ಶುಕ್ರವಾರ, ಸೆಪ್ಟೆಂಬರ್ 24, 2021
23 °C

ಕೋಟಿ ವೃಕ್ಷ ನಾಟಿ ಅಭಿಯಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವಲಹಳ್ಳಿ (ಕುಷ್ಟಗಿ): ಗ್ರಾಮದಲ್ಲಿ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಹಾಗೂ ಸಾಂಸ್ಕೃತಿಕ ಸಂಘದ ವತಿಯಿಂದ ಸೋಮವಾರ ‘ಕೋಟಿ ವೃಕ್ಷ ನಾಟಿ ಅಭಿಯಾನ’ ನಡೆಯಿತು.

ಪ್ರಗತಿಪರ ರೈತ ದೇವೇಂದ್ರಪ್ಪ ಬಳೂಟಗಿ ಸಸಿಗಳಿಗೆ ನೀರೆರೆಯುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿದರು.

ಇದೇ ಸಂದರ್ಭದಲ್ಲಿ ಅನೇಕ ರೈತರಿಗೆ ಸಸಿಗಳನ್ನು ವಿತರಿಸಲಾಯಿತು.

ಕೋಟಿ ವೃಕ್ಷ ಅಭಿಯಾನದ ಕುರಿತು ಜಗದೀಶ ಹಿರೇಮಠ ಮಾಹಿತಿ ನೀಡಿದರು. ಬಸನಗೌಡ ಪಾಟೀಲ ಅಧ್ಯಕ್ಷತೆ ವಹಿಸಿದ್ದರು.

ಸಂಸ್ಥೆಯ ಜಿಲ್ಲಾ ಸಂಯೋಜಕಿ ಭಾಗ್ಯಶ್ರೀ, ರೇಖಾ ಹಿರೇಮಠ, ಬೆಟ್ಟಪ್ಪ, ಪರಶುರಾಮ ಹಾಗೂ ಇತರರು ಇದ್ದರು.

ತಾಲ್ಲೂಕು ಸಂಯೋಜಕ ಬಸವರಾಜ ನಿರೂಪಿಸಿದರು. ಗ್ಯಾನಪ್ಪ ತಳವಾರ ಸ್ವಾಗತಿಸಿದರು. ಬುಡ್ಡನಗೌಡ ತಳವಾರ ವಂದಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.