ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೀಸಲಾತಿ ಕೀಳರಿಮೆ ಬಿಡಿ

Last Updated 15 ಏಪ್ರಿಲ್ 2017, 5:07 IST
ಅಕ್ಷರ ಗಾತ್ರ

ಮುಳಬಾಗಿಲು: ದೇಶದಲ್ಲಿ ಬಡತನ ನಿರ್ಮೂಲನೆ ಮಾಡಲು ಅಂಬೇಡ್ಕರ್ ಅವರು ಮೀಸಲಾತಿ ಜಾರಿಗೊಳಿಸಿದರು. ಹೀಗಾಗಿ ಕೆಲವರು ಮೀಸಲಾಯಿತಿಯ ಬಗ್ಗೆ ಕೀಳರಿಮೆ ಕಾಣುವುದನ್ನು ಬಿಡಬೇಕು ಎಂದು ಶಾಸಕ ಕೊತ್ತೂರು ಜಿ.ಮಂಜುನಾಥ್ ತಿಳಿಸಿದರು.

ನಗರದ ನೇತಾಜೀ ಕ್ರೀಡಾಂಗಣದಲ್ಲಿ ತಾಲ್ಲೂಕು ಆಡಳಿತ ಮತ್ತು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಶುಕ್ರವಾರ ಹಮ್ಮಿಕೊಂಡಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರ 126ನೇ ಜನ್ಮ ದಿನಾಚರಣೆಯಲ್ಲಿ ಮಾತನಾಡಿದರು.

‘ಅಂಬೇಡ್ಕರ್ ಅವರ ಚಿಂತನೆ ಸಮಾಜವನ್ನು ಶಾಂತಿ ಸುವ್ಯಸ್ಥೆಯಲ್ಲಿ ಮುನ್ನಡೆಸಲು ದಾರಿ ದೀಪವಾಗಿದೆ. ಅವರ ಬರವಣಿಗೆಯನ್ನು ಪಠ್ಯಕ್ಕಿಂತ ಪಠ್ಯೇತರ ವಿಷಯವಾಗಿ ತಿಳಿದುಕೊಳ್ಳಲು ಎಲ್ಲರೂ ಮುಂದಾಗಬೇಕು’ ಎಂದರು.

ನಗರಸಭೆ ಅಧ್ಯಕ್ಷ ಎಂ.ಆರ್.ಮುರಳಿ ಮಾತನಾಡಿ, ‘ಅಂಬೇಡ್ಕರ್ ಎಂದರೆ ಭಕ್ತಿ, ಮನೋಭಾವನೆ ಬರಬೇಕು. ಕೆಲವರು ಅವರನ್ನು ಜಾತಿಗೆ ಸೀಮಿತಿಗೊಳಿಸುತ್ತಿರುವುದು ಸರಿಯಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಎಂ.ಸಿ.ನೀಲಕಂಠೇಗೌಡ ಮಾತನಾಡಿದರು. ಅಂತರ್ಜಾತಿ ವಿವಾಹವಾದ 12 ದಂಪತಿಗೆ ₹ 12 ಲಕ್ಷದ ಚೆಕ್‌ ವಿತರಣೆ ಮಾಡಲಾಯಿತು. ಕಳೆದ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ  ವಿದ್ಯಾರ್ಥಿಗಳಿಗೆ ಲ್ಯಾಪ್ ಟ್ಯಾಪ್ ವಿತರಿಸಲಾಯಿತು.

ಉಪನ್ಯಾಸಕ ರಾಮಕೃಷ್ಣ, ಪ್ರಾಧ್ಯಾಪಕ ಕೆ.ವಿ.ಪುರುಷೋತ್ತಮ್, ಆಲಂಗೂರು ಮಂಜುನಾಥ್, ಜಿ.ಪಂ. ಸದಸ್ಯರಾದ ಉತ್ತನೂರು ವಿ.ಎಸ್.ಅರವಿಂದ್, ಪ್ರಕಾಶ್ ರಾಮಚಂದ್ರ, ತಹಶಿಲ್ದಾರ್ ಬಿ.ಎನ್.ಪ್ರವೀಣ್,  ತಾಲ್ಲೂಕು ಪಂಚಾಯಿತಿ ಸದಸ್ಯ ತೊರಡಿ ಎಂ.ಹರೀಶ್  ಕಾರ್ಯಕ್ರಮದಲ್ಲಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT