ಸೋಮವಾರ, 22 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಶುಲ್ಕ ತುಂಬದ ಮುಖ್ಯಶಿಕ್ಷಕ: ವಿದ್ಯಾರ್ಥಿ ಪರೀಕ್ಷೆಯಿಂದ ವಂಚಿತ

Published 19 ಜೂನ್ 2024, 15:34 IST
Last Updated 19 ಜೂನ್ 2024, 15:34 IST
ಅಕ್ಷರ ಗಾತ್ರ

ಕುಕನೂರು: ‘ತಾಲ್ಲೂಕಿನ ಮಂಗಳೂರು ಗ್ರಾಮದ ಕೆಪಿಎಸ್‌ಸಿ ಶಾಲೆಯ ವಿದ್ಯಾರ್ಥಿಯ ಪರೀಕ್ಷೆಯ ಅರ್ಜಿಯನ್ನು ಮುಖ್ಯ ಶಿಕ್ಷಕ ಹನುಮಂತಪ್ಪ ಕುರಿ ತುಂಬದೆ  ಭವಿಷ್ಯ ಹಾಳು ಮಾಡಿದ್ದಾರೆ’ ಎಂದು ಪಾಲಕರು ಆರೋಪಿಸಿದ್ದಾರೆ.

ಎಸ್‌ಡಿಎಂಸಿ ಸದಸ್ಯ ಶರಣಪ್ಪ ಹ್ಯಾಟಿ ಮಾತನಾಡಿ, ಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆ ಎರಡರಲ್ಲಿ ಪರಶುರಾಮ್ ವಿಶ್ವನಾಥ್ ಕುರಿ ಎಂಬ ವಿದ್ಯಾರ್ಥಿ ₹680 ಪರೀಕ್ಷಾ ಶುಲ್ಕ ಕಟ್ಟಿದ್ದು, ಮುಖ್ಯ ಶಿಕ್ಷಕ ಹನುಮಂತಪ್ಪ ಕುರಿ ಅವರು ಬೇಜವಾಬ್ದಾರಿಯಿಂದ ವಿದ್ಯಾರ್ಥಿಯ ಪರೀಕ್ಷಾ ಶುಲ್ಕ ತುಂಬದೇ ಇರುವುದರಿಂದ ಪರಶುರಾಮ್ ಅವರ ಪ್ರವೇಶ ಪತ್ರ ಬಂದಿರುವುದಿಲ್ಲ.

‘ಹನುಮಂತಪ್ಪ ಸರ್ ಅವರು ಒಬ್ಬ ಜವಾಬ್ದಾರಿಯುತ ವ್ಯಕ್ತಿಯಾಗಿ ಈ ರೀತಿ ವಿದ್ಯಾರ್ಥಿಯ ಭವಿಷ್ಯ ಹಾಳು ಮಾಡಿದ್ದಲ್ಲದೆ, ಆ ವಿದ್ಯಾರ್ಥಿ ಮತ್ತು ಪಾಲಕರ ಮೇಲೆ ಬೆದರಿಕೆ ಹಾಕಿದ್ದಾರೆ. ಈ ಹಿಂದೆ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನವನ್ನು ಕೂಡ ಕೊಟ್ಟಿಲ್ಲ. ಈ ಸಂಬಂಧ ಮೇಲಧಿಕಾರಿಗಳು ಹನುಮಂತಪ್ಪ ಸರ್ ಅವರ ಮೇಲೆ ಶಿಸ್ತು ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.

ಪ್ರವೇಶ ಪತ್ರ ಕೊಡದಿದ್ದಕ್ಕೆ ವಿದ್ಯಾರ್ಥಿಯ ಪಾಲಕ ವಿಶ್ವನಾಥ್ ಹಾಗೂ ಪರಶುರಾಮ್ ಅವರು ಶಾಲೆಯ ಮುಂದೆ ಪ್ರತಿಭಟನೆ ನಡೆಸಿದರು.

ಮುಖ್ಯ ಶಿಕ್ಷಕ ಹನುಮಂತಪ್ಪ ಕುರಿ ಅವರನ್ನು ಪ್ರಜಾವಾಣಿ ಸಂಪರ್ಕಿಸಿದಾಗ ಕರೆ ಸ್ಥಗಿತಗೊಳಿಸಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ನಿಂಗಪ್ಪ ಪ್ರತಿಕ್ರಿಯಿಸಿ, ‘ಮುಖ್ಯ ಶಿಕ್ಷಕ ಹನುಮಂತಪ್ಪ ಕುರಿಯವರಿಗೆ ವಿದ್ಯಾರ್ಥಿ ಪರಶುರಾಮನ ಪರೀಕ್ಷಾ ಶುಲ್ಕ ತುಂಬದಿರುವುದಕ್ಕೆ ಶೋಕಾಸ್ ನೋಟಿಸ್ ನೀಡಲಾಗಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT