ಸೋಮವಾರ, ಜನವರಿ 20, 2020
27 °C

ಕಲಾವಿದರ ಆಯ್ಕೆಗೆ ಸಂದರ್ಶನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೊಪ್ಪಳ: ಆನೆಗೊಂದಿ ಉತ್ಸವ ಆಚರಣೆ ಕಾರ್ಯಕ್ರಮದಲ್ಲಿ ನಡೆಯಲಿರುವ ವಿವಿಧ ಕಲಾ ಪ್ರಕಾರಗಳಲ್ಲಿ ಅರ್ಜಿ ಸಲ್ಲಿಸಿರುವ ಕಲಾವಿದರಿಗೆ ಸಂದರ್ಶನವನ್ನು ಡಿ.11 ರಿಂದ 14 ರವರೆಗೆ ಬೆಳಿಗ್ಗೆ 11 ಗಂಟೆಗೆ ಸಾಹಿತ್ಯ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ.

11 ರಂದು ಸುಗಮ ಸಂಗೀತಾ ಹಾಗೂ ವಚನ ಸಂಗೀತ, ಡಿ.12 ರಂದು ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ಹಾಗೂ ವಾದ್ಯ ಸಂಗೀತ, 13 ರಂದು ಜಾನಪದ ಸಂಗೀತ ಮತ್ತು 14 ರಂದು ಸಮೂಹ, ಜಾನಪದ, ಶಾಸ್ತ್ರೀಯ ನೃತ್ಯ. ಸಾಮಾಜಿಕ, ಐತಿಹಾಸಿಕ ನಾಟಕ ಹಾಗೂ ತೊಗಲುಗೊಂಬೆಯಾಟ ಕಲಾ ತಂಡಗಳಿಗೆ ಪ್ರತಿ ದಿನ ಬೆಳಿಗ್ಗೆ 11 ಗಂಟೆಗೆ ಸಂದರ್ಶನ ನಡೆಯಲಿದೆ.

ಅರ್ಜಿ ಸಲ್ಲಿಸಿರುವ ಕಲಾವಿದರು ತಮ್ಮ ಸಹವಾದ್ಯಗಾರರೊಂದಿಗೆ ವಾದ್ಯಗಳ ಸಮೇತ ಸ್ವ-ಇಚ್ಛೆಯಿಂದ ಭಾಗವಹಿಸಬೇಕು ಎಂದು ಇಲಾಖೆ ಸಹಾಯಕ ನಿರ್ದೇಶಕ ಸಿದ್ಧಲಿಂಗೇಶ ಕೆ.ರಂಗಣ್ಣನವರ ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು