ಕೊಪ್ಪಳ: ಪರಿಸರಕ್ಕೆ ಮಾಲಿನ್ಯ ಉಂಟು ಮಾಡುತ್ತಿರುವ ಕಾರ್ಖಾನೆಗಳ ವಿಸ್ತರಣೆಗೆ ವಿರೋಧಿಸಿ ನಗರದಲ್ಲಿ ನಡೆಯುತ್ತಿರುವ ಅನಿರ್ದಿಷ್ಟ ಹೋರಾಟ ಮಂಗಳವಾರ 89 ದಿನಗಳನ್ನು ಪೂರ್ಣಗೊಳಿಸಿತು.

ಗವಿಸಿದ್ದೇಶ್ವರ ಬಿ.ಎಡ್. ಕಾಲೇಜು ಅಧ್ಯಾಪಕಿ ಕೆ. ಕವಿತಾ ಮಾತನಾಡಿ ‘ಈಗಾಗಲೇ ಧಾರಣ ಸಾಮರ್ಥ್ಯ ಮೀರಿ ಕಾರ್ಖಾನೆಗಳನ್ನು ಇಲ್ಲಿ ಸ್ಥಾಪಿಸಲಾಗಿದೆ. ಕಾರ್ಖಾನೆಗಳು ಎಗ್ಗಿಲ್ಲದೆ ಮಾಲಿನ್ಯ ಮಾಡಿದ್ದರಿಂದ ನಾವು ಕುಡಿಯುವ ತುಂಗಭದ್ರಾ ನೀರು ವಿಷವಾಗಿದೆ. ಜನರ ಆರೋಗ್ಯ, ಜೀವ, ಪರಿಸರ ಉಳಿಸಿಕೊಳ್ಳಲು 2025ರ ಫೆಬ್ರವರಿ 24ರಂದು ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ನೇತೃತ್ವದಲ್ಲಿ ನಡೆಸಿದ ಹೋರಾಟ ಗೆಲ್ಲಲು ದಾರಿದೀಪವಾಗಿದೆ’ ಎಂದರು.

ಜಿಲ್ಲಾ ಬಚಾವೋ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ವೇದಿಕೆ ಇದರ ಜಂಟಿ ಕ್ರಿಯಾ ವೇದಿಕೆ ನೇತೃತ್ವದಲ್ಲಿ ಬಲ್ಡೋಟ, ಕಿರ್ಲೋಸ್ಕರ್, ಕಲ್ಯಾಣಿ ಸ್ಟೀಲ್, ಮುಕುಂದ ಸುಮಿ, ಸಿಂಡಿಯಾ, ಅಲ್ಟ್ರಾಟೆಕ್, ಕೆ.ಪಿ.ಆರ್. ಕೆಮಿಕಲ್ಸ್ ಕಾರ್ಖಾನೆಗಳ ವಿಸ್ತರಣೆ ವಿರೋಧಿಸಿ ಹೋರಾಟ ನಡೆಸುತ್ತಿವೆ.

ಬಿ.ಎಡ್. ಕಾಲೇಜು ಪ್ರಾಧ್ಯಾಪಕ ಎಸ್.ಎನ್. ಪೂಜಾರ, ರಾಜ್ಯ ರೈತ ಸಂಘದ ರಾಜ್ಯ ಮುಖಂಡ ಆರ್.ಮಾಧವ ರೆಡ್ಡಿ ಕರೂರು, ಕೃಷಿ ಬೆಲೆ ಆಯೋಗದ ಸದಸ್ಯ ಡಿ.ಎಚ್. ಪೂಜಾರ, ನಿವೃತ್ತ ಪ್ರಾಚಾರ್ಯ ಎಸ್.ಬಿ.ರಾಜೂರು, ಸಾಹಿತಿ ಎ.ಎಂ. ಮದರಿ, ಪ್ರಧಾನ ಸಂಚಾಲಕ ಅಲ್ಲಮಪ್ರಭು ಬೆಟ್ಟದೂರು, ಸಂಚಾಲಕರಾದ ಮಲ್ಲಿಕಾರ್ಜುನ ಬಿ. ಗೋನಾಳ, ಜಿ.ಬಿ. ಪಾಟೀಲ್, ಬಿ.ಜಿ. ಕರಿಗಾರ, ಶಿವಪ್ಪ ಜಲ್ಲಿ, ವಿಜಯ ಮಹಾಂತೇಶ ಹಟ್ಟಿ, ರೈತ ಮುಖಂಡರಾದ ಕೆ.ಬಸವರೆಡ್ಡಿ, ಬಿ. ನಾಗರಾಜ ಚಾನಾಳ, ಭೀಮ ಕರೂರು ಹಾಗೂ ಗವಿಸಿದ್ದೇಶ್ವರ ಬಿ.ಎಡ್. ಕಾಲೇಜು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.