ಮಂಗಳವಾರ, ಮಾರ್ಚ್ 9, 2021
26 °C

ವರ್ತೂರು ಪ್ರಕಾಶ್‌ ಅಪಹರಣ: ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲಾರ: ಮಾಜಿ ಸಚಿವ ವರ್ತೂರು ಪ್ರಕಾಶ್ ಅಪಹರಣ ಪ್ರಕರಣ ಸಂಬಂಧ ಪೊಲೀಸರು ಭಾನುವಾರ ಮತ್ತೊಬ್ಬ ಆರೋಪಿ ರೋಹಿತ್‌ನನ್ನು ಬಂಧಿಸಿದ್ದು, ಇದರೊಂದಿಗೆ ಬಂಧಿತರ ಸಂಖ್ಯೆ 7ಕ್ಕೆ ಏರಿಕೆಯಾಗಿದೆ.

ಪ್ರಕರಣ ಸಂಬಂಧ ರೋಹಿತ್‌ನನ್ನು ಪೊಲೀಸರು ಆರಂಭದಲ್ಲೇ ಬಂಧಿಸಿದ್ದರು. ಆತನನ್ನು ಪ್ರಕರಣದ ಪ್ರಮುಖ ಆರೋಪಿ ಕವಿರಾಜ್‌ನ ಪತ್ತೆಗಾಗಿ ತಮಿಳುನಾಡಿನ ಹೊಸೂರಿಗೆ ಕರೆದೊಯ್ದಿದ್ದರು. ಆಗ ರೋಹಿತ್‌ ಪೊಲೀಸರಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದ.

ವರ್ತೂರು ಪ್ರಕಾಶ್‌ ಅವರು 2020ರ ನ.25ರಂದು ತಾಲ್ಲೂಕಿನ ಬೆಗ್ಲಿಹೊಸಹಳ್ಳಿ ಬಳಿಯ ತಮ್ಮ ತೋಟದ ಮನೆಯಿಂದ ಕಾರಿನಲ್ಲಿ ಬೆಂಗಳೂರಿಗೆ ಹೋಗುತ್ತಿದ್ದಾಗ ಆರೋಪಿಗಳು ಅವರ ವಾಹನ ಅಡ್ಡಗಟ್ಟಿ ಅಪಹರಿಸಿದ್ದರು. ಜತೆಗೆ ವರ್ತೂರು ಪ್ರಕಾಶ್‌ರ ಕಾರು ಚಾಲಕನನ್ನು ಎಳೆದೊಯ್ದಿದ್ದರು.

ನಂತರ ವರ್ತೂರು ಪ್ರಕಾಶ್‌ ಮತ್ತು ಅವರ ಕಾರು ಚಾಲಕನನ್ನು 3 ದಿನ ಒತ್ತೆಯಾಳಾಗಿ ಇರಿಸಿಕೊಂಡು ₹ 48 ಲಕ್ಷ ಪಡೆದು ಹಲ್ಲೆ ನಡೆಸಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲ್ಲೂಕಿನ ಶಿವನಾಪುರ ಬಳಿ ಬಿಟ್ಟು ಪರಾರಿಯಾಗಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು