ಬುಧವಾರ, ಜುಲೈ 28, 2021
22 °C

ಗಂಗಾವತಿ: ಸಹಕಾರ ಸಂಘದ ಕಟ್ಟಡಕ್ಕೆ ಭೂಮಿಪೂಜೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗಂಗಾವತಿ: ತಾಲ್ಲೂಕಿನ ಚಿಕ್ಕಜಂತಕಲ್ ಗ್ರಾಮದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಕಟ್ಟಡ ಕಾಮಗಾರಿಗೆ ಶಾಸಕ ಬಸವರಾಜ ದಢೇಸೂಗೂರು ಭಾನುವಾರ ಭೂಮಿಪೂಜೆ ನೆರವೇರಿಸಿದರು.

ಶಾಸಕ ಬಸವರಾಜ ದಢೇಸೂಗೂರು ಮಾತನಾಡಿ ಸಹಕಾರ ಸಂಘದ ಕಟ್ಟಡ ಕಾಮಗಾರಿಯಲ್ಲಿ ಗುಣಮಟ್ಟ ಕಾಯ್ದುಕೊಳ್ಳುವಂತೆ ಗುತ್ತಿಗೆದಾರರಿಗೆ ಸೂಚಿಸಿದರು. ಗ್ರಾಮಸ್ಥರು ಕೂಡ ಕೋವಿಡ್ ಕುರಿತು ಜಾಗೃತಿ ವಹಿಸಬೇಕು. ಅನಾವಶ್ಯಕವಾಗಿ ಯಾರು ತಿರುಗಾಡಬಾರದು ಎಂದರು.

ಕಾಡಾ ಅಧ್ಯಕ್ಷ ತಿಪ್ಪೇರುದ್ರಸ್ವಾಮಿ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಟಾರಿ ಜಗನ್ನಾಥ್, ಪ್ರಮುಖರಾದ ಸತ್ಯನಾರಾಯಣ, ಬಿ.ರಾಜಶೇಖರ್, ಗಂಗಮ್ಮ, ಶಿವಕುಮಾರ್, ಶರಣಯ್ಯ ಸ್ವಾಮಿ, ಬಿ.ಮಂಜುನಾಥ್, ಯಮನೂರ, ರಾಘವೇಂದ್ರ ಕುಲಕರ್ಣಿ, ಸೋಮನಗೌಡ, ಕನಕರಾಯ, ಯಲ್ಲಪ್ಪ ಎಸ್, ಲಕ್ಷ್ಮಣ ಹಾಗೂ ದುರುಗಪ್ಪ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.