ದಕ್ಷಿಣ ಭಾರತದ ಕುಂಭಮೇಳ ಎಂದೇ ಹೆಸರಾದ ಗವಿಸಿದ್ಧೇಶ್ವರ ಮಠದ ಜಾತ್ರೆಯ ಅಂಗವಾಗಿ ಮಹಾರಥೋತ್ಸವಕ್ಕೂ ಮೊದಲು ಕೊಪ್ಪಳದ ಸುತ್ತಲಿನ ಊರುಗಳಲ್ಲಿ ಜೋಳದ ರೊಟ್ಟಿಯ ಸದ್ದು ಮಾರ್ದನಿಸುತ್ತದೆ.ಕೊಪ್ಪಳ ತಾಲ್ಲೂಕಿನ ಕಿನ್ನಾಳ, ಹಟ್ಟಿ, ಹಟ್ಟಿ ಕ್ರಾಸ್, ಇರಕಲ್ಲಗಡ ಹೀಗೆ ಅನೇಕ ಊರುಗಳಲ್ಲಿ ಜೋಳದ ರೊಟ್ಟಿಗಳನ್ನು ತಟ್ಟುವ ಮಹಿಳೆಯರು ದಿನಪೂರ್ತಿ ದುಡಿದು, ದಣಿದು ಬಂದರೂ ಗವಿಮಠದ ಜಾತ್ರೆಗೆ ರೊಟ್ಟಿ ತಟ್ಟುವ ಸೇವೆಗೆ ಮಾತ್ರ ಯಾವ ದಣಿವೂ ಸಮಸ್ಯೆಯಾಗುವುದಿಲ್ಲ. ರೊಟ್ಟಿ ಜಾತ್ರೆಯ ಸಚಿತ್ರ ವಿವರ ಈ ವಿಡಿಯೊದಲ್ಲಿ.