ಮಂಗಳವಾರ, 27 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಪ್ಪಳ: ರುದ್ರಪ್ಪ ಬಡಿಗೇರ ಬಣಕ್ಕೆ ಭರ್ಜರಿ ಜಯ

Published 12 ಫೆಬ್ರುವರಿ 2024, 14:41 IST
Last Updated 12 ಫೆಬ್ರುವರಿ 2024, 14:41 IST
ಅಕ್ಷರ ಗಾತ್ರ

ಕೊಪ್ಪಳ: ತೀವ್ರ ಕುತೂಹಲ ಕೆರಳಿಸಿದ್ದ ಜಿಲ್ಲಾ ವಿಶ್ವಕರ್ಮ ಸಮಾಜದ ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆಯಲ್ಲಿ ರುದ್ರಪ್ಪ ಬಡಿಗೇರ ಅವರ ಬಣಕ್ಕೆ ಭರ್ಜರಿ ಜಯವಾಗಿದೆ. ಇಲ್ಲಿನ ಶಾಸಕರ ಮಾದರಿ ಶಾಲಾ ಆವರಣದಲ್ಲಿ ಭಾನುವಾರ ನಡೆದ ಜಿಲ್ಲಾ ವಿಶ್ವಕರ್ಮ ಸಮಾಜದ ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆ ನಡೆಯಿತು.

ಒಟ್ಟು 104 ಮತದಾರರಲ್ಲಿ 103 ಜನ ಮತ ಚಲಾಯಿಸಿದರು. ಒಟ್ಟು 20 ಅಭ್ಯರ್ಥಿಗಳಲ್ಲಿ ರುದ್ರಪ್ಪ ಬಡಿಗೇರ ಅವರ ಬಣದ 11 ಜನ ಅಭ್ಯರ್ಥಿಗಳನ್ನು ಜಯ ಪಡೆದರು. ಇನ್ನೊಂದು ಬಣದಲ್ಲಿದ್ದ ಒಂಬತ್ತು ಜನರ ಪೈಕಿ ಇಬ್ಬರು ಗೆಲುವು ಸಾಧಿಸಿದರು.

ರುದ್ರಪ್ಪ ಬಣದ ಅಂಬ್ರೇಶ್ ಕೆ.ವಿಶ್ವಕರ್ಮ (74), ಈಶಪ್ಪ ಈ.ಬಡಿಗೇರ (69), ಎ.ಪ್ರಕಾಶ (76), ಕಾಳಪ್ಪ ಬಡಿಗೇರ ಕಾರಟಗಿ (72), ದೇವೇಂದ್ರಪ್ಪ ವೈ.ಬಡಿಗೇರ (76) ನಾಗೇಶಕುಮಾರ ಎಂ.ಕಂಸಾಲಿ (72), ಬಸವರಾಜ ಎಸ್.ಕೊಡೇಕಲ್ (72), ಮಂಜುನಾಥ ಎಸ್.ಪತ್ತಾರ ಗಂಗಾವತಿ (73), ಯಮನೂರಪ್ಪ ಎಂ.ಬಡಿಗೇರ, (67), ರಾಮಚಂದ್ರಪ್ಪ ಜಿ.ಬಡಿಗೇರ (74,) ಮತ್ತು ವಿರೇಶ ಪತ್ತಾರ ಕಾರಟಗಿ (74) ಮತಗಳನ್ನು ಗಳಿಸಿದರು.

ಇನ್ನೊಂದು ಬಣದಲ್ಲಿ ಮಹದೇವಪ್ಪ ಕಮ್ಮಾರ (51) ಹಾಗೂ ದೇವೇಂದ್ರಪ್ಪ ದೊಡ್ಡಬಸಪ್ಪ ಬಡಿಗೇರ್ (43) ಜಯ ಸಾಧಿಸಿದರು. ಚುನಾವಣೆ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆಯಿಂದ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT