ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳೆ ವಿಮೆ ಹಣ ಜಮಾ ಮಾಡಿ

ರೈತ ಸಂಘದ ಜಿಲ್ಲಾ ಘಟಕದ ಪದಾಧಿಕಾರಿಗಳಿಂದ ಜಿಲ್ಲಾಧಿಕಾರಿ ವಿಕಾಸ್‌ ಸುರಳ್ಕರ್‌ಗೆ ಮನವಿ
Last Updated 19 ಜೂನ್ 2021, 4:18 IST
ಅಕ್ಷರ ಗಾತ್ರ

ಕೊಪ್ಪಳ: ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ ಅಡಿ ರಾಷ್ಟ್ರೀಕೃತ ಬ್ಯಾಂಕ್‌ನಲ್ಲಿ ರೈತರು ತುಂಬಿದ ಮುಂಗಾರು, ಹಿಂಗಾರು ಬೆಳೆ ವಿಮೆ ಹಣವನ್ನು ಖಾತೆಗೆ ಜಮಾ ಮಾಡಬೇಕು ಎಂದು ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ (ವಿ.ಆರ್.ನಾರಾಯಣರೆಡ್ಡಿ) ಜಿಲ್ಲಾ ಘಟಕದ ಅಧ್ಯಕ್ಷ ಅಂದಪ್ಪ ರುದ್ರಪ್ಪ ಕೋಳೂರ ನೇತೃತ್ವದಲ್ಲಿಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್‌ ಅವರಿಗೆ ಮನವಿ ಸಲ್ಲಿಸಲಾಯಿತು.

ಜಿಲ್ಲೆಯ ರೈತರಿಗೆ ಹೋದ ವರ್ಷದ ಬೆಳೆ ವಿಮೆ ಪಟ್ಟಿಯಲ್ಲಿಯು ಮೈನಸ್ ಮಾಡಿದ್ದಾರೆ. ಈ ವರ್ಷದ ಬೆಳೆವಿಮೆಕ್ಷೇತ್ರಪಾಲ ಪಟ್ಟಿಯಲ್ಲಿಮೈನಸ್‌ ಮಾಡಿ ಕಳಿಸಿದ್ದಾರೆ. ಜಿಲ್ಲೆಯ ಕೆಲವು ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ರೈತರಿಗೆ ಈಗಾಗಲೇ ಬೆಳೆ ವಿಮೆ ಬಂದಿದೆ. ಆದರೆ ಅರ್ಹವಾದ ರೈತರಿಗೆ ಈ ಹಣ ಬಂದಿಲ್ಲ. ನಿಜವಾದ ಬೆಳೆ ಬೆಳೆಯುವ ಜಾಗದಲ್ಲಿ ಸರ್ಕಾರ ಸುಳ್ಳು ವರದಿ ನೀಡಿದೆ. ಬೆಳೆ ಬೆಳೆಯದೇ ಇರುವ ರೈತರಿಗೆ ವಿಮೆ ಹಣ ಬಂದಿದೆ. ಈ ರೀತಿ ತಾಂತ್ರಿಕ ದೋಷ ಮಾಡುವ ಮೂಲಕ ರೈತರಿಗೆ ಅಧಿಕಾರಿಗಳು ಅನ್ಯಾಯ ಮಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ರೈತರಿಗೆ ಬೆಳೆ ವಿಮೆ ನೀಡುವಲ್ಲಿ ಸರ್ಕಾರ ಮೋಸ ಮಾಡಿದೆ. ಹೆಸರು, ಶೇಂಗಾ ಬೆಳೆಯುವ ಪ್ರದೇಶವನ್ನು ಮೆಕ್ಕೆಜೋಳ, ಸಜ್ಜೆ, ಸೂರ್ಯಕಾಂತಿ ಎಂದು ತೋರಿಸಿದೆ.ಬೆಳೆಯುವ ಭಾಗದಲ್ಲಿ ಏನೂ ಇಲ್ಲ ಎಂದು ಸೂಚಿಸುತ್ತಾರೆ.ಹೀಗೆ ಮಾಡುವುದರಿಂದ ರೈತರಿಗೆ ದಿಕ್ಕು ತೋಚದಂತಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ವಿಮಾ ಕಂಪನಿಯವರಮೇಲೆ ಏಕೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಅವರು ಪ್ರಶ್ನಿಸಿದರು.

ಕೃಷಿ ಮತ್ತು ಕಂದಾಯ ಇಲಾಖೆ ಸ್ಥಳೀಯ ಪಂಚಾಯಿತಿಗಳು ವಿಮಾ ಕಂಪನಿಗಳ ಅಧಿಕಾರಿಗಳಿಗೆ ಮಾಹಿತಿ ನೀಡಿ ಅಥವಾ ಪಡೆದು ರೈತರಿಗೆ ಬರಬೇಕಾದ ಹಣವನ್ನು ಅವರ ಖಾತೆಗೆ ನೇರವಾಗಿ ಜಮಾ ಮಾಡದೇ ಹೋದರೆ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.

ಇದರಲ್ಲಿ ಅಧಿಕಾರಿ ಮತ್ತು ಸಿಬ್ಬಂದಿಗಳ ನಿಷ್ಕ್ರೀಯತೆ, ವಿಮಾ ಕಂಪನಿಯ ಉದಾಸೀನದ ಕುರಿತು ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ರೈತ ಮುಖಂಡರಾದ ವಜೀರ್‌ಸಾಬ್‌ ತಳಕಲ್, ಯಂಕರಡ್ಡಿ ಚುಕ್ಕನಕಲ್ಲ, ಅಂದಪ್ಪ ಹುರಳಿ, ಸೈಯದ್ ಸಾಬ್ ಮುಲ್ಲಾ, ಮಾರುತಿ ಕೊಂದಿ,ಪ್ರಶಾಂತ್ ಗೌಡ ಪಾಟೀಲ,ಮರ್ದನ್ ಅಲಿ ಗೊಂಡಬಾಳ. ಶರಣಪ್ಪ ಸಣ್ಣಅಯ್ಯನಗೌಡ ಹಾಗೂ ಶಂಕ್ರಪ್ಪ ಬ ವಕ್ಕಳದ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT