ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಲಿಹೈದರ: ಸಂತ್ರಸ್ತ ಕುಟುಂಬಗಳಿಗೆ ಜಿಲ್ಲಾಧಿಕಾರಿ ಚೆಕ್‌ ವಿತರಣೆ

Last Updated 13 ಆಗಸ್ಟ್ 2022, 14:47 IST
ಅಕ್ಷರ ಗಾತ್ರ

ಕನಕಗಿರಿ (ಕೊಪ್ಪಳ): ತಾಲ್ಲೂಕಿನ ಹುಲಿಹೈದರ ಗ್ರಾಮದಲ್ಲಿ ನಡೆದ ಗುಂಪು ಘರ್ಷಣೆಯಲ್ಲಿ ಮೃತಪಟ್ಟ ಹಾಗೂ ಗಾಯಾಗೊಂಡವರ ಮನೆಗೆ ಜಿಲ್ಲಾಧಿಕಾರಿ ಎಂ. ಸುಂದರೇಶ ಬಾಬು ಶನಿವಾರ ಭೇಟಿ ನೀಡಿದರು.

ಗಾಯಾಳು ಧರ್ಮಣ್ಣ ಅವರ ಮನೆಗೆ ತೆರಳಿ ₹ 50 ಸಾವಿರದ ಪರಿಹಾರದ ಚೆಕ್ ವಿತರಿಸಿದರು. ಕನಕಗಿರಿಯಲ್ಲಿ ಮೂರು ತಿಂಗಳ ಕೂಸಿನೊಂದಿಗೆ ನೆಲೆಸಿರುವ ಪಾಷವಲಿ ಮಾಳಿಗದ್ದಿ ಅವರ ಪತ್ನಿಯ ಮನೆಗೆ ಭೇಟಿ ಕೊಟ್ಟರು.

ನಂತರ ಪತ್ರಕರ್ತರ ಜತೆಗೆ ಮಾತನಾಡಿ ‘ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಯಂಕಪ್ಪ ತಳವಾರ ಅವರಿಗೆ ₹4.22 ಲಕ್ಷ ಹಾಗೂ ಧರ್ಮಣ್ಣ ಹರಿಜನ ₹50 ಸಾವಿರ ಪರಿಹಾರ ನೀಡಲಾಗಿದೆ. ಪಾಷವಲಿ ಅವರಿಗೆ ಕಾರ್ಮಿಕ ಇಲಾಖೆಯ ವತಿಯಿಂದ ₹70 ಸಾವಿರ ಕೊಡಲಾಗುವುದು’ ಎಂದರು.

‘ಗ್ರಾಮದಲ್ಲಿ ಅಹಿತಕರ ಘಟನೆ ನಡೆಯಬಾರದಿತ್ತು, ಈ ಘಟನೆಗೆ ಕಾರಣರಾದವರನ್ನು ಬಂಧಿಸಲು ಪೊಲೀಸ್ ಇಲಾಖೆ ಸೂಕ್ತ ಕ್ರಮ ತೆಗೆದುಕೊಳ್ಳಲಿದೆ. ಊರು ಬಿಟ್ಟವರು ಬೇಗನೆ ಗ್ರಾಮಕ್ಕೆ ಬಂದು ಧೈರ್ಯದಿಂದ ಜೀವನ ಸಾಗಿಸಬೇಕು’ ಎಂದು ಹೇಳಿದರು.

ಉಪ ವಿಭಾಗಾಧಿಕಾರಿ ಬಸವಣೆಪ್ಪ ಕಲ್ಲಶೆಟ್ಟಿ, ತಹಶೀಲ್ದಾರ್ ಎಂ.ಧನಂಜಯ ಮಾಲಗಿತ್ತಿ , ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಹೊನ್ನೂರುಸಾಬ, ಇಒ ಕಾವ್ಯಾರಾಣಿ, ಡಿವೈಎಸ್ ಪಿ ರುದ್ರೇಶ ಉಜ್ಜನಿಕೊಪ್ಪ, ಪೊಲೀಸ್‌ ಇನ್‌ಸ್ಟೆಕ್ಟರ್‌ ಪರಸಪ್ಪ ಭಜಂತ್ರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT