ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿತ್ತನೆ ಬೀಜ ಪೂರೈಕೆಗೆ ಅಗತ್ಯ ಕ್ರಮ

ಅನ್ನದಾತರಿಗೆ ಶಾಸಕ ಅಮರೇಗೌಡ ಬಯ್ಯಾಪುರ ಭರವಸೆ
Last Updated 5 ಅಕ್ಟೋಬರ್ 2020, 13:42 IST
ಅಕ್ಷರ ಗಾತ್ರ

ಕುಷ್ಟಗಿ: ‘ಹಿಂಗಾರು ಹಂಗಾಮಿನ ಬಿತ್ತನೆ ಬೀಜ ಪೂರೈಕೆಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ’ ಎಂದು ಶಾಸಕ ಅಮರೇಗೌಡ ಬಯ್ಯಾಪುರ ಹೇಳಿದರು.

ಇಲ್ಲಿಯ ರೈತ ಸಂಪರ್ಕ ಕೇಂದ್ರದಲ್ಲಿ ರೈತರಿಗೆ ಸೋಮವಾರ ಸಾಂಕೇತಿಕವಾಗಿ ಕಡಲೆ ಮತ್ತು ಜೋಳದ ಬಿತ್ತನೆ ಬೀಜ ವಿತರಿಸಿ ಮಾತನಾಡಿದರು.

ದೋಟಿಹಾಳದ ಹೆಚ್ಚುವರಿ ವಿತರಣಾ ಕೇಂದ್ರ ಸೇರಿದಂತೆ ತಾಲ್ಲೂಕಿನಲ್ಲಿರುವ ಇತರೆ ನಾಲ್ಕು ರೈತ ಸಂಪರ್ಕ ಕೇಂದ್ರಗಳಲ್ಲಿನ ವ್ಯಾಪ್ತಿಯಲ್ಲಿ ಎಲ್ಲರಿಗೂ ಬೀಜಗಳನ್ನು ಪೂರೈಸಲಾಗುತ್ತದೆ. ಈ ಬಾರಿ ಉತ್ತಮ ತಳಿ ಕಡಲೆ ಬೀಜ ವಿತರಿಸಲಾಗಿದ್ದು, ವೈಜ್ಞಾನಿಕ ರೀತಿಯಲ್ಲಿ ಬಿತ್ತನೆ ಮಾಡಬೇಕು. ಹೆಚ್ಚಿನ ಇಳುವರಿ ಪಡೆಯುವ ನಿಟ್ಟಿನಲ್ಲಿ ಕೃಷಿ ಇಲಾಖೆ ಅಧಿಕಾರಿಗಳು ನೀಡುವ ಸಲಹೆಗಳನ್ನು ಪಾಲಿಸಬೇಕು ಎಂದು ರೈತರಿಗೆ ಹೇಳಿದರು.

ಸಹಾಯಕ ಕೃಷಿ ನಿರ್ದೇಶಕ ಮಹಾದೇವಪ್ಪ ನಾಯಕ ಮಾತನಾಡಿ,‘ಹಿಂಗಾರು ಹಂಗಾಮಿಗೆ ತಾಲ್ಲೂಕಿಗೆ ಒಟ್ಟು 4500 ಕ್ವಿಂಟಲ್‌ ಕಡಲೆ ಬೀಜದ ಅಂದಾಜು ಬೇಡಿಕೆ ಇದೆ. ಸದ್ಯ 720 ಕ್ವಿಂಟಲ್‌ ಬಂದಿದೆ. ಸುಮಾರು 120 ಕ್ವಿಂಟಲ್ ಜೋಳದ ಬೀಜಕ್ಕೆ ಬೇಡಿಕೆ ಸಲ್ಲಿಸಲಾಗಿದೆ. ಈಗ 20 ಕ್ವಿಂಟಲ್‌ ಬಂದಿದೆ. ಕಡಲೆ ಬೀಜದ ಪೂರ್ಣ ದರ ಕ್ವಿಂಟಲ್‌ಗೆ ₹7,000 ಇದೆ. ರೈತರು ₹4,500 ಪಾವತಿಸಬೇಕಾಗುತ್ತದೆ. ಜೋಳದ ಪೂರ್ಣ ದರ ಕೇಜಿಗೆ ₹57 ಇದ್ದು ಪರಿಶಿಷ್ಟ ಜಾತಿ, ಪಂಗಡದವರಿಗೆ ₹30 ಹಾಗೂ ಸಾಮಾನ್ಯರಿಗೆ ₹20 ಸಹಾಯಧನದಲ್ಲಿವಿತರಿಸಲಾಗುತ್ತದೆ’ ಎಂದು ವಿವರಿಸಿದರು.

ಕೃಷಿ ಅಧಿಕಾರಿಗಳಾದ ನಾಗನಗೌಡ, ಬಾಲಪ್ಪ ಜಲಗೇರಿ, ರಾಘವೇಂದ್ರ ಕೊಂಡಗುರಿ ಮತ್ತು ಸಿಬ್ಬಂದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT