ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಷ್ಟಕ್ಕೆ ಸ್ಪಂದಿಸುವುದೇ ಮಾನವೀಯತೆ

ಯಲಬುರ್ಗಾ: ವಿಜಯ ಮಹಾಂತ ಸ್ವಾಮೀಜಿ ಅಭಿಮತ
Last Updated 8 ಜುಲೈ 2021, 4:13 IST
ಅಕ್ಷರ ಗಾತ್ರ

ಯಲಬುರ್ಗಾ: ‘ಲಾಕ್‍ಡೌನ್‌ನಿಂದ ಬಡಕುಟುಂಬಗಳು ತೊಂದರೆ ಅನುಭವಿಸಿವೆ. ಆರ್ಥಿಕವಾಗಿ ಸಲಬರಾಗಿದವರು ಅವರ ನೆರವಿಗೆ ಬರುತ್ತಿರುವುದು ಉತ್ತಮ ಬೆಳವಣಿಗೆ’ ಎಂದು ಕುದ್ರಿಮೋತಿಯ ಸಂಸ್ಥಾನ ಹಿರೇಮಠದ ಮೈಸೂರು ಮಠದ ವಿಜಯ ಮಹಾಂತ ಸ್ವಾಮೀಜಿ ಹೇಳಿದರು.

ತಾಲ್ಲೂಕಿನ ಮುಧೋಳ ಗ್ರಾಮದಲ್ಲಿ ದಿ. ಶಿವಮ್ಮ ಶಂಕರಗೌಡ ಉಳ್ಳಾಗಡ್ಡಿ ಅವರ ಸ್ಮರಣಾರ್ಥ ಯುವಕ ಆನಂದ ಉಳ್ಳಾಗಡ್ಡ ಆಯೋಜಿಸಿದ್ದ ತಳ್ಳು ಬಂಡಿ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಜತೆಗೆ ಮಧ್ಯಮ ವರ್ಗದ ಜನತೆಯನ್ನು ಸಹ ಕೋವಿಡ್ ಲಾಕ್‍ಡೌನ್ ಸಂಕಷ್ಟಕ್ಕೆ ತಳ್ಳಿದೆ. ಈ ಸ್ಥಿತಿಯನ್ನು ಅರಿತು ವಿವಿಧ ರೀತಿಯಲ್ಲಿ ಸಹಾಯ ಮಾಡಿದ್ದು, ಶ್ಲಾಘನೀಯ. ದಾನದ ಪ್ರವೃತ್ತಿ ಮೈಗೂಡಿಸಿಕೊಳ್ಳುವುದು ಸುಲಭವಲ್ಲ. ಅದು ಎಲ್ಲರಲ್ಲೂ ಕಾಣಸಿಗುವುದಿಲ್ಲ. ಮಾನವೀಯ ಗುಣವುಳ್ಳವರಿಗೆ ಮಾತ್ರ ಅದು ಕಂಡುಬರುತ್ತದೆ. ಇಂಥ ಗುಣಗಳಿಗೆ ಉಳ್ಳಾಗಡ್ಡಿ ಮನೆತನದವರು ಸಾಕ್ಷಿ ಎಂದರು.

ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಹಾಗೂ ಕಾಂಗ್ರೆಸ್ ಯುವ ಮುಖಂಡ ಆನಂದ ಉಳ್ಳಾಗಡ್ಡಿ ಮಾತನಾಡಿದರು.

ಗ್ರಾ.ಪಂ. ಸದಸ್ಯರಾದ ಬಸಪ್ಪ ಅಕ್ಕಿ, ಬಾಷಾಸಾಬ ಆರಬರಳ್, ಖಾದರಸಾಬ ಮುಖಂಡರಾದ ಚಂದ್ರಶೇಖರ ದೇಸಾಯಿ, ಛತ್ರಪ್ಪ ಛಲವಾದಿ, ಶಿವಾನಂದ ಬಣಕಾರ, ಕಳಕಪ್ಪ ಕುರಿ ಹಾಗೂ ಉಮೇಶ ಹವಳದ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT