ಕೊಪ್ಪಳ: ಇಲ್ಲಿನ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ಗವಿಮಠದ ಆವರಣದಲ್ಲಿ ಶ್ವಾನ ಪ್ರದರ್ಶನ ನಡೆಯಿತು. ಶ್ವಾನಗಳು ತಮ್ಮ ಸಾಹಸ, ಬುದ್ಧಿವಂತಿಕೆ ಮತ್ತು ಕೌಶಲ್ಯವನ್ನು ಪ್ರದರ್ಶಿಸಿ, ನೆರೆದಿದ್ದ ನೂರಾರು ಸಂಖ್ಯೆಯ ಸಾರ್ವಜನಿಕರನ್ನು ಆಶ್ಚರ್ಯಚಕಿತಗೊಳಿಸಿದವು.

ಕಾವಲು ಕಾಯುವ ಕಾರ್ಯ, ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಗೂ ಜೈಲಿಗೆ ಕರೆದುಕೊಂಡು ಹೋಗುವಾಗ ಆರೋಪಿ ತಪ್ಪಿಸಿಕೊಂಡಾಗ ಶ್ವಾನ ಪತ್ತೆ ಹಚ್ಚುವ ವೈಖರಿಯ ಪ್ರದರ್ಶನ ನಡೆಯಿತು. ಸಿಂಧು ಶ್ವಾನದಿಂದ ಕಳ್ಳತನ ಮಾಡಿದವರನ್ನು, ಕೊಲೆ ಪ್ರಕರಣ ಪತ್ತೆ ಹಚ್ಚುವ ಕಾರ್ಯ ಮಾಡಿತು. ಬಳ್ಳಾರಿಯ ವಲಯ ಮಟ್ಟದಲ್ಲಿ ಚಿನ್ನದ ಪದಕ ಪಡೆದ ಬಿಂದು ಶ್ವಾನ ಸ್ಫೋಟಕ ವಸ್ತುಗಳನ್ನು ಇಟ್ಟುಕೊಂಡ ವ್ಯಕ್ತಿಯನ್ನು ಪತ್ತೆ ಹಚ್ಚಿತು. ಕರ್ತವ್ಯದಲ್ಲಿ ಸಿಬ್ಬಂದಿ ವಸ್ತುಗಳನ್ನು ಕಳೆದುಕೊಂಡರೆ ಪುನಃ ಅದೇ ಮಾರ್ಗದ ಮೂಲಕ ವಸ್ತುಗಳನ್ನು ಪತ್ತೆ ಹಚ್ಚುವ ಪ್ರಾತ್ಯಕ್ಷಿಕೆ ನಡೆಯಿತು.

ಪ್ರದರ್ಶನದಲ್ಲಿ ಶ್ವಾನಗಳು ಓಡಾಟ, ಆಜ್ಞೆ ಪಾಲನೆ, ಚುರುಕುತನ ಮತ್ತು ತರಬೇತಿ ಪಡೆದ ಕೌಶಲಗಳನ್ನು ಪ್ರದರ್ಶಿಸಿದವು. ಶ್ವಾನಗಳ ಬುದ್ದಿವಂತಿಕೆ ಹಾಗೂ ಚುರುತನಕ್ಕೆ ಪ್ರೇಕ್ಷಕರು ಚಪ್ಪಾಳೆ ತಟ್ಟಿ ಮೆಚ್ಚುಗೆ ವ್ಯಕ್ತಪಡಿಸಿದರು.

ಗಮನ ಸೆಳೆದ ಕರಾಟೆ: ಗವಿಮಠದ ಆವರಣದಲ್ಲಿ ನಡೆದ ಕರಾಟೆ ಪಟುಗಳ ಸಾಹಸ ಪ್ರದರ್ಶನಕ್ಕೆ ಸೇರಿದ್ದ ಜನರು ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸಿದರು. ಕರಾಟೆ ಪಟು ಮನೀಷಾ ಅವರು, ಪ್ರಾಣ ಶಕ್ತಿಯ ಮೂಲಕ ಎದುರಾಳಿಯನ್ನು ಎದುರಿಸುವ ಪ್ರದರ್ಶನ ಮಾಡಿದರು.

ಜೆಸ್ಕಾಂ ಇಲಾಖೆಯ ಇಇ ಮೋಟ್ಲಾ ನಾಯ್ಕ್ ಅವರು ಕರಾಟೆ ಪ್ರದರ್ಶನಕ್ಕೆ ಚಾಲನೆ ನೀಡಿದರು. ಪಾಟಿಕಲ್ಲು ಮತ್ತು ಹೆಂಚುಗಳನ್ನು ಒಡೆಯುವ ಸಾಹಸ ಕಲೆಗಳನ್ನು ಪ್ರದರ್ಶಿಸಿ ಪ್ರೇಕ್ಷಕರು ಹುಬ್ಬೇರಿಸುವಂತೆ ಮಾಡಿದರು. ಸ್ಪರ್ಧಾಳುಗಳು ತಮ್ಮಲ್ಲಿರುವ ಕೌಶಲವನ್ನು ಹೊರಹಾಕಿದರು. ಸ್ಪರ್ಧೆಯಲ್ಲಿ ಅವರ ಪಂಚ್ ಮತ್ತು ಕಿಕ್ ಗಳನ್ನು ಪ್ರೇಕ್ಷಕರನ್ನು ಚಪ್ಪಾಳೆ ತಟ್ಟುವಂತೆ ಮಾಡುತ್ತಿದ್ದವು..

ಬೆಂಕಿ ಹಚ್ಚಿದ ಹೆಂಚುಗಳನ್ನು ಒಡೆಯುವ ಜಬುವುಲ್ಲಾ ಅವರು ತಮ್ಮ ಸಾಹಸವನ್ನು ಸಾದರಪಡಿಸಿದರು. ಹೊಟ್ಟೆಯ ಮೇಲೆ ಕಲ್ಲು ಒಡೆಯುವುದು, ಹೆಂಚು ಒಡೆಯುವುದು, ಕಟ್ಟಿಗೆಗಳನ್ನು ಮುರಿಯುವುದು, ಬೆಂಕಿ ಮತ್ತು ಸಾಹಸಮಯ ಕಸರತ್ತುಗಳು ನೋಡುಗರನ್ನು ರೋಮಾಂಚನ ಗೊಳಿಸಿತು .

ವಿಭಿನ್ನ ಬಗೆಯ ಗಾರುಡಿ ಗೊಂಬೆಗಳ ಮುಖವಾಡವನ್ನು ಹೊತ್ತು ಕುಣಿದು ಕುಪ್ಪಳಿಸಿದ ನೋಟ ಜನತೆಗೆ ಸಖತ್ ಮನರಂಜನೆಯ ರಸಸ್ವಾದ ನೀಡಿ ರಂಜಿಸಿದವು. ಹಲಗೆ ವಾದ್ಯದ ನಾದಕ್ಕೆ ತಕ್ಕಂತೆ ಗೊಂಬೆಗಳು ಕುಣಿದಾಡಿ ನೋಡುಗರ ಕಣ್ಮನ ಸೆಳೆದವು.

ಭೂಮಿ ಕರಾಟೆ ಫೌಂಡೇಷನ್, ಪೆಂಕಾಕ್ ಸಿಲತ್ ಸಂಸ್ಥೆ ಹಾಗೂ ಕೊಪ್ಪಳ ಜಿಲ್ಲಾ ಕರಾಟೆ ಶಿಕ್ಷಕರ ಸಂಘದಿಂದ ಕರಾಟೆ ಸಾಹಸ ಪ್ರದರ್ಶನ ಜರುಗಿತು.

ಆರು ವರ್ಷಗಳಿಂದ ಗವಿಮಠ ಸ್ವಾಮೀಜಿ ನಮಗೆ ಕರಾಟೆ ಪ್ರದರ್ಶನ ನೀಡಲು ಅವಕಾಶ ಮಾಡಿಕೊಟ್ಟಿದ್ದಾರೆ. ನಮ್ಮನ್ನು ನಾವು ರಕ್ಷಿಸಿಕೊಳ್ಳಲು ಸಾಹಸ ಕೌಶಲಗಳು ಕಲಿಯುವುದು ಅಗತ್ಯವಿದೆ.
ಮೌನೇಶ ಶಂಕ್ರಪ್ಪ ವಡ್ಡಟ್ಟಿ ಕರಾಟೆ ಕೋಚ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.