ಯಲಬುರ್ಗಾ: ತಾಲ್ಲೂಕಿನ ಗಡಿ ಗ್ರಾಮಗಳಾದ ಹಿರೇವಡ್ರಕಲ್ಲ, ಕಟಗಿಹಳ್ಳಿ ಹಾಗೂ ತಿಪ್ಪನಾಳ ಮಾರ್ಗವಾಗಿ ಹಿರೇವಂಕಲಕುಂಟಾ, ತರಲಕಟ್ಟಿ ಹಾಗೂ ವಜ್ರಬಂಡಿ ಗ್ರಾಮದ ಮೂಲಕ ಯಲಬುರ್ಗಾಕ್ಕೆ ತೆರಳುವ ಹೊಸ ಬಸ್ ಸಂಚಾರ ಆರಂಭವಾಗಿದೆ. ಮಂಗಳವಾರ ಹಿರೇವಡ್ರಕಲ್ಲ ಗ್ರಾಮಸ್ಥರು ಬಸ್‌ಗೆ ವಿಶೇಷ ಪೂಜೆ ಸಲ್ಲಿಸಿ ಸಂಭ್ರಮಿಸಿದರು.
ಬಸ್ ಆರಂಭಿಸಬೇಕು ಎನ್ನುವುದು ಇಲ್ಲಿಯ ಜನರ ಬಹುದಿನಗಳ ಬೇಡಿಕೆಯಾಗಿತ್ತು. ಬಸ್ ಸಂಚಾರ ಆರಂಭಗೊಂಡಿದ್ದಕ್ಕೆ ಹಿರೇವಡ್ರಕಲ್ಲ ಸೇರಿದಂತೆ ಅನೇಕ ಗ್ರಾಮಸ್ಥರಿಗೆ ಅನುಕೂಲವಾಗಿದೆ. ಬೆಳಿಗ್ಗೆ 9ಗಂಟೆಗೆ ಹಿರೇವಡ್ರಕಲ್ಲ ಗ್ರಾಮವನ್ನು ಬಿಟ್ಟು ವಿವಿಧ ಗ್ರಾಮದಲ್ಲಿ ಸಂಚರಿಸಿ ಯಲಬುರ್ಗಾ ಪಟ್ಟಣಕ್ಕೆ ಬರಲಿದೆ. ಬೆಳಿಗ್ಗೆ ವಿವಿಧ ವಿದ್ಯಾರ್ಥಿಗಳಿಗೆ ಹಾಗೂ ವಿವಿಧ ಕೆಲಸ ಕಾರ್ಯಗಳಿಗೆ ಪಟ್ಟಣಕ್ಕೆ ಬರುವ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ತರಲಕಟ್ಟಿಯ ಶ್ರೀಕಾಂತಗೌಡ ಪಾಟೀಲ ಹರ್ಷ ವ್ಯಕ್ತಪಡಿಸಿದ್ದಾರೆ.
ಹಿರೇವಡ್ರಕಲ್ಲ ಗ್ರಾಮದ ಗಣ್ಯರಾದ ಪ್ರಭುಗೌಡ ಪೊಲೀಸ್ ಪಾಟೀಲ, ನಾಗಪ್ಪ ಚುಕಣಿ, ಮುತ್ತಣ್ಣ ಮೇಟಿ, ಯಮನೂರಪ್ಪ ಹುಗ್ಗೆಪ್ಪನವರ, ಯಮನೂರಪ್ಪ ಕಂಬಳಿ, ಅಶೋಕ ಕೋಡದಾಳ, ಬಾಲಪ್ಪ ಮೇಟಿ, ಶಿವಮೂರ್ತಿ ಕಂಬಳಿ ಹಾಗೂ ಕೇಶಪ್ಪ ಮನ್ನಾಪುರ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.