ಇ-–ಸ್ಟಾಂಪಿಂಗ್ ಬಾಂಡ್ ಸೇವೆ ಪ್ರಾರಂಭ

7

ಇ-–ಸ್ಟಾಂಪಿಂಗ್ ಬಾಂಡ್ ಸೇವೆ ಪ್ರಾರಂಭ

Published:
Updated:
Prajavani

ಹನುಮಸಾಗರ: ಹನುಮಸಾಗರದ ಕನಕದಾಸ ಪತ್ತಿನ ಸೌಹಾರ್ದ ಸಹಕಾರಿ ನಿಯಮಿತ ಬ್ಯಾಂಕ್‌ನ ದೋಟಿಹಾಳ ಶಾಖೆಯಲ್ಲಿ ಸೋಮವಾರ ಇ-ಸ್ಟಾಂಪಿಂಗ್ ಬಾಂಡ್ ಸೇವೆ ಪ್ರಾರಂಭಿಸಲಾಯಿತು.

ಕೇಂದ್ರ ಕಚೇರಿ ಅಧ್ಯಕ್ಷ ಬಸವರಾಜ ಅಕ್ಕಿ ಮಾತನಾಡಿ, ’ಗ್ರಾಹಕರ, ಸಿಬ್ಬಂದಿ, ನಿರ್ದೇಶಕ ಮಂಡಳಿಯವರ ಸಹಕಾರದಿಂದ ಬ್ಯಾಂಕ್‌ ಪ್ರಗತಿಪಥದತ್ತ ಸಾಗುತ್ತಿದೆ. ಹನುಮಸಾಗರ ಸೇರಿದಂತೆ ಹೂಲಗೇರಿ, ದೋಟಿಹಾಳನಲ್ಲಿ  ಒಟ್ಟು ಮೂರು ಶಾಖೆ ತೆರೆಯಲಾಗಿದೆ. ದೋಟಿಹಾಳದಲ್ಲೂ ಇ–ಸ್ಟಾಂಪಿಂಗ್ ಬಾಂಡ್ ಸೇವೆ ಆರಂಭಿಸಲಾಗಿದೆ. ಗ್ರಾಹಕರು ಇದರ ಪ್ರಯೋಜನ ಪಡೆಯಬೇಕು‘ ಎಂದರು.

ಕೇಂದ್ರ ಕಚೇರಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ದ್ಯಾಮಣ್ಣ ಬಿಂಗಿ, ಶಾಖೆಯ ಗೌರವಾಧ್ಯಕ್ಷ ಲಾಡಸಾಬ ಕೊಳ್ಳಿ, ಅಧ್ಯಕ್ಷ ಸಂಗಯ್ಯ ಮಳಿಮಠ, ಶಾಖೆಯ ಉಪಾಧ್ಯಕ್ಷ ಶರಣಪ್ಪ ಮೇಟಿ, ಸದಸ್ಯರಾದ ಹನಮಂತಪ್ಪ ಭಜಂತ್ರಿ, ಪರಶುರಾಮನಗೌಡ ಗೌಡರ, ಬಸವರಾಜ ಜಲಕಮಲದ್ದಿನ್ನಿ, ರುದ್ರಪ್ಪ ಪಟಣ್ಣಶೆಟ್ಟಿ, ಅಮೀನಸಾಬ ಕಲಾದಗಿ, ಮುತ್ತಪ್ಪ ಬಿಂಗಿ, ಮಲ್ಲಮ್ಮ ವಡಗೇರಿ, ಶ್ವೇತಾ ಕೊಳ್ಳಿ ಇದ್ದರು.
 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !