ಕೋಲಾರ: ಜಿಲ್ಲೆಯ ಮುಳಬಾಗಿಲು ತಾಲ್ಲೂಕಿನ ನಗವಾರ ಗ್ರಾಮದಲ್ಲಿ ಮದ್ಯ ವ್ಯಸನ ಬಿಡಲು ನಾಟಿ ಔಷಧ ಸೇವಿಸಿದ್ದ ಇಬ್ಬರು ಭಾನುವಾರ ಮೃತಪಟ್ಟಿದ್ದಾರೆ.
ನಗವಾರದ ಚಲಪತಿ (55) ಮತ್ತು ಬಿ. ಶಂಕರ್ (44) ಮೃತಪಟ್ಟವರು. ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ಗೌನಿಪಲ್ಲಿಯಿಂದ ತಂದಿದ್ದ ನಾಟಿ ಔಷಧ ಸೇವಿಸಿ ಅಸ್ವಸ್ಥರಾದ ಇವರನ್ನು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.