ಗುರುವಾರ , ಅಕ್ಟೋಬರ್ 1, 2020
24 °C

ನೀರಿನಲ್ಲಿ ಮುಳುಗಿ ಬೆಂಗಳೂರಿನ ಇಬ್ಬರು ಬಾಲಕರ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಂಗಾರಪೇಟೆ: ಅತ್ತಿಗಿರಿಕೊಪ್ಪ ಕೆರೆಯಲ್ಲಿ ಈಜಲು ಹೋಗಿದ್ದ ಇಬ್ಬರು ಬಾಲಕರು ನೀರಿನಲ್ಲಿ ಮುಳುಗಿ ಗುರುವಾರ
ಮೃತಪಟ್ಟಿದ್ದಾರೆ.

ಬೆಂಗಳೂರು ಬಿ.ಜಿ.ಹಳ್ಳಿಯ ಅಸ್ಲಾಂ ಷರೀಫ್ ಮಕ್ಕಳಾದ ಅಶ್ವಕ್ ಷರೀಫ್ (18), ತಾಜ್ ಮೊಯುದ್ದೀನ್ (12) ಮೃತಪಟ್ಟವರು. ಅಶ್ವಕ್, ಪದವಿ ಪ್ರಥಮ ವರ್ಷ, ತಾಜ್, 7ನೇ ತರಗತಿ ಓದುತ್ತಿದ್ದರು. ಅತ್ತಿಗಿರಿ ಕೊಪ್ಪದ ತನ್ನ ಅತ್ತೆಯ ಮನೆಗೆ ಬಂದಿದ್ದರು. ಸಂಬಂಧಿಕರೆಲ್ಲರೂ ದರ್ಗಾಕ್ಕೆ ಪೂಜೆಗೆ ತೆರಳಿದ್ದಾಗ ನಾಲ್ಕು ಬಾಲಕರು ಕೆರೆಯತ್ತ ಹೋದರು. ಕೆರೆಗಿಳಿದ ಇಬ್ಬರೂ ನೀರಿನಲ್ಲಿ ಮುಳುಗುತ್ತಿರುವುದನ್ನು ಕಂಡ ಇನ್ನಿಬ್ಬರು, ಸಂಬಂಧಿಕರನ್ನು ಕರೆತರುವಷ್ಟರಲ್ಲಿ ನೀರಿನಲ್ಲಿ ಮುಳುಗಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.