ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕನಕಗಿರಿ | ಯುವತಿ ಆತ್ಮಹತ್ಯೆ: ಕಿರುಕುಳ ಆರೋಪ

Published 17 ಜೂನ್ 2024, 3:15 IST
Last Updated 17 ಜೂನ್ 2024, 3:15 IST
ಅಕ್ಷರ ಗಾತ್ರ

ಕನಕಗಿರಿ: ಸಮೀಪದ ವರ್ನ್ ಖೇಡ ಗ್ರಾಮದ ಅಂಗನವಾಡಿ ಸಹಾಯಕಿ ಭೀಮಮ್ಮ (25) ಎಂಬುವವರು ಆತ್ಮಹತ್ಯೆ ಮಾಡಿಕೊಂಡ ಘಟನೆ ಭಾನುವಾರ ನಡೆದಿದೆ.

ಮದುವೆಯಾಗುವುದಾಗಿ ನಂಬಿಸಿ ಕಳೆದ ಎರಡು ತಿಂಗಳ ಹಿಂದೆ ಲೈಂಗಿಕ ದೌರ್ಜನ್ಯಕ್ಕೆ ಈ ಯುವತಿ ಒಳಗಾಗಿದ್ದಳು.

ಮದುವೆಯಾಗುವುದಾಗಿ ನಂಬಿಸಿ ಗ್ರಾಮದ ಮಂಜುನಾಥ ಹಂಚಿನಾಳ ಎಂಬುವವರು ಗರ್ಭಿಣಿ ಮಾಡಿ ಗರ್ಭಪಾತ ಮಾಡಿಸಿದ ಬಗ್ಗೆ ಮೃತಪಟ್ಟ ಯುವತಿ ದೂರು ನೀಡಿದ್ದ ಪರಿಣಾಮ ಮಂಜುನಾಥ, ಯಂಕೋಬ, ಶಂಕ್ರಮ್ಮ, ಹನುಮೇಶ ಅವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ‌ ಕಳಿಸಲಾಗಿತ್ತು.

‘ಈಚೆಗೆ ಜಾಮೀನು ಪಡೆದುಕೊಂಡು‌ ಹೊರ ಬಂದಿದ್ದ ನಾಲ್ವರೂ ಭೀಮಮ್ಮ ಅವರಿಗೆ ಮಾನಸಿಕ‌ ಕಿರುಕುಳ, ಬೆದರಿಕೆಯೊಡ್ಡಿದ ಕಾರಣ ಮಗಳು ನೇಣು ಬೀಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ’ ಎಂದು ಮೃತಳ ತಾಯಿ ಯಮನಮ್ಮ ದೂರು‌ ನೀಡಿದ್ದು ನಾಲ್ಕು ಜನರ ಮೇಲೆ ಪ್ರಕರಣ ದಾಖಲಾಗಿದೆ ಎಂದು ಪಿಐ ಎಂ.ಡಿ.‌ಫೈಜುಲ್ಲಾ ತಿಳಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT