ಗಂಗಾವತಿ: ತಾಲ್ಲೂಕಿನ ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನಾ ಮಂಡಳಿಗಳು ಶನಿವಾರ ವಿವಿಧ ಪೂಜಾ ಕಾರ್ಯಕ್ರಮಗಳು ನೆರವೇರಿಸುವ ಮೂಲಕ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಿವೆ.

ಶುಕ್ರವಾರ ಸಂಜೆ ಗಣೇಶ ಪ್ರತಿಷ್ಠಾಪನಾ ಮಂಡಳಿಗಳು ಗಣೇಶ ಮೂರ್ತಿಗಳನ್ನ ಟ್ರಾಕ್ಟರ್, ಡಿಸಿಎಂ ವಾಹನಗಳ ಮೇಲೆ ಕೂರಿಸಿಕೊಂಡು ಅದ್ದೂರಿಯಾಗಿ ಸಕಲ-ವಾದ್ಯಗಳೊಂದಿಗೆ ಮೆರವಣಿಗೆ ನಡೆಸಿದರು. ಈ ವೇಳೆಯಲ್ಲಿ ಹಿಂದು ಮಹಾಮಂಡಳಿ, ಜೆಸ್ಕಾಂ ಇಲಾಖೆ, ವಕೀಲರ ಸಂಘ, ಕಂದಾಯ ನೌಕರರ ಸಂಘದ ಸದಸ್ಯರು ಸಹ ಗಣೇಶ ಮೂರ್ತಿಯನ್ನು ಮೆರವಣಿಗೆ ಮೂಲಕ ತಂದು ಪ್ರತಿಷ್ಠಾಪಿಸಿದರು.

ಎಲ್ಲೆಲ್ಲಿ ಪ್ರತಿಷ್ಠಾಪನೆ: ಗಂಗಾವತಿ ನಗರ ಭಾಗದಲ್ಲಿ ಬಸ್ ನಿಲ್ದಾಣದ ಎದುರು, ಜಗಜೀವನರಾಂ ವೃತ್ತದ ಬಳಿ, ಗಾಂಧಿವೃತ್ತ, ವಾಲ್ಮೀಕಿ ವೃತ್ತ, ಬನ್ನಿಗಿಡದ ಕ್ಯಾಂಪ್, ಗುಂಡಮ್ಮ ಕ್ಯಾಂಪ್, ಮುರಾರಿ ಕ್ಯಾಂಪ್, ಗಣೇಶ ವೃತ್ತ, ಲಿಂಗರಾಜ್ ಕ್ಯಾಂಪ್, ಗಾಂಧಿನಗರ, ಲಕ್ಷ್ಮಿಕ್ಯಾಂಪ್ ಸೇರಿ ಇತರೆ ವಾರ್ಡ್‌ಗಳಲ್ಲಿ ಸೇರಿ 200 ಗಣೇಶ ಮೂರ್ತಿಗಳು ಪ್ರತಿಷ್ಠಾಪನೆಯಾಗಿವೆ.

ಯಾವ ಗ್ರಾಮಗಳಲ್ಲಿ ಪ್ರತಿಷ್ಠಾಪನೆ: ಗಂಗಾವತಿ ತಾಲ್ಲೂಕಿನ ಗ್ರಾಮೀಣ ಭಾಗದಲ್ಲಿ ಸಹ ಸಾಕಷ್ಟು ಗಣೇಶ ಮೂರ್ತಿಗಳು ಪ್ರತಿಷ್ಠಾಪನೆಯಾಗಿದ್ದು, ಮುಸ್ಟೂರು, ಢಣಾಪೂರ, ಮರಳಿ, ಶ್ರೀರಾಮನಗರ, ಆನೆಗೊಂದಿ, ಮಲ್ಲಾಪೂರ, ಸಣಾಪುರ, ಸಂಗಾಪುರ, ವೆಂಕಟಗಿರಿ, ವಡ್ಡರಹಟ್ಟಿ, ಬಸಾಪಟ್ಟಣ ಅದ್ದೂರಿ ಗಣೇಶ ಚತುರ್ಥಿ ನಡೆಯುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.