ಯಲಬುರ್ಗಾ: ತಾಲ್ಲೂಕಿನ ಬಸಾಪೂರ ಗ್ರಾಮದ ಪ್ರಾಥಮಿಕ ಶಾಲೆಯ ಗೋಡೆ ಮೇಲೆ ವಿಶ್ವಬಂಧು ಸೇವಾ ಗುರುಬಳಗದ ವತಿಯಿಂದ ಬರೆದ 26ನೇ ಗೋಡೆ ಬರಹವನ್ನು ಅನಾವರಣಗೊಳಿಸಲಾಯಿತು.

ನೇತೃತ್ವ ವಹಿಸಿದ್ದ ಬಳಗದ ಮುಖಸ್ಥ ಸಿದ್ದಲಿಂಗಪ್ಪ ಶ್ಯಾಗೋಟಿ ಮಾತನಾಡಿ, ‘ಸಮಾನ ಮನಸ್ಕರು ಸೇರಿ ತಾಲ್ಲೂಕು ಸೇರಿದಂತೆ ವಿವಿಧೆಡೆ ಶಾಲೆಯ ಗೋಡೆಗೆ ಅಗತ್ಯ ಶೈಕ್ಷಣಿಕ ಚಿತ್ರಗಳು, ವಿಜ್ಞಾನ ಬರಹಗಳು ಹಾಗೂ ಮಕ್ಕಳ ಕಲಿಕೆಗೆ ಪೂರಕವಾಗುವ ಚಿತ್ರಗಳನ್ನು ಬಿಡಿಸಿ ಗೋಡೆಯನ್ನು ಸುಂದರಗೊಳಿಸುವ ಕೆಲಸ ಉಚಿತವಾಗಿ ಮಾಡಲಾಗುತ್ತಿದೆ. ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಮಕ್ಕಳ ಕಲಿಯುವ ಶಾಲೆಯಲ್ಲಿ ಉತ್ತಮ ಕಲಿಕಾ ವಾತಾವರಣ ನಿರ್ಮಾಣದ ಉದ್ದೇಶ ಹಾಗೂ ಗೋಡೆಗಳು ಕೂಡಾ ಪಾಠ ಮಾಡುತ್ತಿರುವಂತಿರಬೇಕು. ಇದರಿಂದ ಮಕ್ಕಳು ನೋಡುತ್ತಾ, ಆಡುತ್ತಾ ಕಲಿಯುತ್ತವೆ’ ಎಂದು ಅಭಿಪ್ರಾಯಪಟ್ಟರು.

ಸಮೂಹ ಸಂಪನ್ಮೂಲ ವ್ಯಕ್ತಿ ನಾಗರಾಜ ಕುರಿ ಹಾಗೂ ಶಾಲೆಯ ಮುಖ್ಯ ಶಿಕ್ಷಕರಾದ ದೇವಪ್ಪ ತಳವಾರ ಸಂತಸ ವ್ಯಕ್ತಪಡಿಸಿದರು.

ಗೋಡೆ ಬರಹ ಸೇವಾ ಕಾರ್ಯದಲ್ಲಿ ಶಿವಶಂಕ್ರಪ್ಪ ಹಳ್ಳದ, ಕೊಟ್ರೇಶ ಪಟ್ಟಣ, ಪ್ರಭು ಶಿವನಗೌಡ್ರ, ಅನ್ವರಹುಸೇನ ಸಂತು, ಪರಮೇಶ ಚಿಂತಾಮಣಿ, ಶರಣು ವಾಳದ, ಶಿವರಾಜ ಕವಡಿಮಟ್ಟಿ, ಮಂಜುನಾಥ ಮನ್ನಾಪುರ, ಮೆಹಬೂಬ ಬಾವಿಕಟ್ಟಿ, ಸಿದ್ರಾಮಪ್ಪ ತಿಪ್ಪರಸನಾಳ, ಹುಸೇನಸಾಬ್ ಬಾಗವಾನ್, ರಾಜಮಹ್ಮದ್ ಬಾಳಿಕಾಯಿ, ಮುರ್ತುಜಾಸಾಬ ಮುಜಾವರ, ಮಂಜುನಾಥ ಕೊಡಕೇರಿ, ಮಂಜುನಾಥ ಬೂದಿಹಾಳ, ಕಳಕನಗೌಡ ಪಾಟೀಲ, ಪ್ರಭಯ್ಯ ಬಳಗೇರಿಮಠ, ಅಮೀನ್ ಮುಲ್ಲಾ, ರಾಘವೇಂದ್ರ ಗೋನಾಳ, ರಾಜೇಶ ಹಡಪದ ಮತ್ತಿತರರು ಉಪಸ್ಥಿತರಿದ್ದರು.

ಎಸ್ಡಿಎಂಸಿ ಅಧ್ಯಕ್ಷ ಬಸವರಾಜ ಹಾದಿಮನಿ, ಶಿಕ್ಷಕರಾದ ನಿಂಗಪ್ಪ ತೋಪಲಕಟ್ಟಿ, ದೇವಪ್ಪ ಹಲಗೇರಿ, ಹುಲಗಪ್ಪ ಹಿರೇಮನಿ ಉಪಸ್ಥಿತರಿದ್ದರು. ಶಿಕ್ಷಕ ಸಕ್ರಪ್ಪ ಕುಷ್ಟಗಿ ವಂದಿಸಿದರು. ಬಳಗದ ಸದಸ್ಯರನ್ನು ಗ್ರಾಮಸ್ಥರು ಸನ್ಮಾನಿಸಿ ಗೌರವಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.