ಬಂಗಾರಪೇಟೆ: ಕಾನ್ಫಿಡೆಂಟ್ ಗ್ರೂಪ್ ಮತ್ತು ಡಿ.ಕೆ.ರವಿ ವರ್ಗಾವಣೆಗೆ ಸಂಬಂಧಿಸಿದ ವಿಚಾರದಲ್ಲಿ ಮಾಜಿ ಸಚಿವ ಶ್ರೀನಿವಾಸಗೌಡ, ಶಾಸಕ ಎಸ್.ಎನ್.ನಾರಾಯಣಸ್ವಾಮಿ ಅವರ ಹೆಸರು ಪ್ರಸ್ತಾಪಿಸಿರುವುದು ಸಮಂಜಸವಲ್ಲ ಎಂದು ಬ್ಲಾಂಕ್ ಕಾಂಗ್ರೆಸ್ ಅಧ್ಯಕ್ಷ ಎಸ್.ಎ.ಪಾರ್ಥಸಾರಥಿ ಹೇಳಿದರು.

ಪಟ್ಟಣದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾನ್ಫಿಡೆಂಟ್ ಗ್ರೂಪ್ಗೆ ಸೇರಿದ ವಗ್ಗಯ್ಯನ ದಿನ್ನೆ ವಿವಾದಿತ ಜಮೀನು ಕಾನೂನಿನ ಅಡಿ ಕ್ರಯ ಮಾಡಲಾಗಿದೆ ಎಂದರು.

ಶಾಸಕರ ಅಭಿವೃದ್ಧಿ ಸಹಿಸದ ಮುಖಂಡರು ಸುಳ್ಳು ಆರೋಪ ಮಾಡಿದ್ದಾರೆ. ಅವರ ಹೇಳಿಕೆಗಳು ಸತ್ಯಕ್ಕೆ ದೂರವಾಗಿವೆ. ಡಿ.ಕೆ.ರವಿ ವರ್ಗಾವಣೆಯಾಗಿ ಆರು ತಿಂಗಳ ನಂತರ ಎಸ್.ಎನ್. ನಾರಾಯಣಸ್ವಾಮಿ ಅವರ ಹೆಸರು ತಳುಕು ಹಾಕಲಾಗಿದೆ. ಶಾಸಕರ ಮೇಲೆ ಅಪವಾದ ಬರಲೆಂದೇ ಬಂದ್ ಸಂದರ್ಭ ದೊಂಬಿ, ಗಲಾಟೆ ಮಾಡಿಸಲಾಗಿದೆ ಎಂದು ಆರೋಪಿಸಿದರು.

ಡಿ.ಕೆ.ರವಿ ಸಾವಿನ ಪ್ರಕರಣ ಸಿಬಿಐ ತನಿಖೆಗೆ ಒಪ್ಪಿಸಲಾಗಿದೆ . ತನಿಖೆ ನಂತರ ಸತ್ಯಾಂಶ ತಿಳಿಯಲಿದೆ ಎಂದರು. ಬೂದಿಕೋಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ್, ಕೆಜಿಎಫ್ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶಂಶುದ್ದಿನ್ ಬಾಬು, ರಾಯಪ್ಪ, ಮುನಿರಾಜು, ಪಾಕರಳ್ಳಿ ವೆಂಕಟೇಶಗೌಡ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.