6
ವಿವಿಧೆಡೆ ಒಂದು ವರ್ಷದಿಂದ ಕಳ್ಳತನ

ಸರಗಳ್ಳತನ: ಐದು ಆರೋಪಿಗಳು ವಶ

Published:
Updated:

ಕೊಪ್ಪಳ: ನಗರದ ವಿವಿಧ ಕಾಲೊನಿಗಳಲ್ಲಿ ಸರಗಳ್ಳತನ ಮಾಡಿ ತಲೆ ಮರಿಸಿಕೊಂಡಿದ್ದ ಐವರನ್ನು ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. 

ಕಳೆದ ಒಂದು ವರ್ಷದಲ್ಲಿ ವಿವಿಧಡೆ ಕಳ್ಳತನ ಮಾಡುತ್ತಿದ್ದರು. ಖಚಿತ ಮಾಹಿತಿ ಮೇರಿಗೆ ನಗರಕ್ಕೆ ಬಂದ ಮಾಹಿತಿ ದೊರೆತು ಸರಗಳ್ಳರನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಅನೂಪ್ ಎ. ಶೆಟ್ಟಿ ತಿಳಿಸಿದರು.

ನಗರದ ನಗರ ಪೊಲೀಸ್ ಠಾಣೆಯಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ಗಣೇಶ ತಗ್ಗಿನ, ಪುರುಷೋತ್ತಮ ಯಲ್ಲಪ್ಪ ಜೂಡಿ ಹಾಗೂ ಪ್ರಮೋದ ನರೇಂದ್ರಗೌಡ ಪಾಟೀಲ (ಮುಖ್ಯ ಆರೋಪಗಳು), ಸಿದ್ದರಾಮಪ್ಪ, ಕಾಳಿಪ್ರಸಾದ, ಸಂತೋಷ ಎಂಬರನ್ನು ಗುರುತರ ಆರೋಪದ ಮೇಲೆ ಬಂಧಿಸಲಾಗಿದೆ ಎಂದರು.

ಈ ಆರೋಪಿಗಳು 2017-18ರಿಂದ ಅಂದರೆ ಸುಮಾರು ಒಂದೂವರೆ ವರ್ಷಗಳಿಂದ ಸರಗಳ್ಳತನ ಮಾಡುತ್ತಿದ್ದರು, ಆರೋಪಿಗಳ ಮೇಲೆ 9 ಪ್ರಕರಣ ದಾಖಲಾಗಿಸಿದೆ. ಇವರಿಂದ 6,90 ಸಾವಿರ  ಲಕ್ಷ  ಮೌಲ್ಯದ 230 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ. ಅಲ್ಲದೆ ಕೃತ್ಯಕ್ಕೆ ಬಳಸಿಕೊಳ್ಳಲಾದ ಮೂರು ದ್ವಿ ಚಕ್ರ ವಾಹನ ವಶಕ್ಕೆ ಪಡೆಯಲಾಗಿದೆ. ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಹೆಚ್ಚಿನ ವಿಚಾರಣೆ ನಡೆಸಲಾಗಿದೆ ಎಂದು ಹೇಳಿದರು.

ಡಿವೈಎಸ್‌ಪಿ ಎಸ್.ಎಂ.ಸಂದಿಗವಾಡ, ನಗರ ಠಾಣೆಯ ಸಿಪಿಐ ರವಿ ಉಕ್ಕುಂದ ಹಾಗೂ ಸಿಬ್ಬಂದಿ ಇದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !