ಕೊಪ್ಪಳ: ಪ್ರತಿ ಗ್ರಾಮ ತನ್ನದೇ ಆದ ಐತಿಹಾಸಿಕ ಹಾಗೂ ಸಾಂಸ್ಕೃತಿಕ ಹಿನ್ನೆಲೆ ಹೊಂದಿರುವುದು ಸಾಮಾನ್ಯ. ಅದೇ ರೀತಿ ತಾಲ್ಲೂಕಿನ ಹಲಗೇರಿ ಗ್ರಾಮವು ಗ್ರಾಮದೇವತೆ ದ್ಯಾಮವ್ವದೇವಿ ಜಾತ್ರಾ ಮಹೋತ್ಸವದ ಸಂಭ್ರಮದಲ್ಲಿ ವಿಭಿನ್ನ ಆಚರಣೆಗಳ ಮೂಲಕ ಗಮನ ಸೆಳೆಯುತ್ತಿದೆ.

ಶಾಂಭವಿ ಸೇವಾ ಟ್ರಸ್ಟ್ನ ದೇವಸ್ಥಾನದಲ್ಲಿ ದೇವಿಯ ಜಾತ್ರೆಯ ಕಾರ್ಯಕ್ರಮಗಳು ಬುಧವಾರ ಆರಂಭವಾಗಿದ್ದು ಒಟ್ಟು ಒಂಬತ್ತು ದಿನಗಳ ಕಾಲ ನಡೆಯಲಿವೆ. ಈ ಅವಧಿಯಲ್ಲಿ ಗ್ರಾಮದ ಜನ ಚಪ್ಪಲಿ ಧರಿಸುವಂತಿಲ್ಲ, ಮಾಂಸಹಾರ ಸೇವಿಸುವಂತಿಲ್ಲ. ಮದ್ಯ ಸೇವನೆ ಮಾತಂತೂ ಇಲ್ಲವೇ ಇಲ್ಲ. ಜಾತ್ರೆಯ ಧಾರ್ಮಿಕ ವಿಧಿವಿಧಾನಗಳನ್ನು ಪೂರೈಸುವ ದೇವಸ್ಥಾನದ ಅರ್ಚಕರು ಕೂಡ ಕಟ್ಟುನಿಟ್ಟಿನ ಸಂಪ್ರದಾಯ ಪಾಲನೆ ಮಾಡುತ್ತಿದ್ದು ಜಾತ್ರೆ ಮುಗಿಯುವ ತನಕ ಹಾಲು ಹಾಗೂ ಹಣ್ಣುಗಳ ಸೇವನೆ ಮಾತ್ರ ಮಾಡುತ್ತಾರೆ.

ಗ್ರಾಮದ ಜನ ಮಹಾರಥೋತ್ಸವ ಮುಗಿದು ಜಾತ್ರಾ ಕಾರ್ಯಕ್ರಮ ಸಂಪನ್ನವಾಗುವ ತನಕ ಗ್ರಾಮದಲ್ಲಿ ಧಾನ್ಯಗಳನ್ನು ಕುಟ್ಟುವುದು, ಬೀಸುವುದು ಹಾಗೂ ರೊಟ್ಟಿ ಸೇರಿದಂತೆ ಯಾವುದನ್ನೂ ತಟ್ಟುವುದು ಇಲ್ಲ. ಈ ಗ್ರಾಮದಲ್ಲಿ ಕೊಪ್ಪಳ ತಾಲ್ಲೂಕು ಸೇರಿದಂತೆ ವಿವಿಧೆಡೆ ಕಾರ್ಖಾನೆಗಳ ಕೆಲಸಕ್ಕೆ ಹೋಗುವ ಜನ ಇದ್ದಾರೆ. ಅವರು ಸಂಜೆಯಾಗುವುದರ ಒಳಗೆ ಗ್ರಾಮಕ್ಕೆ ಮರಳಿ ಬರುವ ಸಂಪ್ರದಾಯ ರೂಢಿಸಿಕೊಂಡಿದ್ದಾರೆ. ಈ ಸಂಪ್ರದಾಯ ಪಾಲನೆ ಸಲುವಾಗಿ ಅನೇಕರು ಒಂಬತ್ತು ದಿನ ರಜೆ ಪಡೆಯುತ್ತಾರೆ.

ಐತಿಹಾಸಿಕವಾಗಿ ಮಹತ್ವ ಪಡೆದಿರುವ ಹಲಗೇರಿ ಗ್ರಾಮದಲ್ಲಿ 1982ರಲ್ಲಿ ಮೊದಲ ಬಾರಿಗೆ ಗ್ರಾಮದೇವತೆ ಜಾತ್ರೆ ನಡೆದಿತ್ತು. ದೀರ್ಘ ಬಿಡುವಿನ ಬಳಿಕ 2019ರಲ್ಲಿ ಜಾತ್ರೆ ಜರುಗಿತ್ತು. ಆಗ ಗ್ರಾಮದ ಪ್ರಮುಖರು ಪ್ರತಿ ಮೂರು ವರ್ಷಗಳಿಗೊಮ್ಮೆ ಜಾತ್ರೆ ನಡೆಸಿಕೊಂಡು ಬರುತ್ತಿದ್ದು, ಕೊನೆಯ ಬಾರಿಗೆ 2022ರಲ್ಲಿ ನಡೆದಿತ್ತು. ಈಗ ಮತ್ತೆ ಜಾತ್ರೆ ಸಂಭ್ರಮ ಮನೆ ಮಾಡಿದೆ.

‘1982ರಲ್ಲಿ ಹಿಂದೆ ಜಾತ್ರೆ ನಡೆದ ಬಳಿಕ ಬಹಳಷ್ಟು ವರ್ಷ ನಡೆದಿರಲಿಲ್ಲ. ನಮ್ಮೂರಿನಲ್ಲಿ ಜಾತ್ರೆ ನಡೆಸಲೂ ಸಾಂಪ್ರದಾಯಿಕತೆ ರೂಢಿಸಿಕೊಂಡು ಬಂದಿದ್ದೇವೆ. ಗ್ರಾಮದ ಹಿರಿಯರ ಸಮ್ಮುಖದಲ್ಲಿ ದೇವಿಯ ಮೇಲೆ ಹೂ ಇರಿಸಲಾಗುತ್ತದೆ. ದೇವಿಯ ಎಡಭಾಗಕ್ಕೆ ಹೂ ಬಿದ್ದರೆ ಮಾತ್ರ ಜಾತ್ರೆ ನಡೆಸಲು ದೇವಿ ಸಮ್ಮತಿ ಕೊಟ್ಟಿದ್ದಾಳೆ ಎನ್ನುವ ನಂಬಿಕೆ ನಮ್ಮದು’ ಎಂದು ಗ್ರಾಮಸ್ಥರಾದ ದೇವೇಂದ್ರಪ್ಪ ಬಡಿಗೇರ, ಶರಣಪ್ಪ ಬಿನ್ನಾಳ ಹೇಳುತ್ತಾರೆ.

‘ಜಾತ್ರೆ ಮುಗಿಯುವ ತನಕ ಗ್ರಾಮದಲ್ಲಿ ಯಾರೂ ಚಪ್ಪಲಿ ಧರಿಸುವುದಿಲ್ಲ. ಆರೋಗ್ಯ ಸಮಸ್ಯೆ ಎದುರಿಸುತ್ತಿರುವ ಹಿರಿಯರು ಹಾಗೂ ಮಕ್ಕಳಿಗೆ ಮಾತ್ರ ಈ ಸಂಪ್ರದಾಯ ಪಾಲನೆಯಲ್ಲಿ ವಿನಾಯಿತಿ ಇರುತ್ತದೆ. ಉಳಿದವರು ಸ್ವಯಂಪ್ರೇರಿತರಾಗಿ ಸಂಪ್ರದಾಯ ಪಾಲನೆ ಮಾಡುತ್ತಾರೆ’ ಎಂದು ಗ್ರಾಮಸ್ಥರು ತಿಳಿಸಿದರು.

2019ರಿಂದ ಪ್ರತಿ ಮೂರು ವರ್ಷಗಳಿಗೊಮ್ಮೆ ಜಾತ್ರೆ ನಡೆಸಿಕೊಂಡು ಬರಲಾಗುತ್ತಿದ್ದು ಪ್ರತಿಬಾರಿಯೂ ಎಲ್ಲ ಸಂಪ್ರದಾಯ ಪಾಲಿಸಲಾಗುತ್ತಿದೆ.
ಶಂಭುಲಿಂಗನಗೌಡ ಹಲಗೇರಿ ಶಾಂಭವಿ ಸೇವಾ ಟ್ರಸ್ಟ್ ಪ್ರಮುಖ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.