೇಕ್ಷೆ ಮಾಡುತ್ತಿದ್ದಾರೆ’ ಎಂದು ದೂರಿದರು.

‘ಎತ್ತಿನಹೊಳೆಗೆ ಸಂಬಂಧಿಸಿದಂತೆ ಆ ಭಾಗದಲ್ಲಿ ವಿರೋಧ ವ್ಯಕ್ತವಾಗಿದ್ದು ನಿಜ. ಅವರೂ ನಮ್ಮ ಅಣ್ಣತಮ್ಮಂದಿರೇ, ಹೀಗಾಗಿ ಅವರ ಮನವೊಲಿಸಲಾಗಿದ್ದು, ಎಲ್ಲ ಸಹಕಾರ ನೀಡುತ್ತಿದ್ದಾರೆ’ ಎಂದರು.

‘ಕರಾವಳಿ ಭಾಗದಲ್ಲಿ ಬೀಳುವಂತಹ ಮಳೆ ಸುಮಾರು 450 ಟಿಎಂಸಿ ನೀರು ಅರಬ್ಬೀಸಮುದ್ರಕ್ಕೆ ಸೇರುತ್ತಿದೆ. 65 ವರ್ಷಗಳ ಇತಿಹಾಸದ ಅಂಕಿಅಂಶಗಳನ್ನು ಸಂಗ್ರಹಿಸಿದ ಹಿನ್ನೆಲೆಯಲ್ಲಿ ಸಕಲೇಶಪುರದ ಸಮೀಪ ಅಂದಾಜು 35 ಟಿಎಂಸಿ ಲಭ್ಯವಾಗಲಿದೆ ಎನ್ನುವುದು ತಿಳಿದುಬಂದಿದ್ದು, ಅಲ್ಲಿ ಹರಿದುಹೋಗುವ ನೀರಿಗೆ ಅಡ್ಡಲಾಗಿ ಗೋಡೆಯನ್ನು ಕಟ್ಟಿ ಈ ಭಾಗಕ್ಕೆ ಅವಶ್ಯವಿರುವ 24 ಟಿಎಂಸಿ ನೀರನ್ನು ಬಳಸಿಕೊಳ್ಳುತ್ತಿದ್ದೇವೆ’ ಎಂದು ತಿಳಿಸಿದರು.

‘ಎತ್ತಿನಹೊಳೆ ಕಾಮಗಾರಿ ಅತಿವೇಗವಾಗಿ ಕೆಲಸ ನಡೆಯುತ್ತಿದೆ. ಜೂ.11ರಂದು ಸ್ಥಳ ಪರಿಶೀಲನೆಗೆ ತೆರಳುತ್ತಿದ್ದೇವೆ. ತಿಪಟೂರು, ಚಿಕ್ಕನಾಯನಕನಹಳ್ಳಿ ಶಾಸಕರಿಗೆ ಇದ್ದ ಆಕ್ಷೇಪಗಳನ್ನು ಬಗೆಹರಿಸಲಾಗಿದೆ’ ಎಂದು ಹೇಳಿದರು.

ಸರ್ಕಾರದ ವಿರುದ್ಧ ಪತ್ರ ಬರೆದಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಬಗ್ಗೆ ಪ್ರಶ್ನೆಗೆ ಪ್ರತಿಕ್ರಿಯಿಸದ ರಮೇಶ್‌ಕುಮಾರ್, ‘ನಾನು ಯಾವುದೇ ಪತ್ರ ಬರೆದಿಲ್ಲ ಎಂದರು. ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಸ್ಥಾನಕ್ಕೆ ಎಚ್.ವಿಶ್ವನಾಥ್ ರಾಜೀನಾಮೆ ಸಲ್ಲಿಸುವ ಬಗ್ಗೆಯೂ ನನಗೆ ಗೊತ್ತಿಲ್ಲ’ ಎಂದರು.

‘ಎತ್ತಿನಹೊಳೆ, ಕೆಸಿವ್ಯಾಲಿ, ಅರಣ್ಯ ಇಲಾಖೆ, ರೈತರ ವಿಚಾರ ಮಾತನಾಡಿದ್ದೇನೆ ಅಷ್ಟೇ. ರಾಜಕಾರಣಕ್ಕೂ ನನಗೂ ಸಂಬಂಧವಿಲ್ಲ’ ಎಂದು ಪ್ರತಿಕ್ರಿಯಿಸಿದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 8

  Happy
 • 0

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !