ಕೊಪ್ಪಳ ಜಿಲ್ಲೆಯ ಇಬ್ಬರು ಕಲಾವಿದರಿಗೆ ಬಯಲಾಟ ಅಕಾಡೆಮಿ ಪ್ರಶಸ್ತಿ ಲಭಿಸಿದೆ. ಕುಷ್ಟಗಿ ತಾಲ್ಲೂಕಿನ ಇಮಾಮ್ಸಾಬ್ ಕೋಳೂರು ಹಾಗೂ ಯಲಬುರ್ಗಾ ತಾಲ್ಲೂಕು ಲಿಂಗನಬಂಡಿಯ ತಿಮ್ಮಣ್ಣ ದಾಸರ ಅವರು ಈ ಗೌರವಕ್ಕೆ ಭಾಜನರಾಗಿದ್ದಾರೆ. ಅಕಾಡೆಮಿ ಪ್ರಶಸ್ತಿ ಬಂದಿರುವುದಕ್ಕೆ ಈ ಇಬ್ಬರೂ ‘ಪ್ರಜಾವಾಣಿ’ಯೊಂದಿಗೆ ಸಂತಸ ಹಂಚಿಕೊಂಡಿದ್ದಾರೆ

ತಲೆಮಾರುಗಳ ಪ್ರದರ್ಶನಕ್ಕೆ ‘ಬಯಲಾಟದ’ ಗರಿ

ಕುಷ್ಟಗಿ:‘ತಾತ ದೀನಸಾಬ್ ಕೋಳೂರು ಮುಸಲ್ಮಾನರಾಗಿದ್ದರೂ ಅವರ ಬಾಯಲ್ಲಿ ರಾಮಾಯಣ ಮಹಾಕಾವ್ಯ ಲೀಲಾಜಾಲವಾಗಿ ಮೂಡಿಬರುತ್ತಿತ್ತು. ತಂದೆ ಹುಸೇನಸಾಬರು ತಾತನ ಗರಡಿಯಲ್ಲೇ ಪಳಗಿದರು. ಪಿಟೀಲು, ಹಾರ್ಮೋನಿಯಂ ನುಡಿಸುವುದರಲ್ಲಿ ನಿಪುಣರು. ಜತೆಗೆ ಸಂಗೀತವನ್ನೂ ಒಲಿಸಿಕೊಂಡಿದ್ದಾರೆ. ಹೀಗಾಗಿ ನಾನು ಬಾಲಕನಿದ್ದಾಗಲೇ ದೊಡ್ಡಾಟ, ಬಯಲಾಟ, ಸಂಗೀತದ ಗೀಳು ಹತ್ತಿಸಿಕೊಂಡು, ಎಲ್ಲ ಮಜಲುಗಳನ್ನು ಸಲೀಸಾಗಿ ಕಲಿಯಲು ಸಾಧ್ಯವಾಯಿತು. ಈ ಪರಂಪರೆ ಮರಿಮೊಮ್ಮಕ್ಕಳವರೆಗೂ ಮುಂದುವರಿದಿದೆ...

ಇವು ಪ್ರಸಕ್ತ ಸಾಲಿನ ಬಯಲಾಟ ಅಕಾಡೆಮಿ ಪ್ರಶಸ್ತಿಗೆ ಭಾಜನರಾಗಿರುವ ತಾಲ್ಲೂಕಿನ ಹಿರೇಮನ್ನಾಪುರ ಗ್ರಾಮದ ಹಿರಿಯ ಕಲಾವಿದ ಇಮಾಮ್ಸಾಬ್ ಕೋಳೂರು ಅವರು ತಮ್ಮ ಮೂರು ತಲೆಮಾರಿನವರೆಗಿನ ಕಲಾಪ್ರಪಂಚವನ್ನು ಹೀಗೆ ‘ಪ್ರಜಾವಾಣಿ’ಯೊಂದಿಗೆ ಬಿಚ್ಚಿಟ್ಟರು.

ಬಾಲ್ಯದಲ್ಲೇ ಅಪ್ಪನನ್ನು ಹಿಂಬಾಲಿಸಿದ ಇಮಾಮ್ಸಾಬ್ ಬಯಲಾಟ ಪ್ರದರ್ಶನಕ್ಕೆ ಸಂಬಂಧಿಸಿದ ಎಲ್ಲದನ್ನೂ ಕರಗತಮಾಡಿಕೊಂಡಿದ್ದಾರೆ. ಜತೆಗೆ ಪಿಟೀಲು, ಹಾರ್ಮೋನಿಯಂ ನುಡಿಸುವುದನ್ನು ಕರಗತಮಾಡಿಕೊಂಡಿದ್ದಾರೆ. ಜೊತೆಗೆ 1976ರಿಂದಲೇ ಕಲಾಪರಂಪರೆಗೆ ನೀರೆಯುತ್ತ ಬಂದಿದ್ದಾರೆ. ಈವರೆಗೆ ಸುಮಾರು 200ಕ್ಕೂ ಹೆಚ್ಚು ಬಯಲಾಟ, ದೊಡ್ಡಾಟ, ಪೌರಾಣಿಕ ನಾಟಕ ಪ್ರಯೋಗಗಳನ್ನು ನಿರ್ದೇಶಿಸಿದ್ದಾರೆ. ಪತ್ನಿ ರಾಜಾಬಿ ಸ್ವತಃ ಜನಪದ ಕಲಾವಿದೆಯಾಗಿದ್ದರೆ, ಪುತ್ರ ರಾಜಾಸಾಬ್ ಸಂಗೀತ ಕ್ಷೇತ್ರದಲ್ಲಿ ಸೀನಿಯರ್ ಗ್ರೇಡ್ ಪೂರ್ಣಗೊಳಿಸಿ ಶಾಸ್ತ್ರೀಯವಾಗಿ ತಂದೆಯ ಕಲೆಯನ್ನು ಆರಾಧಿಸುತ್ತಿರುವುದು ಕೋಳೂರು ಕುಟುಂಬಕ್ಕೆ ಹೆಮ್ಮೆಯ ಸಂಗತಿಯಾಗಿದೆ. ಇಮಾಮ್ಸಾಬ್ ಅವರ ಕಲೆ ಗೌರವಕ್ಕೆ ಈಗಾಗಲೇ ಅನೇಕ ಪ್ರಶ್ತಿಗಳು ಬಂದಿದ್ದು ರಾಜ್ಯ ಸರ್ಕಾರ ಕೊಡಮಾಡಿರುವ ಪ್ರಶಸ್ತಿ ಸಾಧನೆಯ ಕಿರಿಟಕ್ಕೆ ಮತ್ತೊಂದು ಗರಿ ಸಿಕ್ಕಿಸಿದಂತಾಗಿದೆ.

ಬಯಲಾಟ ಕಲೆಗೆ ಜೀವತುಂಬಿದ ತಿಮ್ಮಣ್ಣ ದಾಸರ

ಕುಷ್ಟಗಿ: ಅ, ಆ ಮೂಲಾಕ್ಷರ ಕಲಿಸಿದ ದಿ. ಅಡವಿರಾವ ಕುಲಕರ್ಣಿ ಮೊದಲ ಅಕ್ಷರ ಗುರು ಆಗಿದ್ದರೆ, ಮೃದಂಗ ಕಲಾವಿದರಾಗಿದ್ದ ಅಪ್ಪ ಮುದುಕಪ್ಪ, ಮಾವ ಕೃಷ್ಣಮೂರ್ತಿ ಜನಪದ ಕಲಾಪ್ರಪಂಚಕ್ಕೆ ನನ್ನನ್ನು ಧಾರೆ ಎರೆದರು. ಊರ ಮುಂದಿನ ಹನುಮಪ್ಪನ ಗುಡಿಯಲ್ಲಿ ಕಲಿತ ನಾಲ್ಕು ಅಕ್ಷರದ ಮೂಲಕ ಗುರು ತೋರಿದ ದಾರಿ ಇಲ್ಲಿಯವರೆಗೂ ಕರೆ ತಂದಿದೆ...ಪ್ರಸಕ್ತ ವರ್ಷದ ಬಯಲಾಟ ಆಕಾಡೆಮಿ ಪ್ರಶಸ್ತಿ ಪುರಸ್ಕೃತರಾಗಿರುವ ಪಟ್ಟಣದ ನಿವಾಸಿ ತಿಮ್ಮಣ್ಣ ದಾಸರ ಪ್ರಶಸ್ತಿ ಕುರಿತು ಸಂತಸ ಹಂಚಿಕೊಂಡಿದ್ದು ಹೀಗೆ.

ಅಲೆಮಾರಿ ಪರಿಶಷ್ಟ ಜನಾಂಗದ ತಿಮ್ಮಣ್ಣ ಕಳೆದ ಐದು ದಶಕಗಳಿಂದಲೂ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಬಯಲಾಟ, ಸಂಗೀತ ನಿರ್ದೇಶಕರಾಗಿ ನೂರಾರು ಪ್ರಯೋಗಗಳ ಮೂಲಕ ಬಯಲಾಟ ಕಲೆಗೆ ಜೀವ ತುಂಬಿದ್ದಾರೆ. ಬಿಡುವಿಲ್ಲದ ಕಲಾವಿದರಾಗಿರುವ ತಿಮ್ಮಣ್ಣ ಸ್ವತಃ ಪಿಟೀಲು ಕಲಾವಿದರೂ ಆಗಿದ್ದು ಬಯಲಾಟದಲ್ಲಿ ಈ ವಾದ್ಯವನ್ನೂ ಬಳಸುತ್ತಿರುವುದು ವಿಶೇಷ.

ಮಾರೆಪ್ಪ ದಾಸರ ಅವರೂ ಸೇರಿದಂತೆ ಲಿಂಗನಬಂಡಿ ಗ್ರಾಮ ಇನ್ನೂ ಅನೇಕ ಜನಪದ ಕಲಾವಿದರನ್ನು ಹೊಂದಿರುವುದು ಹೆಮ್ಮೆಯ ಸಂಗತಿ. ಅಂಥವರಲ್ಲಿ ಒಬ್ಬರಾದ ಸರಳ, ಸಜ್ಜನಿಕೆ ವ್ಯಕ್ತಿತ್ವದ ತಿಮ್ಮಣ್ಣ ದಾಸರ ಬಯಲಾಟದ ಕಲೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ತಮ್ಮ ಬದುಕನ್ನೇ ಸಮರ್ಪಿಸಿಕೊಂಡಿದ್ದು ಅನೇಕ ಪ್ರಶಸ್ತಿಗಳು ಅವರನ್ನು ಹುಡುಕಿಕೊಂಡು ಬಂದಿವೆ. ಸರ್ಕಾರದ, ಸಂಘ ಸಂಸ್ಥೆಗಳು ನಡೆಸಿದ ಅನೇಕ ಉತ್ಸವಗಳಲ್ಲಿ ತಮ್ಮ ಕಲಾಪ್ರತಿಭೆಯನ್ನು ಪ್ರದರ್ಶಿಸಿ ಸೈ ಎನಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ ತಿಮ್ಮಣ್ಣ ಅವರ ಅವರ ಅನೇಕ ಪುತ್ರರು ಶಾಸ್ತ್ರೀಯ ಸಂಗೀತ, ಸುಗಮ ಸಂಗೀತ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವುದು ಮತ್ತೊಂದು ವಿಶೇಷ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.