ಭಾನುವಾರ, 24 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಡಿತರ ಅಕ್ಕಿ ವಶ: ಎರಡು ಪ್ರತ್ಯೇಕ ಪ್ರಕರಣ ದಾಖಲು

Published 23 ಜೂನ್ 2023, 13:04 IST
Last Updated 23 ಜೂನ್ 2023, 13:04 IST
ಅಕ್ಷರ ಗಾತ್ರ

ಗಂಗಾವತಿ: ನಗರದ ಜುಲೈನಗರ, ಎಪಿಎಂಸಿ ಹೊಸ ಮಾರುಕಟ್ಟೆ ಆವರಣ ಸಮೀಪದಿಂದ ಆಕ್ರಮವಾಗಿ ಅಕ್ಕಿ ಸಾಗಾಟ ಮಾಡುವ ಖಾಸಗಿ ವಾಹನಗಳ ಮೇಲೆ ಆಹಾರ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಅಕ್ಕಿ ವಶಕ್ಕೆ ಪಡೆದಿದ್ದು, ನಗರ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ. 

ಜೂ.21ರಾತ್ರಿ 9.30ಕ್ಕೆ ಆಹಾರ ಇಲಾಖೆ ನಿರೀಕ್ಷಕಿ ಕೆ‌.ಎಂ.ನಾಗರತ್ನ ಅವರು ಅಕ್ರಮವಾಗಿ ಅಕ್ಕಿ ಸಾಗಾಟ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಆಹಾರ ಇಲಾಖೆ ದ್ವೀತಿಯ ದರ್ಜೆ ಸಹಾಯಕ ಪವನಕುಮಾರ ಸಹಯೋಗದಲ್ಲಿ ಅಮರ ಆಸ್ಪತ್ರೆ ಬಳಿ ನಿಂತಿದ್ದ ವಾಹನದ ಮೇಲೆ ದಾಳಿ ನಡೆಸಿದರು.

35 ರಿಂದ 40 ಕೆಜಿ ತೂಕದ ಮೂಟೆ ಕಟ್ಟಿದ 46 ಅಕ್ಕಿ ಚೀಲ ದೊರೆತಿದ್ದು, ಒಟ್ಟು 2,500 ಕೆ.ಜಿ ಅಕ್ಕಿ ಇದೆ. ಅಂದಾಜು ₹55ಸಾವಿರ ಎಂದು ಲೆಕ್ಕಿಸಲಾಗಿದೆ. ಚಾಲಕರು ಪರಾರಿಯಾಗಿದ್ದಾರೆ.

ಜೂ.21ರಾತ್ರಿ 9.30ಕ್ಕೆ ಆಹಾರ ಇಲಾಖೆ ನಿರೀಕ್ಷಕ ಶೇಖರಪ್ಪ ಅವರು ಆಕ್ರಮ ಅಕ್ಕಿ ಸಾಗಾಟ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ತಮ್ಮ ಸಿಬ್ಬಂದಿಯೊಂದಿಗೆ ಎಪಿಎಂಸಿ ಹೊಸ ಮಾರುಕಟ್ಟೆ ಬಳಿ ಕನಕಗಿರಿ ರಸ್ತೆಗೆ ಮುಖವಾಗಿ ನಿಂತಿದ್ದ ಪಡಿತರ ಅಕ್ಕಿ ಸಾಗಾಟ ವಾಹನದ ಮೇಲೆ ದಾಳಿ ನಡೆಸಲಾಗಿದೆ.

ದಾಳಿಯಲ್ಲಿ 40 ಕೆಜಿ ತೂಕದ ಮೂಟೆ ಕಟ್ಟಿದ 50 ಅಕ್ಕಿ ಚೀಲಗಳು ದೊರೆತಿದ್ದು, ಒಟ್ಟು 3 ಸಾವಿರ ಕೆ.ಜಿ ಬಂದಿದ್ದು, ಅಂದಾಜು ₹66 ಸಾವಿರ ಎಂದು ಲೆಕ್ಕಿಸಲಾಗಿದೆ. ಅಕ್ಕಿ ಸಾಗಾಟ ಮಾಡುವ ಚಾಲಕರು ಪರಾರಿಯಾಗಿದ್ದಾರೆ.

ಎರಡು ದಾಳಿಗಳ ಬಗ್ಗೆ ಅಧಿಕಾರಿಗಳು ನಗರಠಾಣೆಗೆ ದೂರು ಸಲ್ಲಿಸಿದ್ದು ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT