ಶನಿವಾರ, 3 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಹುಲ್ ರೀತಿಯೇ ಹೇಳಿಕೆ ನೀಡಿರುವ ನಲಪಾಡ್‌ ವಿರುದ್ಧವೂ ಹೋರಾಟ: ಕೋಲಾರದ ರಘುನಾಥ್‌

Last Updated 24 ಮಾರ್ಚ್ 2023, 12:53 IST
ಅಕ್ಷರ ಗಾತ್ರ

ಕೋಲಾರ: ‘ರಾಹುಲ್‌ ಗಾಂಧಿ ಅವರಿಗೆ ಶಿಕ್ಷೆಯಾದ ಮೇಲೆ ರಾಜ್ಯ ಯುವ ಕಾಂಗ್ರೆಸ್‌ ಅಧ್ಯಕ್ಷ ಮಹಮ್ಮದ್‌ ಹ್ಯಾರಿಸ್‌ ನಲಪಾಡ್‌ ಕೂಡ ಅದೇ ರೀತಿ ಮಾತನಾಡಿ ಸವಾಲು ಹಾಕಿದ್ದಾರೆ. ಈ ಬಗ್ಗೆಯೂ ಬಿಜೆಪಿ ಮುಖಂಡರೊಂದಿಗೆ ಮಾತನಾಡಿ ಕಾನೂನು ಹೋರಾಟಕ್ಕೆ ಮುಂದಾಗುತ್ತೇವೆ’ ಎಂದು ಬಿಜೆಪಿ ಮುಖಂಡ ಪಿ.ಎಂ.ರಘುನಾಥ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಬೆಂಗಳೂರಿನ ಕಾಂಗ್ರೆಸ್‌ ಭವನದ ಬಳಿ ಗುರುವಾರ ಮಾತನಾಡಿದ್ದ ನಲಪಾಡ್‌, ‘ಮೋದಿ ಅಂಥ ಹೆಸರು ಇಟ್ಟುಕೊಂಡವರೆಲ್ಲಾ ಕಳ್ಳರೇ, ಏನು ಮಾಡುತ್ತೀರಾ? ಕೇಸ್‌ ಹಾಕುತ್ತೀರಾ? ಹಾಕಿಕೊಳ್ಳಿ’ ಎಂದು ಸವಾಲು ಹಾಕಿರುವುದು ಗೊತ್ತಾಗಿದೆ.

ಈ ವಿಡಿಯೊವನ್ನು ‘ಬಿಜೆಪಿ ಕರ್ನಾಟಕ’ ತನ್ನ ಫೇಸ್‌ಬುಕ್‌ ಪುಟದಲ್ಲಿ ಶೇರ್‌ ಮಾಡಿಕೊಂಡು, ‘ಹಿಂದೂ ಸಮಾಜದ ಹಿಂದುಳಿದ ವರ್ಗದ ಒಂದು ಸಮುದಾಯವನ್ನು ಗುರಿಯಾಗಿಸಿಕೊಂಡು ಪದೇಪದೇ ನಿಂದಿಸುತ್ತಿರುವುದು ಕಾಂಗ್ರೆಸ್‌ ಪಕ್ಷದ ಜಿಹಾದಿ ಮಾನಸಿಕತೆಗೆ ಹಿಡಿದಿರುವ ಕನ್ನಡಿ. ಇದೂ ರಾಹುಲ್‌ ಗಾಂಧಿ ಅವರಂಥದ್ದೇ ಶಿಕ್ಷೆಯನ್ನು ಅಪೇಕ್ಷಿಸುತ್ತದೆ’ ಎಂದು ಆಕ್ರೋಶ ವ್ಯಕ್ತಪಡಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT