ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿತ್ತನೆ ಬೀಜ ವಿತರಣೆ ವಿಳಂಬ: ರೈತರ ಆಕ್ರೋಶ

Published 3 ಜೂನ್ 2023, 12:18 IST
Last Updated 3 ಜೂನ್ 2023, 12:18 IST
ಅಕ್ಷರ ಗಾತ್ರ

ತಾವರಗೇರಾ: ‘ಇಲ್ಲಿಯ ರೈತ ಸಂಪರ್ಕ ಕೇಂದ್ರದಲ್ಲಿ ಪ್ರತಿ ವರ್ಷದಂತೆ ರಿಯಾಯಿತಿ ದರದಲ್ಲಿ ಮುಂಗಾರು ಹಂಗಾಮಿನ ಬಿತ್ತನೆ ಬೀಜ ವಿತರಣೆ ಮಾಡಲಾಗುತ್ತಿದೆ. ಆದರೆ, ಸಮರ್ಪಕವಾಗಿ ಬಿತ್ತನೆ ಬೀಜ ವಿತರಣೆ ಮಾಡುತ್ತಿಲ್ಲ’ ಎಂದು ರೈತರು ಆರೋಪಿಸಿದರು.

ಕೇಂದ್ರದಲ್ಲಿ ಇಲಾಖೆ ಸಿಬ್ಬಂದಿ ರೈತರ ದಾಖಲಾತಿ ಪಡೆಯುತ್ತಾರೆ. ಆದರೆ ಬೇಗ ಬಿತ್ತನೆ ಬೀಜ ನೀಡುವುದಿಲ್ಲ. ಎರಡು ಮೂರು ದಿನ ಸಾಲಲ್ಲಿ ನಿಂತರೂ ಬೀಜ ದೊರೆಯುತ್ತಿಲ್ಲ. ಇದರಿಂದ ತೊಂದರೆ ಅನುಭವಿಸುತ್ತಿದ್ದೇವೆ ಎಂದು ರೈತ ರುದ್ರಪ್ಪ ಅಕ್ಕಿ ಹೇಳಿದರು.

ಈ ವ್ಯವಸ್ಥೆಯಿಂದ ದೂರದ ಗ್ರಾಮಗಳಿಂದ ಬರುವ ರೈತರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಕೇಂದ್ರದಲ್ಲಿ ಸಮರ್ಪಕ ಸಿಬ್ಬಂದಿ ಮತ್ತು ರೈತರಿಗೆ ಅನುಕೂಲವಾಗುವಂತೆ ಸಾಲಾಗಿ ನಿಲ್ಲಲು ನೆರಳಿನ ವ್ಯವಸ್ಥೆ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT