ಸೋಮವಾರ, ನವೆಂಬರ್ 28, 2022
20 °C

ಜಿಲ್ಲೆಯ ವಿವಿಧೆಡೆ ಸಹಸ್ರಾರ್ಜುನ ಜಯಂತಿ ಆಚರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾರಟಗಿ: ಪಟ್ಟಣದಲ್ಲಿ ಸೋಮವಾರ ಎಸ್‌ಎಸ್‌ಕೆ ಸಮುದಾಯದ ವತಿಯಿಂದ ಸೋಮವಂಶ ಸಹಸ್ರಾರ್ಜುನ ಮಹಾರಾಜ ಜಯಂತಿಯನ್ನು ಸಂಭ್ರಮದೊಂದಿಗೆ ಆಚರಿಸಲಾಯಿತು.

ವೆಂಕಟೇಶ್ವರ ದೇವಸ್ಥಾನದ ಬಳಿ ವರದಜೋಷಿ ಅವರು ಸಾರೋಟದ ಮೆರವಣಿಗೆ ಚಾಲನೆ ನೀಡಿದರು. ಎಸ್‌ಎಸ್‌ಕೆ ಸಮುದಾಯದ ಧರ್ಮದರ್ಶಿ ಲಕ್ಷ್ಮಿಕಾಂತ ಬಾಬಾಸಾ ಸಾರೋಟಿನಲ್ಲಿ ಆಸೀನರಾಗಿದ್ದರು. ಪಟ್ಟಣದ ಪ್ರಮುಖ ರಸ್ತೆಗಳ ಮೂಲಕ ಅಂಬಾಭವಾನಿ ದೇವಸ್ಥಾನದ ವಾರೆಗೆ ಮೆರವಣಿಗೆ ನಡೆಯಿತು.

ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಶಿವರಾಜ ತಂಗಡಗಿ ಮಾತನಾಡಿ, ಕಾಲ ಬದಲಾದರೂ ಎಸ್‌ಎಸ್‌ಕೆ ಸಮುದಾಯ ತನ್ನ ಒಗ್ಗಟ್ಟನ್ನು ಉಳಿಸಿಕೊಂಡಿದೆ. ವ್ಯಾಪಾರ ವಹಿವಾಟಿನ ಮೂಲಕ ಆರ್ಥಿಕ ಅಭಿವೃದ್ಧಿ ಹೊಂದುವುದರ ಜತೆಗೆ ಇತರೆ ಸಹೋದರ ಸಮುದಾಯಗಳ ಜತೆ ಉತ್ತಮ ಬಾಂಧವ್ಯ ಹೊಂದಿದೆ. ಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ಸಮುದಾಯ ಇನ್ನಷ್ಟು ಕಾಳಜಿ ವಹಿಸಬೇಕು ಎಂದು ಹೇಳಿದರು.

ಎಸ್‌ಎಸ್‌ಕೆ ಸಮಾಜದ ಅಧ್ಯಕ್ಷ ಶರುಣುಸಾ ನಗಾರಿ ಮಾತನಾಡಿದರು. ಪ್ರಾರಂಭದಲ್ಲಿ ಸಹಸ್ರಾರ್ಜುನ ಭಾವ ಚಿತ್ರಕ್ಕೆ ಪೂಜೆ, ಅಭಿಷೇಕ ಮತ್ತು ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು.

ಡಾ.ಅಂಭಾಸಾ ರಾಯಭಾಗಿ, ಜಗನಾಥಸಾ ರಾಜೊಳ್ಳಿ, ಬಾಬಾಸಾ ಮಸೋದೆ, ತುಳಜರಾಮಸಿಂಗ್ರಿ, ಮಂಜುನಾಥ ಮಿಸ್ಕಿನ್, ಕಳುಕುಸಾ ಬಾಕಳೆ, ನಾಗರಾಜ, ಹನುಮಂತಸಾ ಕಾಟುವಾ, ತುಂಗಾಬಾಯಿ ರಾಯಭಾಗಿ, ಗಂಗಬಾಯಿ ಕಾಟುವಾ, ಸುಮನ್ ಬಂಡಿಗೆ, ರತ್ನಾಬಾಯಿ ಪಟ್ಟನ್, ವನಿತಾ ಬಾಕಳೆ, ಅಂಬಿಕಾ ಕಳಕುಸಾ, ಪದ್ಮಾ ಕಂಚಿ, ಶೀಲಾ ಮಿಸ್ಕಿನ್, ಜಯಶ್ರೀಬಾಯಿ, ಅಂಬಿಕಾ ನಗಾರಿ, ಶಾರದಬಾಯಿ, ಶಿಲ್ಪಾ ನಗಾರಿ, ಸುಧಾ ರಾಯಬಾಗಿ, ಲತಾ ಬದ್ದಿ, ರತ್ನಬಾಯಿ ಬಸೋದೆ, ಅನಿಲ್, ಭರತ ನಗಾರಿ, ರವಿ, ವಿನೋದ್, ಕಳಕುಸಾ, ನಟರಾಜ, ಗಿರೀಶ ಇದ್ದರು.

ಅದ್ದೂರಿ ಮೆರವಣಿಗೆ

ಗಂಗಾವತಿ: ನಗರದ ಕೊಪ್ಪಳ ರಸ್ತೆಯಲ್ಲಿನ ಅಂಬಾಭವಾನಿ ದೇವಸ್ಥಾನದಲ್ಲಿ ಸೋಮವಾರ ಸೋಮವಂಶ ಕ್ಷತ್ರೀಯ ಸಮಾಜದಿಂದ ವೀರಾರ್ಜುನ ಹಾಗೂ ಸಹಸ್ರಾರ್ಜುನ ಮಹಾರಾಜರ ಜಯಂತಿ ಆಚರಿಸಲಾಯಿತು.

ಶಾಸಕ ಪರಣ್ಣ ಮುನವಳ್ಳಿ ಮಾತನಾಡಿ, ಹಿಂದೂ ಧರ್ಮದ ರಕ್ಷಣೆಗಾಗಿ ಕ್ಷತ್ರೀಯ ಸಮಾಜ ಸಾಕಷ್ಟು ಶ್ರಮಿಸಿದ್ದು, ನಾಡಿನ ಪ್ರತಿಯೊಬ್ಬ ವ್ಯಕ್ತಿ ಹಿಂದೂ ಧರ್ಮ ರಕ್ಷಣೆಗೆ ಮುಂದಾಗಬೇಕು. ಜಯಂತಿಗಳು ಆಚರಣೆಗೆ ಸೀಮಿತವಾಗದೆ, ತತ್ವ, ಸಿದ್ದಾಂತಗಳನ್ನು ಯುವಜನಾಂಗಕ್ಕೆ ತಿಳಿಸುವ ಕೆಲಸವಾಗಬೇಕು ಎಂದು ಹೇಳಿದರು.

ವಿಧಾನ ಪರಿಷತ್ ಮಾಜಿ ಸದಸ್ಯ ಎಚ್.ಆರ್.ಶ್ರೀನಾಥ ಮಾತನಾಡಿದರು. ನಂತರ ಸಹಸ್ರಾರ್ಜುನ ಮಹಾರಾಜರ ಭಾವಚಿತ್ರವನ್ನ ನಗರದ ಚೆನ್ನಬಸವ ಸ್ವಾಮಿ ಮಠದಿಂದ ಗಾಂಧಿವೃತ್ತ, ಮಹಾವೀರವೃತ್ತದ ಮಾರ್ಗದ ಮೂಲಕ ಸಿಬಿಎಸ್ ವೃತ್ತ ಅದ್ದೂರಿ ಮೆರವಣಿಗೆ ನಡೆಯಿತು.

ಸರ್ವೇಶ್ ಮಾಂತಗೊಂಡ, ಟಿ.ಆರ್. ರಾಯಬಾಗಿ, ಟಿ.ರೇಖಾ, ಯಮುನಾ ಸಾ, ಶ್ರೀಕಾಂತ ಸಾ, ಮಾದವ ಸಾ, ಶ್ರೀಧರ ಜಡಿ, ಶ್ಯಾಮ ಸುಂದರ್, ಸುನೀಲ್ ಕಬಾಡೆ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು