ಕೋಲಾರ: ‘ಪ್ರತಿನಿತ್ಯ ಎರಡು ವಾರ್ಡ್‌ಗಳಂತೆ ನಗರದ 35 ವಾರ್ಡ್‌ಗಳಿಗೂ ಭೇಟಿ ಕೊಟ್ಟು ಜನರ ಕುಂದು ಕೊರತೆ ಆಲಿಸಿ ಮೂಲಸೌಕರ್ಯ ಕಲ್ಪಿಸುತ್ತೇವೆ’ ಎಂದು ನಗರಸಭೆ ಅಧ್ಯಕ್ಷೆ ಶ್ವೇತಾ ಭರವಸೆ ನೀಡಿದರು.

ನಗರದ ಒಂದು ಮತ್ತು ಎರಡನೇ ವಾರ್ಡ್‌ಗೆ ಗುರುವಾರ ಭೇಟಿ ನೀಡಿ ಜನರ ಸಮಸ್ಯೆ ಆಲಿಸಿ ಮಾತನಾಡಿ, ‘ಟಮಕದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಕೆಟ್ಟು ಹೋಗಿ ಜನರಿಗೆ ತೀವ್ರ ಸಮಸ್ಯೆಯಾಗಿದೆ. ಈ ಘಟಕವನ್ನು ಶೀಘ್ರವೇ ದುರಸ್ತಿ ಮಾಡಿಸಿ. ವಾರ್ಡ್‌ನಲ್ಲಿ 2 ದಿನಕೊಮ್ಮೆ ಕಸ ಸಂಗ್ರಹಣೆ ಮತ್ತು ವಿಲೇವಾರಿ ಪ್ರಕ್ರಿಯೆ ನಡೆಯಬೇಕು’ ಎಂದು ನಗರಸಭೆ ಅಧಿಕಾರಿಗಳಿಗೆ ಸೂಚಿಸಿದರು.

‘ಕುಡಾ ಲೇಔಟ್‌ನಲ್ಲಿ ಅಮೃತ್ ಯೋಜನೆಯಡಿ ನಿರ್ಮಿಸಿರುವ ಉದ್ಯಾನವು ಸೂಕ್ತ ನಿರ್ವಹಣೆ ಇಲ್ಲದೆ ಸೊರಗಿದೆ. ಉದ್ಯಾನದಲ್ಲಿ ಕಸ ರಾಶಿಯಾಗಿ ಬಿದ್ದಿದ್ದು, ಸಾರ್ವಜನಿಕರು ಒಳಗೆ ಬರಲು ಹಿಂದೇಟು ಹಾಕುತ್ತಿದ್ದಾರೆ. ನಗರಸಭೆ ಸಿಬ್ಬಂದಿಯಿಂದ ತಿಂಗಳಿಗೆ 2 ಬಾರಿ ಉದ್ಯಾನ ಸ್ವಚ್ಛ ಮಾಡಿಸಿ’ ಎಂದು ತಿಳಿಸಿದರು.

‘ಗಾಂಧಿನಗರ ವಾರ್ಡ್‌ನಲ್ಲಿ ಕಸ, ಕುಡಿಯುವ ನೀರು ಮತ್ತು ಒಳಚರಂಡಿ ಸಮಸ್ಯೆಗಳಿವೆ. ಈ ಸಮಸ್ಯೆಗಳನ್ನು ಶೀಘ್ರವೇ ಪರಿಹರಿಸುತ್ತೇವೆ. ಸ್ಮಶಾನಕ್ಕೆ ನೀರಿನ ಸೌಲಭ್ಯ ಕಲ್ಪಿಸುತ್ತೇವೆ ಹಾಗೂ ವಿದ್ಯುತ್ ದೀಪ ಅಳವಡಿಸುತ್ತೇವೆ’ ಎಂದು ಭರವಸೆ ನೀಡಿದರು.

ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ವಿ.ಮಂಜುನಾಥ್, ಉಪಾಧ್ಯಕ್ಷ ಪ್ರವೀಣ್‌ಗೌಡ, ಆಯುಕ್ತ ಎಸ್.ಪ್ರಸಾದ್, ಕಿರಿಯ ಎಂಜಿನಿಯರ್ ಪೂರ್ಣಿಮಾ, ಪರಿಸರ ಎಂಜಿನಿಯರ್ ಪುನೀತ್, ಎಪಿಎಂಸಿ ಸದಸ್ಯ ವೆಂಕಟೇಶ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.