ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಮೆ ವೇಗದಲ್ಲಿ ಒಳಚರಂಡಿ ನಿರ್ಮಾಣ ಕಾಮಗಾರಿ

Last Updated 13 ಸೆಪ್ಟೆಂಬರ್ 2017, 9:18 IST
ಅಕ್ಷರ ಗಾತ್ರ

ಮಾಲೂರು: ಕೊಳಚೆ ನೀರು ಶುದ್ಧೀಕರಣ ಘಟಕವನ್ನು ₹ 10 ಕೋಟಿ ಮೊತ್ತದಲ್ಲಿ ಪಟ್ಟಣದ ದೊಡ್ಡಕೆರೆ ಕಟ್ಟೆಯ ಮಾಲೂರು–ಕಾಡದೇವನಹಳ್ಳಿ ರಸ್ತೆ ಬಳಿ ಒಂದು ಎಕರೆಯಲ್ಲಿ ನಿರ್ಮಾಣ ಮಾಡಲಾಗಿದೆ. ಈ ಶುದ್ಧೀಕರಣ ಘಟಕಕ್ಕೆ ಕೊಳಚೆ ನೀರು ಹರಿಸಲು ರಸ್ತೆಯಲ್ಲಿ ದೊಡ್ಡ ಗುಂಡಿಗಳನ್ನು ತೋಡಿ ಜಾಕ್ ವೆಲ್ ಯಂತ್ರ ಅಳವಡಿಸಲಾಗಿದೆ.

ಬಳಿಕ ರಸ್ತೆ ದುರಸ್ತಿ ಮಾಡಿಲ್ಲ. ಎಲ್ಲೆಂದರಲ್ಲಿ ರಸ್ತೆ ಅಗೆದಿರುವುದರಿಂದ ರಸ್ತೆ ಹಾಳಾಗಿದೆ. ಐದು ವರ್ಷಗಳ ಹಿಂದೆ ಕರ್ನಾಟಕ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ₹ 22.5 ಕೋಟಿ ವೆಚ್ಚದಲ್ಲಿ ಒಳಚರಂಡಿ ನಿರ್ಮಾಣ ಕಾಮಗಾರಿ ಕೈಗೊಂಡಿತ್ತು. 86 ಕಿ.ಮೀ ಉದ್ದದ ಕೊಳವೆ ಮಾರ್ಗ ನಿರ್ಮಾಣ ಮಾಡಲಾಗಿದೆ. 3,299 ಮ್ಯಾನ್ ಹೋಲ್ ನಿರ್ಮಿಸಲಾಗಿದೆ.

ಆದರೆ, ಕಾಮಗಾರಿ ಕೈಗೊಂಡ ಸಂದರ್ಭದಲ್ಲಿ ಹಾಳಾದ ರಸ್ತೆ ದುರಸ್ತಿ ಮಾಡದೇ ಇರುವುದರಿಂದ ಸಂಚಾರಕ್ಕೆ ಅಡಚಣೆಯಾಗಿದೆ. ‘ಗಾಂಧಿ ವೃತ್ತದಿಂದ ದೊಡ್ಡ ಕೆರೆ ಕಟ್ಟೆಯ ಪಕ್ಕದಲ್ಲಿ ಹಾದು ಹೋಗುವ 2 ಕಿ.ಮೀ ರಸ್ತೆಯು ಮುಂದೆ ಕಾಡದೇನಹಳ್ಳಿ , ನಲ್ಲಪನಹಳ್ಳಿ, ಯಶವಂತಪುರ, ಬೊಪ್ಪನಹಳ್ಳಿ ,ಚಿಕ್ಕಾಪುರ, ಮಾದನಹಟ್ಟಿ ಹುರುಳುಗೆರೆ ಸೇರಿದಂತೆ 10 ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯಾಗಿದೆ.

ಈಗ ರಸ್ತೆ ಹಾಳಾಗಿರುವುದರಿಂದ ಸಂಚಾರ ಸಮಸ್ಯೆ ಎದುರಾಗಿದೆ. ವಿಶೇಷವಾಗಿ ಮಕ್ಕಳಿಗೆ ಶಾಲೆಗೆ ಹೋಗಲು ತುಂಬಾ ತೊಂದರೆಯಾಗುತ್ತಿದೆ’ ಎಂದು ಚಿಕ್ಕಾಪುರ ಗ್ರಾಮದ ನಿವಾಸಿ ಸಿ.ಎಂ.ನಾರಾಯಣಸ್ವಾಮಿ ಕಿಡಿಕಾರಿದರು.

22.5 ಕೋಟಿ ಕಾಮಗಾರಿಗೆ ನಿಗದಿಪಡಿಸಿದ ಮೊತ್ತ
86 ಕಿ.ಮೀ ಚರಂಡಿ ಕೊಳವೆ ಮಾರ್ಗ
3299 ಮ್ಯಾನ್ ಹೋಲ್‌ಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT