ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕುಷ್ಟಗಿ: ಕೃಷಿ, ತೋಟಗಾರಿಕೆ ಬೆಳೆಗಳು ಜಲಾವೃತ

ಕುಷ್ಟಗಿ ತಾಲ್ಲೂಕಿನಲ್ಲಿ ನಿರಂತರ ಮಳೆ
Published 13 ಜೂನ್ 2024, 15:31 IST
Last Updated 13 ಜೂನ್ 2024, 15:31 IST
ಅಕ್ಷರ ಗಾತ್ರ

ಕುಷ್ಟಗಿ: ಪಟ್ಟಣ ಸೇರಿದಂತೆ ತಾಲ್ಲೂಕಿನಾದ್ಯಂತ ಗುರುವಾರ ಮತ್ತೆ ಧಾರಾಕಾರ ಮಳೆಯಾಗಿದ್ದು ಜನಜೀವನ ಅಸ್ತವ್ಯಸ್ತಗೊಂಡಿದೆ.

ಮಳೆ ನೀರಿನಿಂದ ರಸ್ತೆಗಳು ಹಳ್ಳದಂತೆ ಗೋಚರಿಸಿದರೆ ಹೊಲದ ಒಡ್ಡುಗಳು ಒಡೆದು ಹೊಲಗಳ ಮೇಲ್ಮಣ್ಣು ಕೊಚ್ಚಿಹೋಗಿದೆ. ಹಳ್ಳಗಳಿಗೆ ನೀರು ಬಂದಿದೆ. ತೋಟಗಾರಿಕೆಯಲ್ಲಿ ಬೆಳೆದಿರುವ ತರಕಾರಿ ಹಣ್ಣಿನ ಬೆಳಗಳು ನೀರಿನಲ್ಲಿ ಮುಳುಗಿವೆ. ತೋಪಲಕಟ್ಟಿಯ ಚಂದಪ್ಪ ಜಂಗಣ್ಣಿ ಎಂಬುವವರಿಗೆ ಸೇರಿದ ನಾಲ್ಕು ಎಕರೆ ಪಪ್ಪಾಯಿ ತೋಟ ನೀರಿನಿಂದ ಆವೃತವಾಗಿದ್ದು ಬೆಳೆಗೆ ಬಹಳಷ್ಟು ಹಾನಿಯಾಗಲಿದೆ ಎಂದು ರೈತರ ಅಳಲು ತೋಡಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT